More

    ವಿಮಾನ ಹಾರಾಟ ವಿಳಂಬ; ಎಲ್ಲಾ ವಿಮಾನಯಾನ ಸಂಸ್ಥೆಗಳಿಗೆ ಸೂಚನೆ ನೀಡಿದ ಡಿಜಿಸಿಎ

    ಮುಂಬೈ: ಕಾರ್ಯಾಚರಣೆಯ ಸಮಸ್ಯೆಯಿಂದಾಗಿ ಗೋವಾದಿಂದ ದೆಹಲಿಗೆ ತೆರಳಬೇಕಿದ್ದ ಇಂಡಿಗೋದ ವಿಮಾನವನ್ನು ಮುಂಬೈಗೆ ತಿರುಗಿಸಲಾಯಿತು. ಇದಾದ ಬಳಿಕ ಮುಂಬೈ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ನೆಲದ ಮೇಲೆ ಕುಳಿತು ಆಹಾರ ಸೇವಿಸುತ್ತಿರುವುದು ಕಂಡುಬಂದಿತು. ಈ ಘಟನೆಯ ವಿಡಿಯೋ ಕೂಡ ವೈರಲ್ ಆಗಿದೆ. ವಿಮಾನ ನಿಲ್ದಾಣದ ಮೂಲಗಳಿಂದ ವಿಮಾನದ ಮಾರ್ಗವನ್ನು ದೃಢಪಡಿಸಿರುವುದಾಗಿ ಸುದ್ದಿ ಸಂಸ್ಥೆ ANI ತಿಳಿಸಿದೆ.
    ಇಂಡಿಗೋ, ಜನವರಿ 14 ರಂದು ಗೋವಾದಿಂದ ದೆಹಲಿಗೆ ಇಂಡಿಗೋ ವಿಮಾನ 6E2195 ಘಟನೆಯ ಬಗ್ಗೆ ನಮಗೆ ತಿಳಿದಿದೆ. ದೆಹಲಿಯಲ್ಲಿ ಗೋಚರತೆ ಕಡಿಮೆಯಾದ ಕಾರಣ ವಿಮಾನವನ್ನು ಮುಂಬೈಗೆ ತಿರುಗಿಸಲಾಯಿತು. ನಾವು ನಮ್ಮ ಗ್ರಾಹಕರಲ್ಲಿ ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇವೆ ಮತ್ತು ಪ್ರಸ್ತುತ ಘಟನೆಯ ಕುರಿತು ತನಿಖೆ ನಡೆಸುತ್ತಿದ್ದೇವೆ ಎಂದು ಹೇಳಿದೆ.

    ವಿಡಿಯೋದಲ್ಲಿ ಏನಿದೆ?
    ರಾತ್ರಿ ವೇಳೆ ಇಂಡಿಗೋ ವಿಮಾನ ನಿಲುಗಡೆ ಮಾಡಿದ್ದು, ಪಕ್ಕದಲ್ಲೇ ಕೆಲವರು ನೆಲದ ಮೇಲೆ ಕುಳಿತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ. ಕೆಲವರ ಕೈಯಲ್ಲಿ ಫೋನ್‌ಗಳಿವೆ, ಕೆಲವರು ತಮ್ಮಲ್ಲೇ ಮಾತನಾಡಿಕೊಳ್ಳುತ್ತಿದ್ದಾರೆ ಮತ್ತು ಕೆಲವರು ಆಹಾರ ಸೇವಿಸುತ್ತಿರುವುದು ಕಂಡುಬಂದಿದೆ.

    ಎಲ್ಲಾ ವಿಮಾನಯಾನ ಸಂಸ್ಥೆಗಳಿಗೆ ಸೂಚನೆ ನೀಡಿದ ಡಿಜಿಸಿಎ
    ಏತನ್ಮಧ್ಯೆ, ಮಂಜು ಸಂಬಂಧಿತ ಅಡೆತಡೆಗಳ ನಡುವೆ ವಿಮಾನ ವಿಳಂಬದ ಬಗ್ಗೆ ನಿಖರವಾದ ನೈಜ ಸಮಯದ ಮಾಹಿತಿಯನ್ನು ಹಂಚಿಕೊಳ್ಳಲು ವಿಮಾನಯಾನ ನಿಯಂತ್ರಕ ಡಿಜಿಸಿಎ ಎಲ್ಲಾ ವಿಮಾನಯಾನ ಸಂಸ್ಥೆಗಳನ್ನು ಕೇಳಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ತಿಳಿಸಿದೆ. ವಿಮಾನ ನಿಲ್ದಾಣಗಳಲ್ಲಿ ಕಾಯುತ್ತಿರುವ ಪ್ರಯಾಣಿಕರಿಗೆ ವಿಮಾನ ವಿಳಂಬದ ಬಗ್ಗೆ ನವೀಕರಿಸಿದ ಮಾಹಿತಿಯನ್ನು ಒದಗಿಸಲು DGCN ವಿಮಾನಯಾನ ಸಂಸ್ಥೆಗಳನ್ನು ಕೇಳಿದೆ.

    ಪೈಲಟ್ ಮೇಲೆ ಹಲ್ಲೆ ಪ್ರಕರಣ 
    ಇಂಡಿಗೋ ವಿಮಾನದ ಪ್ರಯಾಣಿಕನೊಬ್ಬ ವಿಮಾನದ ಸಹ-ಕ್ಯಾಪ್ಟನ್‌ನ ಮೇಲೆ ಹಲ್ಲೆ ನಡೆಸುತ್ತಿರುವ ಆಘಾತಕಾರಿ ವಿಡಿಯೋ ಕೂಡ ವೈರಲ್ ಆಗುತ್ತಿದೆ. ಮಾಧ್ಯಮ ವರದಿಗಳ ಪ್ರಕಾರ, ಭಾನುವಾರ (ಜನವರಿ 14) ದೆಹಲಿಯಿಂದ ಗೋವಾಕ್ಕೆ ಇಂಡಿಗೋ ವಿಮಾನ A20N ವಿಳಂಬದ ಕಾರಣ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 10 ಗಂಟೆಗಳಿಗೂ ಹೆಚ್ಚು ಕಾಲ ನಿಂತಿತ್ತು. ವಿಮಾನ ವಿಳಂಬವಾಗಿದೆ ಎಂದು ಘೋಷಿಸುತ್ತಿದ್ದಾಗ ವಿಮಾನದಲ್ಲಿದ್ದ ಪ್ರಯಾಣಿಕ ಪೈಲಟ್ ಮೇಲೆ ಹಲ್ಲೆ ನಡೆಸಿದ್ದಾನೆ. ನಂತರ ಪ್ರಯಾಣಿಕರು ಪೊಲೀಸ್ ಕ್ರಮವನ್ನು ಎದುರಿಸಬೇಕಾಯಿತು. ಮೊನ್ನೆ ಶನಿವಾರ (ಜನವರಿ 13) ಮುಂಬೈನಿಂದ ಗುವಾಹಟಿಗೆ ತೆರಳುತ್ತಿದ್ದ ಇಂಡಿಗೋ ವಿಮಾನವನ್ನು ಕೆಟ್ಟ ಹವಾಮಾನದಿಂದಾಗಿ ಬಾಂಗ್ಲಾದೇಶದ ಢಾಕಾ ಕಡೆಗೆ ತಿರುಗಿಸಲಾಯಿತು.

    ಅಯೋಧ್ಯೆ: ಧ್ವಜ ವಿಚಾರವಾಗಿ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಭಕ್ತರ ನಡುವೆ ಘರ್ಷಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts