More

    ಸಾರ್ವಜನಿಕರ ಮನೆ ಬಾಗಿಲಿಗೆ ಪುರಸಭೆ ಸೇವೆ

    ಹೂವಿನಹಡಗಲಿ: ಸಾರ್ವಜನಿಕರು ಸೇವೆಗಾಗಿ ಪದೆ ಪದೆ ಪುರಸಭೆ ಕಚೇರಿಗೆ ಅಲೆದಾಡುವುದನ್ನು ತಪ್ಪಿಸಲು ಖಾತಾ ನಕಲು ವಿತರಣಾ ಅಭಿಯಾನ ಆಯೋಜಿಸಲಾಗಿದೆ ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕ ನಾಗರಾಜ ಹೇಳಿದರು.

    ಇದನ್ನೂ ಓದಿ: ಸಾರ್ವಜನಿಕರ ಮನೆ ಬಾಗಿಲಿಗೆ ಪುರಸಭೆ ಸೇವೆ

    ಜಿಲ್ಲಾಧಿಕಾರಿಗಳ ಆದೇಶದಂತೆ ಪುರಸಭೆಯಿಂದ ಶುಕ್ರವಾರ ಮನೆ ಮನೆಗೆ ತೆರಳಿ ಖಾತಾ ನಕಲು ವಿತರಣಾ ಅಭಿಯಾನವನ್ನು ಆರಂಭಿಸಿ ಮಾತನಾಡಿದರು.
    ಖಾತಾ ನಕಲು (ಫಾರ್ಮ್-3) ಪಡೆಯಲು ಬಂದ ಸಾರ್ವಜನಿಕರು ಸಕಾಲದಲ್ಲಿ ಅರ್ಜಿ ಸಲ್ಲಿಸಿದಲ್ಲಿ ಅದರ ನಿಯಮ ಪಾಲನೆ ಮಾಡಿ ಕೊಡಲು ಏಳು ದಿನದ ಸಮಯ ಇರುತ್ತದೆ.

    ತೆರಿಗೆ ಕಟ್ಟಿದ ರಸೀದಿ ಪ್ರತಿಗಳು ಸೇರಿ ಹಕ್ಕು ನಿರೂಪಿಸುವ ದಾಖಲಾತಿಗಳು ಸರಿ ಇದ್ದಲ್ಲಿ ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಖಾತಾ ನಕಲು ನೀಡಲಾಗುವುದು. ಖಾತಾ ನಕಲು ನೇರವಾಗಿ ಬಡವರ ಮನೆ ಸೇರುವಲ್ಲಿ ಈ ಅಭಿಯಾನ ಯಶಸ್ವಿಯಾಗಲಿದೆ ಎಂದರು.

    ಪುರಸಭೆ ಮುಖ್ಯಾಧಿಕಾರಿ ಪಚ್ಚಿ ಮಲ್ಲೇಶ ಮಾತನಾಡಿ, ಬಡವರಿಗೆ ಪುರಸಭೆಯಿಂದಲೇ ಫಾರ್ಮ್ ಮೊತ್ತವನ್ನು ಕಟ್ಟಿಕೊಂಡು ಖಾತಾ ನಕಲನ್ನು ಮನೆ ಬಾಗಿಲಿಗೆ ತಲುಪಿಸಲಾಗುವುದು.

    ಸಾರ್ವಜನಿಕರಲ್ಲಿ ಪುರಸಭೆ ಅಧಿಕಾರಿಗಳು ಸೇವೆಗಳನ್ನು ಒದಗಿಸಲು ತಡ ಮಾಡುತ್ತಾರೆ ಎನ್ನುವ ಮನೋಭಾವನೆಯನ್ನು ತಪ್ಪಿಸಲು ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕಟ್ಟಡ, ಉದ್ಯುಮೆ ಪರವಾನಿಗೆಗಳನ್ನು ಮನೆ ಮನೆಗೆ ತಲುಪಿಸುತ್ತಿದೆ.

    150 ಖಾತಾ ನಕಲು, 10 ಕಟ್ಟಡ ಪರವಾನಿಗೆ, 15 ಉದ್ಯಮೆ ವಿತರಣೆ ಮಾಡಲಾಗುತ್ತಿದೆ. ಇದೇ ರೀತಿ ತಿಂಗಳಿಗೊಂದು ಕಾರ್ಯಕ್ರಮವನ್ನು ಆಯೋಜನೆ ಮಾಡಿ ಸಾರ್ವಜನಕರ ಮನೆ ಬಾಗಿಲಿಗೆ ಪುರಸಭೆ ಸೇವೆ ಒದಗಿಸಲಾಗುವುದು. ತೆರಿಗೆ ಹಣವನ್ನು ಬಾಕಿ ಉಳಿಸಿಕೊಳ್ಳದೆ ಪಾವತಿ ಮಾಡಬೇಕು ಎಂದು ಮನವಿ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts