More

    ಸಂಸತ್ ಸಮರದಲ್ಲಿ ಮಂಡ್ಯ ಫಸ್ಟ್, ಹದಿನಾಲ್ಕು ಕ್ಷೇತ್ರದಲ್ಲೇ ಹೆಚ್ಚು ಮತದಾನ ಫಲಿಸಿತು ಸ್ವೀಪ್‌ನ ವಿಭಿನ್ನ ಚಟುವಟಿಕೆ

    ಮಂಡ್ಯ: ತೀವ್ರ ಜಿದ್ದಾಜಿದ್ದಿಯಿಂದ ಕೂಡಿದ್ದ ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆಯ ಮತದಾನ ಮುಗಿದಿದ್ದು, ಶೇ.81.67 ದಾಖಲೆಯ ಮತ ಚಲಾವಣೆಯಾಗಿದೆ. ಅಂತೆಯೇ ಶುಕ್ರವಾರ ರಾಜ್ಯದ ಹದಿನಾಲ್ಕು ಕ್ಷೇತ್ರದಲ್ಲಿ ನಡೆದ ಮತದಾನದಲ್ಲಿ ಮಂಡ್ಯ ಮೊದಲ ಸ್ಥಾನ ಪಡೆದುಕೊಂಡಿದೆ.
    2019ರ ಲೋಕಸಭಾ ಚುನಾವಣೆಯಲ್ಲಿ ಶೇ.80.41ರಷ್ಟು ಮತದಾನವಾಗಿತ್ತು. ಈ ಬಾರಿ ಹಿಂದಿನ ದಾಖಲೆ ಮುರಿಯಲು ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಫ್ ಸಮಿತಿ ವಿಶೇಷ ಜಾಗೃತಿ ಕಾರ್ಯಕ್ರಮ ಆಯೋಜಿಸಿದರು. ಪರಿಣಾಮ ಶೇ.1.26ರಷ್ಟು ಹೆಚ್ಚಿನ ಮತದಾನವಾಗಿದೆ. ಇದರೊಂದಿಗೆ ಅಧಿಕಾರಿಗಳ ಶ್ರಮ ಸಾರ್ಥಕ ಎನಿಸಿದೆ. ಶೇಕಡಾವಾರು ಮತದಾನದಲ್ಲಿ ಈ ಬಾರಿ ಪುರುಷರು ಶೇ.82.24ರಷ್ಟು ಮತ ಹಾಕಿದರೆ, ಶೇ. 81.12ರಷ್ಟು ಮಹಿಳೆಯರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಕ್ಷೇತ್ರದಲ್ಲಿ 8,76,112 ಪುರುಷ, 9,02,963 ಮಹಿಳೆ, 168 ಇತರೆ ಸೇರಿ 17,79,243 ಮತದಾರರಿದ್ದಾರೆ.
    ಸಖಿ, ಸಾಂಸ್ಕೃತಿಕ, ಯುವ ಹಾಗೂ ಅಂಗವಿಕಲ ಮತಗಟ್ಟೆ ತೆರೆದು ಮತದಾರರನ್ನು ಆಕರ್ಷಿಸುವಲ್ಲಿ ಚುನಾವಣಾ ಆಯೋಗ ಯಶಸ್ವಿಯಾಗಿತ್ತು. ಗ್ರಾಮೀಣ ಮತ್ತು ನಗರ ಪ್ರದೇಶಗಳ ಕೆಲವೆಡೆಗಳಲ್ಲಿ ಮತಗಟ್ಟೆಗಳನ್ನು ತಳಿರು ತೋರಣಗಳಿಂದ ಸಿಂಗರಿಸಿದ್ದು ಮತದಾರರ ಆಕರ್ಷಣೆಗೆ ಒಳಗಾಗಿತ್ತು. ಮತ ಕೇಂದ್ರದ ಗೋಡೆಗಳ ಮೇಲೆ ಚಿತ್ತಾರ ಮೂಡಿಸಿದ್ದು ಮತ್ತಷ್ಟು ಗಮನ ಸೆಳೆಯಿತು. ಈ ಬಾರಿ ವಿಷಯಾಧಾರಿತ ಅಂದರೆ ಜನರನ್ನು ಸೆಳೆಯುವಂತೆ ಪ್ರವಾಸಿ ತಾಣ, ರೇಷ್ಮೆ ಕೃಷಿಯಂತಹ ಮತಗಟ್ಟೆಯೂ ವಿಶೇಷ ಎನಿಸಿಕೊಂಡವು.
    ಮೇಲುಕೋಟೆ ಮತ್ತೆ ಫಸ್ಟ್: ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ವಿಧಾನಸಭಾ ಕ್ಷೇತ್ರವಾರು ಮತದಾನ ಪ್ರಕ್ರಿಯೆಯಲ್ಲಿ ಮೇಲುಕೋಟೆ ಮತ್ತೆ ಮೊದಲ ಸ್ಥಾನ ಪಡೆದುಕೊಂಡಿದೆ. ಕಳೆದ ಚುನಾವಣೆಯಲ್ಲಿಯೂ ಮೇಲುಕೋಟೆ ಕ್ಷೇತ್ರದಲ್ಲಿ ಶೇ.86.54ರಷ್ಟು ಮತದಾನವಾಗಿತ್ತು. ಈ ಬಾರಿ ಶೇ.87.20ರಷ್ಟು ಮತ ಚಲಾವಣೆಯಾಗಿದೆ. ಇನ್ನು ನಾಗಮಂಗಲ ಕ್ಷೇತ್ರದಲ್ಲಿ ಶೇ.84.73, ಶ್ರೀರಂಗಪಟ್ಟಣದಲ್ಲಿ ಶೇ.84.48, ಮದ್ದೂರಿನಲ್ಲಿ ಶೇ.82.99, ಕೆ.ಆರ್.ಪೇಟೆಯಲ್ಲಿ ಶೇ.80.63, ಕೆ.ಆರ್.ನಗರದಲ್ಲಿ ಶೇ.80.50 ಮತದಾನವಾಗಿದೆ. ಈ ನಡುವೆ ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಮತ್ತೊಮ್ಮೆ ಕಡಿಮೆ ಮತದಾನವಾಗಿದ್ದು, ಕಳೆದ ಸಾಲಿನ ದಾಖಲೆಯನ್ನು ಮುಂದುವರೆಸಿದೆ. ಮಂಡ್ಯ ಕ್ಷೇತ್ರದಲ್ಲಿ ಶೇ.77ರಷ್ಟು ಮತ ಚಲಾವಣೆಯಾಗಿದೆ.
    ಮಳವಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ 1,26,118 ಪುರುಷ ಹಾಗೂ 1,27,487 ಮಹಿಳೆಯರು, 23 ಇತರೆ ಸೇರಿ 2,53,628 ಮತಗಳಿದ್ದವು. ಮದ್ದೂರು ಕ್ಷೇತ್ರದಲ್ಲಿ 1,04,280 ಪುರುಷ, 1,11,443 ಮಹಿಳೆಯರು, 22 ಇತರೆ ಸೇರಿದಂತೆ 2,15,745, ಮೇಲುಕೋಟೆಯಲ್ಲಿ 1,00,379 ಪುರುಷ, 1,03,010 ಮಹಿಳೆ, 9 ಇತರೆ ಸೇರಿ 2,03,398, ಮಂಡ್ಯದಲ್ಲಿ 1,11,868 ಪುರುಷ, 1,17,759 ಮಹಿಳೆ, 36 ಇತರೆ ಸೇರಿ 2,29,663, ಶ್ರೀರಂಗಪಟ್ಟಣದಲ್ಲಿ 1,06,157 ಪುರುಷ, 1,11,431 ಮಹಿಳೆ, 44 ಇತರೆ ಸೇರಿದಂತೆ 2,17,632, ನಾಗಮಂಗಲದಲ್ಲಿ 1,07,760 ಪುರುಷ, 1,08,783 ಮಹಿಳೆ, 11 ಇತರೆ ಸೇರಿ 2,16,554, ಕೆ.ಆರ್.ಪೇಟೆಯಲ್ಲಿ 1,11,542 ಪುರುಷ, 1,12,284 ಮಹಿಳೆ, 11 ಇತರೆ ಸೇರಿ 2,23,837 ಹಾಗೂ ಕೆ.ಆರ್.ನಗರದಲ್ಲಿ 1,08,008 ಪುರುಷ, 1,10,766 ಮಹಿಳೆ, 12 ಇತರೆ ಸೇರಿ 2,18,786 ಮತದಾರರಿದ್ದರು.

    ಸಂಸತ್ ಸಮರದಲ್ಲಿ ಮಂಡ್ಯ ಫಸ್ಟ್, ಹದಿನಾಲ್ಕು ಕ್ಷೇತ್ರದಲ್ಲೇ ಹೆಚ್ಚು ಮತದಾನ ಫಲಿಸಿತು ಸ್ವೀಪ್‌ನ ವಿಭಿನ್ನ ಚಟುವಟಿಕೆ

    ಹದಿನಾಲ್ಕು ಕ್ಷೇತ್ರದ ಪೈಕಿ ಮಂಡ್ಯದಲ್ಲಿ ಹೆಚ್ಚು ಮತದಾನ ನಡೆಯಲು ಜನರೇ ಕಾರಣ. ಕಳೆದ ಬಾರಿ ಹೆಚ್ಚು ಮತದಾನವಾಗಿದ್ದ ಕಾರಣ ಜಿಲ್ಲೆಗೆ ಪ್ರಶಸ್ತಿ ಬಂದಿತ್ತು. ಕ್ಷೇತ್ರದ ಜನರು ಪ್ರಜಾಪ್ರಭುತ್ವ ವ್ಯವಸ್ಥೆಗೆ ಬಲ ತುಂಬಿದ್ದಾರೆ. ಬೇರೆ ಜಿಲ್ಲೆಗಳಿಗೆ ಹೋದರೂ ಮಂಡ್ಯವನ್ನು ಉದಾಹರಣೆ ಕೊಡಲಾಗುತ್ತದೆ. ಈ ಬಾರಿಯೂ ಸ್ವೀಪ್ ಸಮಿತಿಯಿಂದ ಹಲವು ಚಟುವಟಿಕೆ ಮಾಡಲಾಗಿತ್ತು. ಹಲವು ಗ್ರಾಮ ಪಂಚಾಯಿತಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು. ಎಲ್ಲದರ ಪರಿಣಾಮ ದಾಖಲೆಯ ಮತದಾನವಾಗಿದೆ. ಇದಕ್ಕೆ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ.
    ಶೇಖ್ ತನ್ವೀರ್ ಆಸಿಫ್
    ಜಿಪಂ ಸಿಇಒ, ಸ್ವೀಪ್ ಸಮಿತಿ ಅಧ್ಯಕ್ಷರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts