More

    IPLನಲ್ಲಿ ಅತಿ ಹೆಚ್ಚು ಪಂದ್ಯ ಸೋತ ಆಟಗಾರ ವಿರಾಟ್ ಕೊಹ್ಲಿ; ಕೆಟ್ಟ ದಾಖಲೆಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ ಸ್ಟಾರ್​ ಕ್ರಿಕೆಟಿಗರು

    ನವದೆಹಲಿ: ಕಿಂಗ್ ಕೊಹ್ಲಿ ಮೈದಾನಕ್ಕಿಳಿದರೆ ದಾಖಲೆಗಳು ಮುರಿಯುತ್ತವೆ.  ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ  ಅವರು ಗರಿಷ್ಠ ರನ್ ಮತ್ತು ಚೇಸಿಂಗ್‌ನಲ್ಲಿ ಶತಕಗಳಂತಹ ಅನೇಕ ದಾಖಲೆಗಳನ್ನು ಮುರಿದಿದ್ದಾರೆ. ಆದರೆ.. ಅವರ ಖಾತೆಯಲ್ಲಿ ಕೆಟ್ಟ ದಾಖಲೆಯೊಂದು ಸೇರ್ಪಡೆಯಾಗಿದೆ.

    ಇದುವರೆಗೂ ಯಾವುದೇ ಆಟಗಾರನು ಬಯಸದ ಒಂದು ದಾಖಲೆ ಇದಾಗಿದೆ. ಐಪಿಎಲ್‌ನಲ್ಲಿ ಅತಿ ಹೆಚ್ಚು ಪಂದ್ಯಗಳಲ್ಲಿ ಸೋತ ಆಟಗಾರ ಎನಿಸಿಕೊಂಡಿದ್ದಾರೆ. ಮಂಗಳವಾರದಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಲಕ್ನೋ ಸೂಪರ್‌ಜೈಂಟ್ಸ್ ತಂಡವು 28 ರನ್‌ಗಳಿಂದ ಸೋತ ಕಾರಣ ವಿರಾಟ್ ಈ ಕೆಟ್ಟ ದಾಖಲೆಗಳ ಪಟ್ಟಿಯಲ್ಲಿ ಮತ್ತಷ್ಟು ಸ್ಥಾನ ಪಡೆದಿದ್ದಾರೆ.

    ಐಪಿಎಲ್‌ನಲ್ಲಿ ಅತಿ ಹೆಚ್ಚು ಪಂದ್ಯಗಳಲ್ಲಿ ಸೋತಿರುವ ಆಟಗಾರರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಮತ್ತು ದಿನೇಶ್ ಕಾರ್ತಿಕ್ ಮೊದಲ ಎರಡು ಸ್ಥಾನಗಳನ್ನು ಪಡೆದುಕೊಂಡಿದ್ದಾರೆ. ವಿರಾಟ್ ಕೊಹ್ಲಿ ಇದುವರೆಗೆ 120 ಪಂದ್ಯಗಳ ಸೋಲುಗಳಲ್ಲಿ ಭಾಗಿಯಾಗಿದ್ದಾರೆ. ಅವರ ನಂತರ ದಿನೇಶ್ ಕಾರ್ತಿಕ್ 118 ಸೋಲುಗಳೊಂದಿಗೆ ಎರಡನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಇವರಿಬ್ಬರ ನಂತರ ಮುಂಬೈ ಇಂಡಿಯನ್ಸ್ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ (112 ಪಂದ್ಯ) ಮೂರನೇ ಸ್ಥಾನದಲ್ಲಿದ್ದಾರೆ.   

    2008ರಲ್ಲಿ ಐಪಿಎಲ್ ಆರಂಭವಾದಾಗಿನಿಂದ ವಿರಾಟ್ ಕೊಹ್ಲಿ ಆಡುತ್ತಿದ್ದಾರೆ. 17 ವರ್ಷಗಳ ಕಾಲ ಒಂದೇ ತಂಡದ ಪರ ಆಡಿದ ಏಕೈಕ ಆಟಗಾರ ವಿರಾಟ್ ಕೊಹ್ಲಿ ಎಂಬುದು ಗಮನಾರ್ಹ. ಐಪಿಎಲ್‌ನಲ್ಲಿ ಆಡುವವರೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಮಾತ್ರ ಆಡುವುದಾಗಿ ಕೊಹ್ಲಿ ಈಗಾಗಲೇ ಹಲವು ಸಂದರ್ಭಗಳಲ್ಲಿ ಹೇಳಿದ್ದಾರೆ. ಆದರೆ.. ಇಲ್ಲಿಯವರೆಗೂ ಕೊಹ್ಲಿ ಹಾಗೂ ಆರ್‌ಸಿಬಿ ಹಾಗೂ ಫ್ಯಾನ್ಸ್​ ಪಾಲಿಗೆ ಐಪಿಎಲ್‌ ಟ್ರೋಫಿ ಗೆಲ್ಲುವುದು ಕನಸಾಗಿಯೇ  ಉಳಿದಿದೆ.

    ಐಪಿಎಲ್‌ನಲ್ಲಿ ಅತಿ ಹೆಚ್ಚು ಪಂದ್ಯ ಸೋತಿರುವ ಆಟಗಾರರು:

    ವಿರಾಟ್ ಕೊಹ್ಲಿ (ಆರ್‌ಸಿಬಿ) – 120 ಪಂದ್ಯಗಳು
    ದಿನೇಶ್ ಕಾರ್ತಿಕ್ (ಆರ್‌ಸಿಬಿ) – 118 ಪಂದ್ಯಗಳು
    ರೋಹಿತ್ ಶರ್ಮಾ (ಮುಂಬೈ ಇಂಡಿಯನ್ಸ್) – 112 ಪಂದ್ಯಗಳು
    ಶಿಖರ್ ಧವನ್ (ಪಂಜಾಬ್ ಕಿಂಗ್ಸ್) – 107 ಪಂದ್ಯಗಳು
    ರಾಬಿನ್ ಉತ್ತಪ್ಪ – 106 ಪಂದ್ಯಗಳು

    ಚಿನ್ನಸ್ವಾಮಿ ಮೈದಾನದಲ್ಲಿ ಮಂಗಳವಾರ ನಡೆದ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ 28 ರನ್‌ಗಳಿಂದ ಸೋತಿತ್ತು.

    VIDEO | ಪತಿ ಸೂರ್ಯ ಜತೆ “ನಾಗರಹಾವು” ನಟಿ ಜ್ಯೋತಿಕಾ ಜಿಮ್‌ನಲ್ಲಿ ಹೆವಿ ವರ್ಕೌಟ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts