More

  ಗ್ರಾಪಂ ಸೂಚನಾ ಫಲಕಕ್ಕೆ ಬರ ಪರಿಹಾರ ಪಟ್ಟಿ

  ಕನಕಗಿರಿ: ಬರ ಪರಿಹಾರದ ಮೊದಲ ಕಂತಿನ ಎರಡು ಸಾವಿರ ರೂ. ರಾಜ್ಯ ಸರ್ಕಾರ ಬಿಡುಗಡೆ ಮಾಡಿದ್ದು, ಪರಿಹಾರ ಹಣ ಪಡೆದ ರೈತರ ಪಟ್ಟಿಯನ್ನು ಕಂದಾಯ ಇಲಾಖೆ ಅಧಿಕಾರಿಗಳು ಗ್ರಾಮ ಪಂಚಾಯತ ಸೂಚನಾ ಫಲಕಕ್ಕೆ ಅಳವಡಿಸುತ್ತಿದ್ದಾರೆ.

  ಇದನ್ನೂ ಓದಿ: ಉದ್ಯೋಗ ಖಾತ್ರಿಯಲ್ಲಿ ಪಾರದರ್ಶಕತೆ: ಸೂಚನಾ ಫಲಕ ಕಡ್ಡಾಯ

  ಪರಿಹಾರ ಬಂದ ತಾಲೂಕು ವ್ಯಾಪ್ತಿಯ 11 ಗ್ರಾಪಂಗಳ ಸೂಚನಾ ಫಲಕಕ್ಕೆ ಅಳವಡಿಸಲಾಗಿದ್ದು, ಗ್ರಾಪಂ ವ್ಯಾಪ್ತಿ ರೈತರು ಪಟ್ಟಿಯಲ್ಲಿ ತಮ್ಮ ಹೆಸರುಗಳು ಇವೆಯೋ ಇಲ್ಲವೋ ಎಂಬುದನ್ನು ಖಚಿತ ಪಡಸಿಕೊಳ್ಳಬೇಕು ಎಂದು ಕಂದಾಯ ಇಲಾಖೆ ಅಧಿಕಾರಿಗಳು ತಿಳಿಸಿದರು.

  ಶಿರಸ್ತೇದಾರ ಶರಣಪ್ಪ, ಆಯಾ ಹೋಬಳಿ ವ್ಯಾಪ್ತಿಯ ಕಂದಾಯ ನಿರೀಕ್ಷಕರಾದ ಬಸ್ರುದ್ದೀನ್, ಹನುಮಂತಪ್ಪ, ರವಿಕುಮಾರ ನಾಯ್ಕ, ಗ್ರಾಮಾಧಿಕಾರಿಗಳಾದ ಶಿವು, ಕುಮಾರ, ರಾಜು ರಾಠೋಡ್, ಮೆಹಬೂಬ್ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts