ಭವಿಷ್ಯ: ಈ ರಾಶಿಯವರಿಗಿಂದು ಬಹುದಿನಗಳ ಕನಸು ಸ್ನೇಹಿತರ ಸಹಾಯದಿಂದ ನೆರವೇರುವುದು...

Nithya Bhavishya
Published on

ಮೇಷ: ವಿದ್ಯಾರ್ಥಿಗಳು ಸರಾಗವಾಗಿ ಅಭ್ಯಾಸ ಮುಂದುವರಿಸುವುದರಿಂದ ಜಯ ಕಾಣುವರು. ಏಕಾಗ್ರತೆ ಇದ್ದರೆ ಸಾಧನೆ ಸುಲಭ. ಶುಭಸಂಖ್ಯೆ: 5

ವೃಷಭ: ಬಹುದಿನಗಳ ಕನಸು ಸ್ನೇಹಿತರ ಸಹಾಯದಿಂದ ನೆರವೇರುವುದು. ರಾಜಕೀಯದಲ್ಲಿ ನಿಮ್ಮ ಮುಂದಾಳತ್ವ ಹೆಸರು ಮಾಡುವುದು. ಶುಭಸಂಖ್ಯೆ: 9

ಮಿಥುನ: ಅನಾರೋಗ್ಯ ಮನೆಮದ್ದುಗಳಿಂದ ಸರಿಹೋಗುತ್ತದೆ. ಮನೆಗೆ ಪ್ರಮುಖ ಅತಿಥಿ ಬರುವ ಸಾಧ್ಯತೆ. ಶುಭ ಸಮಾಚಾರ ಕೇಳುವಿರಿ. ಶುಭಸಂಖ್ಯೆ: 2

ಕಟಕ: ತೀಕ್ಷ್ಣ ಮಾತುಗಳಿಂದ ಬೇರೆಯವರಿಗೆ ನೋವಾಗ ಬಹುದು. ಮಾತಿನಲ್ಲಿ ಹಿಡಿತವಿರಲಿ. ಭವಿಷ್ಯದ ಯೋಜನೆಗೆ ಗಮನ ಕೊಡಿ. ಶುಭಸಂಖ್ಯೆ: 7

ಸಿಂಹ: ನಿಮ್ಮೆಡೆಗೆ ಹರಿದು ಬರುವ ಅವಕಾಶಗಳನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸಿ. ಇಲೆಕ್ಟ್ರಿಕಲ್ ಕಂಟ್ರಾಕ್ಟರುಗಳಿಗೆ ಉತ್ತಮ ಅವಕಾಶ. ಶುಭಸಂಖ್ಯೆ: 1

ಕನ್ಯಾ: ಮಾತಾ-ಪಿತೃಗಳ ಆರ್ಶೀವಾದದಿಂದ ಕೆಲಸಗಳಲ್ಲಿ ವಿಜಯ ಪಡೆಯುವಿರಿ. ಮಹಿಳಾ ಉದ್ಯೋಗಿಗಳಿಗೆ ವರ್ಗಾವಣೆ ಸಾಧ್ಯತೆ. ಶುಭಸಂಖ್ಯೆ: 6

ತುಲಾ: ದೂರದರ್ಶನ ಮಾಧ್ಯಮದವರಿಂದ ಮೆಚ್ಚುಗೆಯ ಮಾತು ಕೇಳಲಿದ್ದೀರಿ. ಯೋಜನೆಗಳು ಅರ್ಧದಲ್ಲಿಯೇ ನಿಲ್ಲುವ ಲಕ್ಷಣಗಳಿವೆ. ಶುಭಸಂಖ್ಯೆ: 7

ವೃಶ್ಚಿಕ: ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ದೊರೆಯುವುದು. ಉದ್ಯೋಗ ನಿಮಿತ್ತ ಪ್ರಯಾಣ ಸಂಭವ. ಹಸಿರು ಬಣ್ಣ ಅದೃಷ್ಟ ತರುವುದು. ಶುಭಸಂಖ್ಯೆ: 3

ಧನುಸ್ಸು: ಆರೋಗ್ಯದ ಸಮಸ್ಯೆಗಳನ್ನು ಪರಿಹರಿಸುವ ಬಗೆ ಕಂಡುಕೊಂಡರೆ ಉತ್ತಮ. ಸಿಟ್ಟಿನಿಂದ ಹೊರಬರಲು ಶನೈಶ್ಚರನ ಪ್ರಾರ್ಥಿಸಿ. ಶುಭಸಂಖ್ಯೆ: 7

ಮಕರ: ಅವಲಂಬನೆ ಬೇಡ. ಉದ್ಯೋಗ ಸ್ಥಳದಲ್ಲಿ ತೊಂದರೆ ಕಾಣಿಸಿಕೊಳ್ಳಲಿದೆ. ದೂರದ ಸಂಚಾರ ಬಂದರೂ ಮುಂದೂಡಿ. ಶುಭಸಂಖ್ಯೆ: 3

ಕುಂಭ: ಕೋರ್ಟ್ ಕಚೇರಿ ದೂರುಗಳಂತಹ ಗೊಡವೆಗಳಿಗೆ ಪ್ರಾಮುಖ್ಯತೆ ಕೊಡುವುದು ಸರಿಯಲ್ಲ. ಆರೋಗ್ಯಕ್ಕೆ ತೊಂದರೆ ತರಬಹುದು. ಶುಭಸಂಖ್ಯೆ: 2

ಮೀನ: ವಾಹನ ಅಥವಾ ಕಬ್ಬಿಣದ ಕೆಲಸ ಮಾಡುವವರು ಕಾಳಜಿ ವಹಿಸಿ. ವಿದ್ಯಾರ್ಥಿಗಳು ಹೆಚ್ಚಿನ ಅಭ್ಯಾಸ ನಡೆಸುವುದು ಅಗತ್ಯವಿದೆ. ಶುಭಸಂಖ್ಯೆ: 5

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net