ರಸ್ತೆಯಲ್ಲಿ ಗರ್ಲ್​ಫ್ರೆಂಡ್​​ ಹತ್ಯೆ ಮಾಡಲು ಯತ್ನ; ಯುವಕನಿಗೆ ಜನರು ಥಳಿಸಿದ Video Viral

Untitled design - 2025-01-06T183451.849
Published on

ಲಖನೌ: ಜನರಿರುವ ರಸ್ತೆಯಲ್ಲಿ ಹುಡುಗನೊಬ್ಬ ತನ್ನ ಗೆಳತಿಯನ್ನು ಹತ್ಯೆ ಮಾಡಲು ಪ್ರಯತ್ನಿಸಿರುವುದ ಬೆಳಕಿಗೆ ಬಂದಿದೆ. ರಾಹುಲ್​​ ಹೆಸರಿನ ಯುವಕ ತನ್ನ ಗೆಳತಿಯ ಮೇಲೆ ಹತ್ಯೆ ಯತ್ನವನ್ನು ಮಾಡಿದ್ದಾನೆ. ಜನರು ಹೇಗೆ ಆತನಿಂದ ಆ ಹುಡುಗಿಯನ್ನು ರಕ್ಷಿಸುತ್ತಾರೆ ಎಂಬ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ(Video Viral). ಈ ವಿಡಿಯೋ ಉತ್ತರ ಪ್ರದೇಶದ ಅಮ್ರೋಹಾದಿಂದ ಬಂದಿದೆ ಎನ್ನಲಾಗಿದೆ.

ವೈರಲ್​ ವಿಡಿಯೋದಲ್ಲಿ ಹುಡುಗನೊಬ್ಬ ತನ್ನ ಗೆಳತಿಯ ಮೇಲೆ ಡಬ್ಲ್ಯುಡಬ್ಲ್ಯುಇ ಕುಸ್ತಿಪಟುಗಳಂತೆ ಸ್ಟಂಟ್ ಮಾಡುತ್ತಿರುವುದನ್ನು ಕಾಣಬಹುದು. ಈ ಸ್ಟಂಟ್ ಮಾಮೂಲಿ ಸ್ಟಂಟ್ ಅಲ್ಲ ಮಾರಕ ಸಾಹಸ. ಇದರಿಂದ ಬಾಲಕಿಯ ಉಸಿರಾಟ ಸ್ಥಗಿತಗೊಂಡಿದೆ. ಈ ಕ್ಲಿಪ್‌ನಲ್ಲಿ ಹುಡುಗನು ತನ್ನ ಎಲ್ಲಾ ಶಕ್ತಿಯಿಂದ ಹುಡುಗಿಯ ಕುತ್ತಿಗೆಯನ್ನು ತನ್ನ ಕಾಲುಗಳ ನಡುವೆ ಹಿಡಿದಿದ್ದಾನೆ. ಅಲ್ಲದೆ ಕುತ್ತಿಗೆಗೆ ಸ್ಕಾರ್ಫ್ ಅಥವಾ ಟವೆಲ್ ಹಾಕಿಕೊಂಡು ಎಳೆಯುತ್ತಿರುವುದನ್ನು ನೋಡಬಹುದು.

ಇದರಿಂದಾಗಿ ಆಕೆ ಬಳಲಲು ಪ್ರಾರಂಭಿಸುತ್ತಾಳೆ. ಇದನ್ನು ಕಂಡ ಜನರು ಬಂದು ಹುಡುಗನನ್ನು ಹುಡುಗಿಯಿಂದ ಬೇರ್ಪಡಿಸುವ ಪ್ರಯತ್ನ ಆರಂಭಿಸುತ್ತಾರೆ. ಜನರು ಕಷ್ಟದಿಂದ ಹುಡುಗನನ್ನು ಬೇರ್ಪಡಿಸಿದ್ದಾರೆ. ಬಳಿಕ ಹುಡುಗಿ ರಸ್ತೆಬದಿಯಲ್ಲಿ ನೋವಿನಿಂದ ಒದ್ದಾಡುತ್ತಿರುವುದನ್ನು ಕಾಣಬಹುದು. ಇದಾದ ಬಳಿಕ ಅಲ್ಲಿದ್ದವರು ಯುವಕನಿಗೆ ಥಳಿಸಿದ್ದಾರೆ.

ಈ ವಿಡಿಯೋವನ್ನು ಇದುವರೆಗೂ 23 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು ಹಲವರು ಪ್ರತಿಕ್ರಿಯಿಸಿದ್ದಾರೆ. ಯುವಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು, ಅವನನ್ನು ಆಕಸ್ಮಿಕವಾಗಿ ಅಲ್ಲ ಡಬ್ಲ್ಯುಡಬ್ಲ್ಯುಇ ನಿಯಮಗಳ ಪ್ರಕಾರ ಸೋಲಿಸಬೇಕು, ಹುಡುಗಿಯರು ಇಂಥ ಹುಡುಗರನ್ನು ಮಾತ್ರ ಏಕೆ ಇಷ್ಟಪಡುತ್ತಾರೆಂದು ನನಗೆ ಅರ್ಥವಾಗುತ್ತಿಲ್ಲ, ಆದಷ್ಟು ಬೇಗ ಅವನಿಂದ ಪ್ರೀತಿಯ ಭೂತವನ್ನು ಹೊರಹಾಕಲು ಪೊಲೀಸರಿಗೆ ವಿನಂತಿಸಬೇಕು ಎಂದು ಕಾಮೆಂಟ್​ ಮಾಡಿದ್ದಾರೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net