More

    ಪಡಿತರ ಹಗರಣದಲ್ಲಿ ಇಡಿಯಿಂದ ಟಿಎಂಸಿ ನಾಯಕನ ಬಂಧನ; ಬೆಂಬಲಿಗರಿಂದ ಕಲ್ಲು ತೂರಾಟ

    ಕೋಲ್ಕತಾ: ಪಡಿತರ ಹಗರಣದಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕ ಶಂಕರ್ ಅಧ್ಯಾ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿದೆ.

    ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಆವರಣದಲ್ಲಿ ಇಡಿ 17 ಗಂಟೆಗಳ ಸುದೀರ್ಘ ಶೋಧದ ನಂತರ ಬಂಗಾವ್ ಪುರಸಭೆಯ ಮಾಜಿ ಅಧ್ಯಕ್ಷ ಶಂಕರ್ ಅಧ್ಯಾ ಅವರನ್ನು ಶುಕ್ರವಾರ ತಡರಾತ್ರಿ ಬಂಧಿಸಲಾಗಿದೆ. ತನಿಖೆಯ ಸಂದರ್ಭದಲ್ಲಿ ತನಿಖಾ ಸಂಸ್ಥೆ ಅಧಿಕಾರಿಗಳಿಗೆ ಸಹಕರಿಸಿದ ಹೊರತಾಗಿಯೂ ತನ್ನ ಪತಿಯನ್ನು ಬಂಧಿಸಲಾಗಿದೆ ಎಂದು ಅವರ ಪತ್ನಿ ಜ್ಯೋತ್ಸ್ನಾ ಅಧ್ಯಾ ಆರೋಪಿಸಿದ್ದಾರೆ.

    ಬಂಧನದ ನಂತರ ಶಂಕರ್ ಅಧ್ಯಾ ಅವರನ್ನು ತನಿಖಾಧಿಕಾರಿಗಳನ್ನು ತಮ್ಮೊಂದಿಗೆ ಕರೆದೊಯ್ಯದಂತೆ ತಡೆಯಲು ಅವರ ಬೆಂಬಲಿಗರು ಪ್ರಯತ್ನಿಸಿದರು. ವಾಹನಗಳ ಮೇಲೆ ಕಲ್ಲು ತೂರಿದರು. ಇಡಿ ತಂಡದ ಜತೆಗಿದ್ದ ಸಿಆರ್‌ಪಿಎಫ್ ಸಿಬ್ಬಂದಿ ಪರಿಸ್ಥಿತಿಯನ್ನು ಹತೋಟಿಗೆ ತರಲು ಗುಂಪಿನ ಮೇಲೆ ಲಾಠಿ ಚಾರ್ಜ್ ಮಾಡಬೇಕಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    “ಅಧ್ಯಾ ಅವರ ವಿಚಾರಣೆ ನಡೆಸಲಾಗುತ್ತಿದೆ. ಅವರ ಉತ್ತರಗಳು ತೃಪ್ತಿಕರವಾಗಿಲ್ಲದ ಕಾರಣ ಅವರನ್ನು ಬಂಧಿಸಲಾಗಿದೆ” ಎಂದು ಇಡಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಟಿಎಂಸಿ ನಾಯಕನಿಗೆ ಸೇರಿದ ಆಸ್ತಿಗಳ ಜತೆಗೆ, ಇಡಿ ಅವರ ಸಂಬಂಧಿಕರ ನಿವಾಸಗಳು, ಅವರ ಸಹಚರರು ಮತ್ತು ಅವರಿಗೆ ಸಂಬಂಧಿಸಿರುವ ಐಸ್ ಕ್ರೀಮ್ ಫ್ಯಾಕ್ಟರಿಯಲ್ಲಿ ತಪಾಸಣೆ ನಡೆಸಿತು. ಅವರ ಅತ್ತೆಯ ನಿವಾಸದಿಂದ ಅಂದಾಜು 8 ಲಕ್ಷ ರೂಪಾಯಿ ಹಣವನ್ನು ಇಡಿ ವಶಪಡಿಸಿಕೊಂಡಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

    ಪಡಿತರ ವಿತರಣೆ ಹಗರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದಲ್ಲಿ ಶಂಕರ್ ಅಧ್ಯಾ ಮತ್ತು ಮತ್ತೋರ್ವ ಟಿಎಂಸಿ ನಾಯಕ ಶಹಜಹಾನ್ ಶೇಖ್ ಅವರ ಮನೆಗಳ ಮೇಲೆ ಇಡಿ ದಾಳಿ ನಡೆಸುತ್ತಿದೆ. ತನಿಖಾ ಸಂಸ್ಥೆಯ ಪ್ರಕಾರ, ಪಶ್ಚಿಮ ಬಂಗಾಳದಲ್ಲಿ ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಿಡಿಎಸ್) ಪಡಿತರದ ಅಂದಾಜು 30 ಪ್ರತಿಶತವನ್ನು ಮುಕ್ತ ಮಾರುಕಟ್ಟೆಗೆ ತಿರುಗಿಸಲಾಗಿದೆ.

    ಬಂಧಿತ ಶಂಕರ್ ಅಧ್ಯಾ ಮಾಜಿ ಆಹಾರ ಸಚಿವ ಮತ್ತು ಹಾಲಿ ಅರಣ್ಯ ಸಚಿವ ಜ್ಯೋತಿಪ್ರಿಯೋ ಮಲ್ಲಿಕ್ ಅವರ ಸಹಾಯಕ ಎಂದು ತಿಳಿದುಬಂದಿದೆ. 2015 ರಿಂದ 2020 ರವರೆಗೆ ಬಂಗಾವ್ ಪುರಸಭೆಯಲ್ಲಿ ಪುರಸಭೆ ಅಧ್ಯಕ್ಷರಾಗಿದ್ದರು. ಪ್ರಸ್ತುತ, ಅವರು ಟಿಎಂಸಿ ಜಿಲ್ಲಾ ಸಲಹಾ ಸಮಿತಿಯ ಸದಸ್ಯರಲ್ಲಿ ಒಬ್ಬರು.

    ಪಡಿತರ ವಿತರಣೆ ಹಗರಣದಲ್ಲಿ ಅವರು ಭಾಗಿಯಾಗಿರುವುದು ಇಡಿ ಪತ್ತೆ ಮಾಡಿದೆ. ತನಿಖಾ ಸಂಸ್ಥೆಯು ವಿಚಾರಣೆ ನಡೆಸಿದಾಗ ಜ್ಯೋತಿಪ್ರಿಯೋ ಮಲ್ಲಿಕ್ ಅವರ ಹೆಸರನ್ನೂ ಆಧ್ಯಾ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

    ಮೂಲಗಳ ಪ್ರಕಾರ ಈ ಟಿಎಂಸಿ ನಾಯಕನಿಗೆ ಬಂಗಾವ್‌ನಲ್ಲಿ ಅಕ್ಕಿ ಗಿರಣಿ ಮತ್ತು ವಿದೇಶಿ ಹಣ ವಿನಿಮಯದ ವ್ಯವಹಾರವಿದೆ.

    ಇಡಿ ತಂಡ ದಾಳಿ ಮಾಡಿದೆ
    ಪಡಿತರ ವಿತರಣಾ ಹಗರಣದಲ್ಲಿ ಷಹಜಹಾನ್ ಶೇಖ್ ನಿವಾಸದ ಮೇಲೆ ದಾಳಿ ಮಾಡಲು ಹೋಗುತ್ತಿದ್ದಾಗ ಶೇಖ್ ಅವರ ಬೆಂಬಲಿಗರು ಇಡಿ ಅಧಿಕಾರಿಗಳ ಮೇಲೆ ದಾಳಿ ನಡೆಸಿದ್ದರು. ದಾಳಿಯ ವೇಳೆ ವಾಹನಗಳನ್ನೂ ಧ್ವಂಸಗೊಳಿಸಲಾಗಿದೆ.

    ಗಾಳಿಯಲ್ಲಿಯೇ ಹಾರಿಹೋದ ವಿಮಾನದ ಬಾಗಿಲು: ಆತಂಕಕಾರಿ ದೃಶ್ಯ ವಿಡಿಯೋದಲ್ಲಿ ಸೆರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts