ಅಪಘಾತದಲ್ಲಿ ಸೀಟಿನಲ್ಲಿ ಸಿಲುಕಿದ ಚಾಲಕ; ಸಹಾಯ ಮಾಡಲು ಬಂದವರು ಮಾಡಿದ್ದು ಮಾತ್ರ.. | Viral Video

Untitled design - 2025-01-05T192805.142
Published on

ರಸ್ತೆ ಅಪಘಾತದಲ್ಲಿ ಟ್ರಕ್ ಚಾಲಕ ತೀವ್ರವಾಗಿ ಗಾಯಗೊಂಡಿದ್ದಾರೆ. ಅಪಘಾತದ ನಂತರ ಅವರು ಸೀಟಿನಲ್ಲಿ ಸಿಲುಕಿಕೊಂಡಿದ್ದು ದಾರಿಹೋಕರಿಗೆ ಸಹಾಯ ಮಾಡುವಂತೆ ಕೇಳುತ್ತಾರೆ. ಆದರೆ ಜನರು ಸಹಾಯ ಮಾಡುವ ಬದಲು ಗಾಯಾಳು ಚಾಲಕನ ಮೊಬೈಲ್ ಹಾಗೂ ಇತರೆ ವಸ್ತುಗಳನ್ನು ಕದಿಯಲು ಮುಂದಾಗಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್(Viral Video) ಆಗುತ್ತಿದೆ.

ಪ್ರಸ್ತುತ ಈ ಘಟನೆ ಯಾವಾಗ ಮತ್ತು ಎಲ್ಲಿ ನಡೆದಿದೆ ಎಂಬುದು ದೃಢಪಟ್ಟಿಲ್ಲ. ಆದರೆ ವಿಡಿಯೋ ಮಾತ್ರ ಜಾಲತಾಣದಲ್ಲಿ ಮಾನವೀಯತೆಯ ವಿಷಯದ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದೆ. ವೈರಲ್​ ವಿಡಿಯೋದಲ್ಲಿ ಟ್ರಕ್ ಚಾಲಕ ಗಾಯಗೊಂಡು ಸೀಟಿನಲ್ಲಿ ಸಿಲುಕಿಕೊಂಡಿರುವುದನ್ನು ನೋಡಬಹುದು. ವಾಹನದ ಮುಂಭಾಗದಲ್ಲಿ ಗಾಜು ಒಡೆದಿದೆ. ಇಂತಹ ಪರಿಸ್ಥಿತಿಯಲ್ಲಿ ಚಾಲಕನನ್ನು ಹೊರಗೆ ಕರೆದೊಯ್ಯುವ ಬದಲು ಡ್ಯಾಶ್‌ಬೋರ್ಡ್‌ನಲ್ಲಿ ಇಟ್ಟಿದ್ದ ವಸ್ತುಗಳನ್ನು ಜನರು ಎತ್ತಿಕೊಂಡು ಹೋಗುತ್ತಿರುವುದನ್ನು ಕಾಣಬಹುದು.

ಅಪಘಾತದ ನಂತರ ಗಾಯಗೊಂಡ ಚಾಲಕ ತನ್ನ ಸೀಟಿನಲ್ಲಿ ಸಿಲುಕಿಕೊಂಡಿದ್ದಾನೆ. ಕೆಲವು ಒಳ್ಳೆಯ ವ್ಯಕ್ತಿಗಳು ಸಹಾಯ ಮಾಡುವ ಬದಲು ಅವರ ಮೊಬೈಲ್, ಹಣ ಮತ್ತಿತರ ವಸ್ತುಗಳನ್ನು ದೋಚುತ್ತಲೇ ಇದ್ದರು. ಈ ವಿಡಿಯೋ ನೋಡಿದ ಚಾಲಕನ ಮಕ್ಕಳಿಗೆ ಏನನ್ನಿಸುತ್ತದೆ? ಎಂಬ ಶೀರ್ಷಿಕೆ ನೀಡಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.

ಇದುವರೆಗೂ ಈ ವಿಡಿಯೋವನ್ನು 8 ಲಕ್ಷ 82 ಸಾವಿರ ಮಂದಿ ವೀಕ್ಷಿಸಿದ್ದು, ಅನೇಕರು ಪ್ರತಿಕ್ರಿಯಿಸಿದ್ದಾರೆ. ಇಲ್ಲಿ ಜನರು ಸತ್ತವರ ದೇಹದಿಂದ ಆಭರಣ ಮತ್ತು ಹಣವನ್ನು ಹೊರತೆಗೆಯುತ್ತಾರೆ ಅದರಲ್ಲಿ ಇಲ್ಲಿ ಚಾಲಕನಿಗೆ ಗಾಯವಾಗಿದೆ, ಇದು ತುಂಬಾ ಅವಮಾನಕರವಾಗಿದೆ, ಅವರು ಮನುಷ್ಯರು ಎನ್ನಿಸಿಕೊಳ್ಳಲು ಅರ್ಹರಲ್ಲ ಎಂದು ಕಾಮೆಂಟ್​ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net