More

    ಗಾಳಿಯಲ್ಲಿಯೇ ಹಾರಿಹೋದ ವಿಮಾನದ ಬಾಗಿಲು: ಆತಂಕಕಾರಿ ದೃಶ್ಯ ವಿಡಿಯೋದಲ್ಲಿ ಸೆರೆ

    ನವದೆಹಲಿ: ಅಲಾಸ್ಕಾ ಏರ್‌ಲೈನ್ಸ್‌ನ ಬೋಯಿಂಗ್ 737-9 ಮ್ಯಾಕ್ಸ್ ವಿಮಾನವು ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ಅದರ ಒಂದು ಬಾಗಿಲು ಗಾಳಿಯಲ್ಲಿ ತೆರೆದುಕೊಂಡಿದ್ದರಿಂದ ತುರ್ತು ಪರಿಸ್ಥಿತಿ ಎದುರಿಸಬೇಕಾಯಿತು.
    ಮಧ್ಯ-ಕ್ಯಾಬಿನ್ ನಿರ್ಗಮನ ಬಾಗಿಲು ವಿಮಾನದಿಂದ ಸಂಪೂರ್ಣವಾಗಿ ಬೇರ್ಪಟ್ಟಿರುವುದನ್ನು ಪ್ರಯಾಣಿಕರು ತೆಗೆದ ವೀಡಿಯೊಗಳು ತೋರಿಸುತ್ತವೆ.

    “ಪೋರ್ಟ್‌ಲ್ಯಾಂಡ್‌ನಿಂದ ಒಂಟಾರಿಯೊಗೆ ನಿರ್ಗಮನದ ನಂತರ ಈ ಘಟನೆಯನ್ನು ನಡೆದಿದೆ. ವಿಮಾನವು 171 ಪ್ರಯಾಣಿಕರು ಮತ್ತು 6 ಸಿಬ್ಬಂದಿಯೊಂದಿಗೆ ಪೋರ್ಟ್‌ಲ್ಯಾಂಡ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಮರಳಿದೆ. ಏನಾಯಿತು ಎಂಬುದನ್ನು ನಾವು ತನಿಖೆ ಮಾಡುತ್ತಿದ್ದೇವೆ” ಎಂದು ಅಲಾಸ್ಕಾ ಏರ್‌ಲೈನ್ಸ್ ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ ಹೇಳಿದೆ.

    ಅಲಾಸ್ಕಾ ಏರ್‌ಲೈನ್ಸ್ ಫ್ಲೈಟ್ 1282 ಒಳಗೊಂಡ ಘಟನೆಯನ್ನು ತನಿಖೆ ಮಾಡಲಾಗುತ್ತಿದೆ ಎಂದು ಅಮೆರಿಕದ ನ್ಯಾಷನಲ್ ಟ್ರಾನ್ಸ್‌ಪೋರ್ಟೇಶನ್ ಸೇಫ್ಟಿ ಬೋರ್ಡ್ (ಎನ್‌ಟಿಎಸ್‌ಬಿ) ಎಕ್ಸ್‌ ಪೋಸ್ಟ್‌ನಲ್ಲಿ ಹೇಳಿದೆ.

    ಸುರಕ್ಷಿತವಾಗಿ ಪೋರ್ಟ್‌ಲ್ಯಾಂಡ್‌ಗೆ ಹಿಂತಿರುಗಿಸುವ ಮೊದಲು ವಿಮಾನವು ಗರಿಷ್ಠ 16,325 ಅಡಿ ಎತ್ತರವನ್ನು ತಲುಪಿತ್ತು. ಈ ಬೋಯಿಂಗ್ 737 ಮ್ಯಾಕ್ಸ್ ವಿಮಾನವು ಅಕ್ಟೋಬರ್ 1, 2023 ರಂದು ಅಲಾಸ್ಕಾ ಏರ್‌ಲೈನ್ಸ್‌ಗೆ ವಿತರಿಸಲಾಗಿದ್ದು, ನವೆಂಬರ್ 11, 2023 ರಂದು ವಾಣಿಜ್ಯ ಸೇವೆ ಆರಂಭಿಸಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts