ಮತ್ತೆ ಮತ್ತೆ ನೋಡಲೇಬೇಕು ಎನ್ನಿಸುವ ಮಗುವಿನ ಮುಗ್ಧತೆ; 24 ಮಿಲಿಯನ್​ ಮಂದಿ ಮೆಚ್ಚಿದ Video Viral

Untitled design - 2025-01-05T194444.697
Published on

ಚಿಕ್ಕ ಮಕ್ಕಳು ಏನೇ ಮಾಡಿದರು ಮುದ್ದಾಗಿರುತ್ತದೆ. ಅಂತಹ ಮುಗ್ಧತೆಯಿಂದ ಅವರು ಪ್ರೀತಿ, ಕೋಪ, ನಿರಾಶೆ ಎಲ್ಲವನ್ನು ವ್ಯಕ್ತಪಡಿಸುತ್ತಾರೆ. ಅಂತಹದ್ದೇ ವಿಡಿಯೋವೊಂದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ(Video Viral). ಲಡಾಖ್‌ನ ಈ ಚಿಕ್ಕ ಮಗುವಿನ ವಿಡಿಯೋ ಅನೇಕರ ಹೃದಯ ಗೆದ್ದಿದೆ. ಕೇವಲ ಎರಡೂವರೆ ವರ್ಷದ ಈ ಮಗು ಮುಕ್ತವಾಗಿ ನಗುತ್ತಾ ಮೋಜು ಮಸ್ತಿಯಲ್ಲಿದೆ.

ವೈರಲ್​ ವಿಡಿಯೋದಲ್ಲಿ ಮಗುವು ನಗುತ್ತಾ ಬಂದು ಬ್ಯಾಟ್-ಬಾಲ್ ಅನ್ನು ಆಡುವುದನ್ನು ನೋಡಬಹುದು. ಎದುರಿರುವ ವ್ಯಕ್ತಿ ಮಾಡಿದಂತೆ ಮಗುವು ಅದನ್ನು ಅನುಕರಣೆ ಮಾಡುತ್ತಿದೆ. ಆ ಮಗು ನಗು ನೋಡಿದರೆ ನೀವು ನಗುತ್ತೀರಿ. ಅವನ ಜತೆ ಆಟವಾಡುತ್ತಿರುವವರು ತಾವು ಹೊರಡುವುದಾಗಿ ಹೇಳಿದಾಗ ಆ ಮಗು ಬಹಳ ನಿರಾಶೆಯನ್ನು ವ್ಯಕ್ತಪಡಿಸುತ್ತಾನೆ. ಬಳಿಕ ಅವನಿಗೆ ಸಾಕಷ್ಟು ಆಹಾರ ಪದಾರ್ಥಗಳು ಮತ್ತು ಉಡುಗೊರೆ ನೀಡಿದಾಗ ಸಂತೋಷದಿಂದ ತೆಗೆದುಕೊಳ್ಳುತ್ತಾನೆ. ಬಳಿಕ ಕೈಮುಗಿದು ಧನ್ಯವಾದವನ್ನೂ ಹೇಳುವ ವಿಡಿಯೋ ನೋಡುಗರ ಮನ ಗೆದ್ದಿದೆ.

ಈ ವಿಡಿಯೋವನ್ನು ಇದುವರೆಗೂ 24 ಮಿಲಿಯನ್ ಮಂದಿ ವೀಕ್ಷಿಸಿದ್ದು ಅನೇಕರು ಪ್ರತಿಕ್ರಿಯಿಸಿದ್ದಾರೆ. ನಾನು ಇದನ್ನು ಮತ್ತೆ ಮತ್ತೆ ನೋಡುತ್ತಿದ್ದೇನೆ, ದೇವರೇ ನಾನು ಅವನನ್ನು ತುಂಬಾ ಪ್ರೀತಿಸುತ್ತೇನೆ, ಅವನಿಗೆ ತುಂಬಾ ಪ್ರೀತಿಯನ್ನು ನೀಡಿದ್ದಕ್ಕಾಗಿ ನಿಮಗೆ ಧನ್ಯವಾದಗಳು, ನಾನು ಈಗ ಅಳುತ್ತಿದ್ದೇನೆ, ಇದು ಎಷ್ಟು ಸುಂದರವಾಗಿದ ಎಂದು ಕಾಮೆಂಟ್​ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net