More

    ಮತದಾನ ಸಂವಿಧಾನದತ್ತ ಹಕ್ಕು: ಪುರಸಭೆ ಮುಖ್ಯಾಧಿಕಾರಿ ಎ.ವಾಸಿಂ ಹೇಳಿಕೆ

    ಚನ್ನಗಿರಿ: ಹದಿನೆಂಟು ವರ್ಷ ತುಂಬಿದ ಪ್ರತಿಯೊಬ್ಬರೂ ಕಡ್ಡಾಯ ಮತದಾನ ಮಾಡಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಎ. ವಾಸಿಂ ಹೇಳಿದರು.

    ಪಟ್ಟಣದ ಮುಖ್ಯ ನಿಲ್ದಾಣ ಬಳಿ ಶುಕ್ರವಾರ ತಾಲೂಕು ಆಡಳಿತ, ಪುರಸಭೆ, ತಾಪಂ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಅಂಗವಿಕಲರಿಗೆ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಮತದಾನ ಸಂವಿಧಾನ ನಮಗೆ ನೀಡಿದ ಹಕ್ಕು. ಉತ್ತಮ ನಾಯಕರ ಆಯ್ಕೆ ನಮ್ಮ ಕೈಯಲ್ಲಿದೆ. ಆಸೆ, ಆಮಿಷಗಳಿಗೆ ಬಲಿಯಾದರೆ ಉತ್ತಮ ನಾಯಕನ ಆಯ್ಕೆ ಅಸಾಧ್ಯ. ದೇಶದ ಭದ್ರತೆ, ದೇಶ, ರಾಜ್ಯ, ಜಿಲ್ಲೆ, ತಾಲೂಕು ಅಭಿವೃದ್ಧಿ ಮಾಡುವಂಥ ಹಾಗೂ ಕಷ್ಟ ಸುಖಗಳಿಗೆ ಸ್ಪಂದಿಸುವಂಥ ವ್ಯಕ್ತಿ ಆಯ್ಕೆಗೆ ಆದ್ಯತೆ ನೀಡಿ ಎಂದರು.

    ಯುವಜನತೆ ದೇಶದ ಆಸ್ತಿ. ಐದು ವರ್ಷಗಳಿಗೊಮ್ಮೆ ಬರುವ ಚುನಾವಣೆಯಲ್ಲೂ ಮತ ಹಾಕುವವರ ಸಂಖ್ಯೆ ಕಡಿಮೆಯಾಗಿದೆ. ಶೇಕಡಾ ನೂರರಷ್ಟು ಮತದಾನ ಹಾಕುವಂತೆ ಸರ್ಕಾರ, ಚುನಾವಣೆ ಆಯೋಗ ಪ್ರಚಾರ ಮಾಡಿದರೂ ಶೇ. 30ರಷ್ಟು ಮತದಾನ ಆಗುತ್ತಿಲ್ಲ ಎಂದರು.

    ತಾಪಂ ಕಾರ್ಯನಿರ್ವಹಣಾಧಿಕಾರಿ ಪಿ.ಕೆ. ಉತ್ತಮ್, ಆರೋಗ್ಯ ನಿರೀಕ್ಷಕ ಶಿವರುದ್ರಪ್ಪ, ಮಂಜುನಾಥ್, ಅಂಗವಿಕಲರ ಸಂಘದ ಅಧ್ಯಕ್ಷ ಸುಬ್ರಮಣ್ಯ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts