

ನವದೆಹಲಿ: ಕೆಲವು ವ್ಯಕ್ತಿಗಳು ನಾಯಿಮರಿಗೆ ವಿಸ್ಕಿ ಮದ್ಯ ಕುಡಿಸುತ್ತಿರುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಇದಕ್ಕೆ ಸಾರ್ವಜನಿಕರು ಮತ್ತು ಪ್ರಾಣಿ ಹಕ್ಕುಗಳ ಕಾರ್ಯಕರ್ತರಿಂದ ವ್ಯಾಪಕ ಖಂಡನೆ ವ್ಯಕ್ತವಾಗಿದೆ.
ರಾಜಸ್ಥಾನದ ಸವಾಯಿ ಮಾಧೋಪುರದ "ಶೇರು ಬೋರ್ಡಾ" ಎಂದು ಹೇಳಿಕೊಳ್ಳುವ ವ್ಯಕ್ತಿಯು ಪ್ಲಾಸ್ಟಿಕ್ ಗ್ಲಾಸ್‌ನಿಂದ ನಾಯಿಮರಿಗೆ ವಿಸ್ಕಿ ಕುಡಿಸುತ್ತಿರುವುದು ವೀಡಿಯೊದಲ್ಲಿ ಕಂಡುಬರುತ್ತದೆ.
ಈ ವ್ಯಕ್ತಿ ಮತ್ತು ಅವನ ಸ್ನೇಹಿತರು ವಿಹಾರಕ್ಕೆ ಹೋಗುವಾಗ ಖಾಲಿ ಜಾಗದಲ್ಲಿ ಬೆಂಕಿ ಕಾಯಿಸಿಕೊಳ್ಳುವಲ್ಲಿ ಕುಳಿತಿರುವುದು ಕಂಡುಬರುತ್ತದೆ.
ಈ ಘಟನೆಯನ್ನು ಗಮನಿಸಿರುವ ರಾಜಸ್ಥಾನ ಪೊಲೀಸ್ ಸಹಾಯ ಕೇಂದ್ರವು , ಎಕ್ಸ್ ಸೋಷಿಯಲ್ ಮೀಡಿಯಾದಲ್ಲಿ ಸ್ಥಳೀಯ ಪೊಲೀಸರನ್ನು ಟ್ಯಾಗ್ ಮಾಡಿದ್ದು, ಈ ವಿಷಯವನ್ನು ಪರಿಶೀಲಿಸಲು ಅವರಿಗೆ ತಿಳಿಸಿದೆ. ಎಕ್ಸ್‌ನಲ್ಲಿನ ಮತ್ತೊಂದು ಪೋಸ್ಟ್‌ನಲ್ಲಿ ಸ್ಥಳೀಯ ಪೊಲೀಸರು ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಉತ್ತರಿಸಿದೆ.
ಆಲ್ಕೋಹಾಲ್ ನಾಯಿಗಳಲ್ಲಿ ಆಲಸ್ಯ, ಉಸಿರಾಟದ ಖಿನ್ನತೆ ಮತ್ತು ಅಪಾಯಕಾರಿಯಾದ ಕಡಿಮೆ ದೇಹದ ಉಷ್ಣತೆಯನ್ನು ಉಂಟು ಮಾಡಬಹುದು. ನಾಯಿಮರಿಗಳಿಗೆ ಇದು ಹೆಚ್ಚು ಅಪಾಯಕಾರಿ ಎಂದು ಪರಿಣತರು ಹೇಳುತ್ತಾರೆ.
ನಾಯಿಮರಿಯನ್ನು ಅಗ್ನಿಪರೀಕ್ಷೆಗೆ ಒಳಪಡಿಸಿದ ವ್ಯಕ್ತಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಲವರು ಖಂಡಿಸಿದ್ದಾರೆ.
"ನಾಯಿ ಮರಿ ಸಾಯಬಹುದು. ಈ ಜನರ ವರ್ತನೆ ಅಮಾನವೀಯ" ಎಂದು ಎಕ್ಸ್ ಬಳಕೆದಾರರೊಬ್ಬರು ಬರೆದಿದ್ದು, ರಾಜಸ್ಥಾನ ಪೊಲೀಸರನ್ನು ಟ್ಯಾಗ್ ಮಾಡಿದ್ದಾರೆ.
ಇನ್ನೂ ಅನೇಕರು ಈ ವ್ಯಕ್ತಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.