More

    ಬ್ರಿಟನ್ ಸಾರ್ವತ್ರಿಕ ಚುನಾವಣೆ: ರಿಷಿ ಸುನಕ್ ನೇತೃತ್ವದ ಕನ್ಸರ್ವೇಟಿವ್ ಪಕ್ಷಕ್ಕೆ ಹಿನ್ನಡೆ ಸಾಧ್ಯತೆ: ಸಮೀಕ್ಷೆಯಲ್ಲಿ ಬಹಿರಂಗ

    ಬ್ರಿಟನ್ : ಈ ವರ್ಷ ಬ್ರಿಟನ್ ನಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಬಹುದು. ಇತ್ತೀಚೆಗೆ, ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರು ಈ ವರ್ಷದ ಕೊನೆಯಲ್ಲಿ ಚುನಾವಣೆ ನಡೆಯಬಹುದು ಎಂದು ಸೂಚಿಸಿದ್ದರು. ಈ ನಡುವೆ ಬ್ರಿಟನ್ ನಲ್ಲಿ ನಡೆಯಲಿರುವ ಚುನಾವಣೆಗೂ ಮುನ್ನ ಸಮೀಕ್ಷೆಯೊಂದು ಹೊರಬಿದ್ದಿದೆ. ಸಮೀಕ್ಷೆಯಲ್ಲಿ ಆಘಾತಕಾರಿ ವಿಷಯ ಬಹಿರಂಗವಾಗಿದೆ.

    ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಹಿನ್ನಡೆ ಎದುರಿಸಬಹುದು ಎಂದು ಚುನಾವಣೆಗೆ ಸಂಬಂಧಿಸಿದ ಸಮೀಕ್ಷೆ ಹೇಳಿದೆ. ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ 18 ಸಾವಿರಕ್ಕೂ ಹೆಚ್ಚು ಜನರ ಅಭಿಪ್ರಾಯಗಳನ್ನು ಸಮೀಕ್ಷೆಯಲ್ಲಿ ಸೇರಿಸಲಾಗಿದೆ. ಬ್ರಿಟನ್ ಪ್ರಧಾನಿ ರಿಷಿ ಸುನಕ್ ನೇತೃತ್ವದ ಆಡಳಿತಾರೂಢ ಕನ್ಸರ್ವೇಟಿವ್ ಪಕ್ಷದ ಸೋಲು ಖಚಿತ ಎಂದು ಸಮೀಕ್ಷೆ ಭವಿಷ್ಯ ನುಡಿದಿದೆ. ಬಹುಮತಕ್ಕೆ ಬೇಕಾಗಿರುವ 326 ಸ್ಥಾನಗಳಿಗಿಂತಲೂ ಹೆಚ್ಚು ಅಂದರೆ 403 ಸ್ಥಾನಗಳನ್ನು ವಿರೋಧ ಪಕ್ಷ ಲೇಬರ್ ಪಾರ್ಟಿ ಗೆಲ್ಲಲಿದೆ ಎಂದು ಸಮೀಕ್ಷೆಯು ಅಂದಾಜಿಸಿದೆ.

    ಕಡಿಮೆಯಾಸುನಕ್  ಜನಪ್ರಿಯತೆ

    ಬುಧವಾರ ಯೂಗೋವ್ ನಡೆಸಿದ 18,000 ಜನರ ಸಮೀಕ್ಷೆಯ ಅಂಕಿಅಂಶಗಳು ಬ್ರಿಟಿಷ್ ಪ್ರಧಾನಿ ರಿಷಿ ಸುನಕ್ ಅವರ ಜನಪ್ರಿಯತೆ ಕುಸಿದಿದೆ ಎಂದು ಹೇಳುತ್ತದೆ. ಮಾಜಿ ಬ್ರೆಕ್ಸಿಟ್ ಕಾರ್ಯದರ್ಶಿ ಮತ್ತು ಪಿಎಂ ಸುನಕ್ ಅವರ ಪ್ರಮುಖ ವಿಮರ್ಶಕ ಲಾರ್ಡ್ ಡೇವಿಡ್ ಫ್ರಾಸ್ಟ್ ಈ ಸಮೀಕ್ಷೆಯ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಹೊಸ ಸಮೀಕ್ಷೆಯ ಪ್ರಕಾರ, ಕನ್ಸರ್ವೇಟಿವ್ ಪಕ್ಷವು ಹತಾಶವಾಗಿದೆ ಎಂದು ಹೇಳಿದರು.

    ಹೌಸ್ ಆಫ್ ಕಾಮನ್ಸ್ ಸ್ಥಾನಗಳನ್ನು ಕಳೆದುಕೊಳ್ಳಬಹುದಾದ ಸಂಸತ್ತಿನ ಪ್ರಮುಖ ಸದಸ್ಯರೆಂದರೆ ಚಾನ್ಸೆಲರ್ ಜೆರೆಮಿ ಹಂಟ್, ವಿಜ್ಞಾನ ಸಚಿವೆ ಮಿಚೆಲ್ ಡೊನ್ನೆಲನ್ ಮತ್ತು ಸಚಿವ ಮೈಕೆಲ್ ಗೋವ್. ಇಷ್ಟು ಮಾತ್ರವಲ್ಲದೆ, ಚುನಾವಣೆಗೂ ಮುನ್ನ ನಡೆಸಲಾದ ಬಹುತೇಕ ಸಮೀಕ್ಷೆಗಳಲ್ಲಿ ಲೇಬರ್ ಪಕ್ಷವು ಕನ್ಸರ್ವೇಟಿವ್‌ಗಳಿಗಿಂತ ಮುನ್ನಡೆ ಸಾಧಿಸಿರುವುದು ಕಂಡುಬಂದಿದೆ.

    ಬೆಸ್ಟ್ ಫಾರ್ ಬ್ರಿಟನ್ ಸಮೀಕ್ಷೆಯಲ್ಲಿರುವುದು…

    ಯೂಗೋವ್‌ಗಿಂತ ಮೊದಲು, ದಿ ಬೆಸ್ಟ್ ಫಾರ್ ಬ್ರಿಟನ್ ಸಮೀಕ್ಷೆ ಕೂಡ ಇತ್ತೀಚೆಗೆ ಬಿಡುಗಡೆಯಾಗಿತ್ತು ಎಂಬುದು ಗಮನಾರ್ಹ. ಪ್ರಧಾನಿ ಸುನಕ್ ಅವರೇ ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಈ ಸಮೀಕ್ಷೆಯಲ್ಲಿ ಹೇಳಲಾಗಿದೆ.

    ಸಾರ್ವತ್ರಿಕ ಚುನಾವಣೆಯಲ್ಲಿ ಆಡಳಿತಾರೂಢ ಕನ್ಸರ್ವೇಟಿವ್ ಪಕ್ಷಕ್ಕೆ ಹೀನಾಯ ಸೋಲು ಎದುರಾಗಬಹುದು ಎಂದು ಸಮೀಕ್ಷೆ ಹೇಳಿದೆ. ಈ ಸಮೀಕ್ಷೆಗೂ ಮುನ್ನ 15,029 ಜನರ ಅಭಿಪ್ರಾಯವನ್ನು ದಿ ಬೆಸ್ಟ್ ಫಾರ್ ಬ್ರಿಟನ್ ತೆಗೆದುಕೊಂಡಿತ್ತು. ಸಮೀಕ್ಷೆಯನ್ನು ಆಧರಿಸಿದ ವರದಿಯಲ್ಲಿ, ವಿರೋಧ ಪಕ್ಷ ಲೇಬರ್ ಪಕ್ಷವು 45 ಪ್ರತಿಶತ ಮತಗಳನ್ನು ಗಳಿಸಿ ಅಗ್ರಸ್ಥಾನದಲ್ಲಿದೆ, ಇದು ಕನ್ಸರ್ವೇಟಿವ್‌ಗಳಿಗೆ ಹೋಲಿಸಿದರೆ 19 ಪ್ರತಿಶತದಷ್ಟು ಹೆಚ್ಚಾಗಿದೆ. ಲೇಬರ್ ಪಕ್ಷವು ಈ ಬಾರಿ 100 ಕ್ಕಿಂತ ಕಡಿಮೆ ಸ್ಥಾನಗಳಿಗೆ ಇಳಿಯಬಹುದು ಎಂದು ಅದು ಹೇಳಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts