'ದೇಹ ತೋರಿಸುವುದು..?' ಕಪ್ಪು ಕೋಟ್​ ಧರಿಸಿ ಶಾಕ್​ ನೀಡಿದ ಸಮಂತಾಗೆ ಅಭಿಮಾನಿಗಳು ಕೊಟ್ಟ ಉತ್ತರ..!

samantha
Published on

ಹೈದರಾಬಾದ್​: ಸಮಂತಾ ಇತ್ತೀಚೆಗೆ ಸಿನಿಮಾಗಳಲ್ಲಿ ನಟಿಸುವುದನ್ನು ಕಡಿಮೆ ಮಾಡಿದ್ದರೂ ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರೀಯರಾಗಿದ್ದಾರೆ. ಇದರ ಜೊತೆಗೆ ತನ್ನ ವಿಭಿನ್ನ ಫ್ಯಾಷನ್ ಆಯ್ಕೆಗಳಿಂದ ಗಮನ ಸೆಳೆಯುತ್ತಿದ್ದಾರೆ. ಅದೇ ರೀತಿ ಈ ತಾರೆಯ ಹೊಸ ಫೋಟೋ ಶೂಟ್ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ವೇಳೆ ಸಮಂತಾ ಕಪ್ಪು ಬಟ್ಟೆಯಲ್ಲಿ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.

ಸಮಂತಾ ಕೇವಲ ಕೋಟ್ ಮತ್ತು ಪ್ಯಾಂಟ್‌ನೊಂದಿಗೆ ಕಾಣಿಸಿಕೊಂಡಿದ್ದಾರೆ. ಶರ್ಟ್‌ಲೆಸ್‌ ಲುಕ್ ಅನ್ನು ಹೈಲೈಟ್ ಮಾಡಲು ಲೂಸ್ ಪ್ಯಾಂಟ್‌ ಆಯ್ಕೆ ಮಾಡಿಕೊಂಡಿದ್ದಾರೆ. ಪಳಪಳ ಹೊಳೆಯುವ ವಸ್ತ್ರ ಧರಿಸಿದ್ದು ಜಾಕೆಟ್ ಪಾಕೆಟ್ಸ್ ಮತ್ತು ದೊಡ್ಡ ಗುಂಡಿಗಳನ್ನು ಹೊಂದಿದೆ. ಆಕೆ ಗುಸ್ಸಿ ಬ್ರಾಂಡ್ ಧರಿಸಿದ್ದಾರೆ.

ಸರಳವಾದ ಮೇಕಪ್ ನಂತರ ಬೆಳ್ಳಿಯ ಪ್ಲಾಟಿನಂ ಆಭರಣಗಳೊಂದಿಗೆ ಕಾಣಿಸಿಕೊಂಡಿರುವುದರ ಹಿಂದೆ ಸೆಲೆಬ್ರಿಟಿ ಸ್ಟೈಲಿಸ್ಟ್ ಮತ್ತು ಫ್ಯಾಷನ್ ಡಿಸೈನರ್ ಪ್ರೀತಮ್ ಜುಕಲ್ಕರ್ ಇದ್ದಾರೆ.

ಸಮಂತಾ ಹೊಸ ಅವತಾರಕ್ಕೆ ಸಾಮಾಜಿಕ ಮಾಧ್ಯಮಗಳಲ್ಲಿ ಹಲವರು ಕಾಮೆಂಟ್ ಮಾಡುತ್ತಿದ್ದಾರೆ. ಇದು ಎಷ್ಟು ಸ್ಟೈಲಿಶ್, ಎಷ್ಟು ಸುಂದರ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಆದರೆ ಕೆಲವರು ಶರ್ಟ್ ಲೆಸ್ ಬಟ್ಟೆಯಾ? ಎಂದು ಟೀಕೆ ಮಾಡುತ್ತಿದ್ದಾರೆ. ಫೋಟೋ ಶೂಟ್ ಗೆ ದೇಹ ತೋರಿಸುವುದು ಒಳ್ಳೆಯದಲ್ಲ ಎಂದು ಫೋಟೋ ಕೆಳಗೆ ಕಮೆಂಟ್ ಗಳು ಬರುತ್ತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net