More

  ಉದ್ಯೋಗ ಖಾತ್ರಿಯಲ್ಲಿ ಪಾರದರ್ಶಕತೆ: ಸೂಚನಾ ಫಲಕ ಕಡ್ಡಾಯ

  ಬೆಂಗಳೂರು: ಉದ್ಯೋಗ ಖಾತ್ರಿ ಅನುಷ್ಠಾನದಲ್ಲಿ ಮತ್ತಷ್ಟು ಪಾರದರ್ಶಕತೆ ತರಲು ಸರ್ಕಾರ ಮುಂದಾಗಿದೆ. ಕಾಮಗಾರಿಯ ಮಾಹಿತಿ ತಿಳಿಸುವ ಸೂಚನಾ ಫಲಕ ಅಳವಡಿಕೆ ಕಡ್ಡಾಯಗೊಳಿಸುವುದರ ಜತೆಗೆ ಸೂಚನಾ ಫಲಕ ಅಳವಡಿಕೆಗೆ ತಗಲುವ ದರ ನಿಗದಿ ಮಾಡಿ ಸುತ್ತೋಲೆ ಹೊರಡಿಸಿದೆ.

  ಅನೇಕ ಕಡೆ ಕಾಮಗಾರಿ ನಿರ್ವಹಿಸುತ್ತಿದ್ದರೂ ಜನರಿಗೆ ಯಾವ ಯೋಜನೆಯಡಿ ಕಾಮಗಾರಿ ಕೈಗೆತ್ತಿಕೊಳ್ಳುತ್ತಾರೆ. ಎಷ್ಟು ಅನುದಾನ ನಿಗದಿಯಾಗಿದೆ. ಕಾಮಗಾರಿ ವಿವರ ಏನು ಎಂಬ ಇತ್ಯಾದಿ ವಿವರಗಳು ಸಿಗುತ್ತಿರಲಿಲ್ಲ. ಜನರು ಯೋಜನೆಯ ಮಾಹಿತಿಗೆ ಕಚೇರಿಯಿಂದ ಕಚೇರಿಗೆ ಅಲೆಯಬೇಕಾದ ಪರಿಸ್ಥಿತಿ ಇತ್ತು. ಈ ಹಿನ್ನೆಲೆಯಲ್ಲಿ ಜನರಿಗೆ ಕಾಮಗಾರಿಯ ಮಾಹಿತಿ ಸುಲಭವಾಗಿ ದೊರೆಯಬೇಕು ಹಾಗೂ ಕಾಮಗಾರಿಯಲ್ಲಿ ಯಾವುದೇ ಅವ್ಯವಹಾರವಾಗದಂತೆ ಪಾರದರ್ಶಕತೆ ಕಾಯ್ದುಕೊಳ್ಳಬೇಕೆಂಬ ಹಿನ್ನೆಲೆಯಲ್ಲಿ ಸೂಚನಾ ಲಕ ಅಳವಡಿಕೆಯನ್ನು ಕಡ್ಡಾಯಗೊಳಿಸಲಾಗಿದೆ. ನರೇಗಾ ಯೋಜನೆಯಡಿ ಅನುಷ್ಠಾನಗೊಳಿಸುವ ಎಲ್ಲ ಸಮುದಾಯ ಹಾಗೂ ವೈಯಕ್ತಿಕ ಕಾಮಗಾರಿಗಳಿಗೆ ಕಡ್ಡಾಯವಾಗಿ ಕಾಮಗಾರಿಯ ಮಾಹಿತಿ ತಿಳಿಸುವ ಸೂಚನಾ ಫಲಕ ಅಳವಡಿಸಲು ತಿಳಿಸಲಾಗಿತ್ತು. ಆದರೆ, ಹಲವು ಕಾಮಗಾರಿಗಳ ಪ್ರದೇಶಗಳಲ್ಲಿ ಕಾಮಗಾರಿಯ ಮಾಹಿತಿ ತಿಳಿಸುವ ಸೂಚನಾ ಫಲಕವನ್ನು ಅಳವಡಿಸದೆ ಇರುವುದು ಕಂಡುಬಂದಿರುವ ಹಿನ್ನೆಲೆಯಲ್ಲಿ ಈ ಉಪಕ್ರಮ ಕೈಗೊಳ್ಳಲಾಗಿದೆ.
  ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯ ರವರು ನೀಡಿರುವ ನಿರ್ದೇಶನದ ಅನ್ವಯ, ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿಗಳಿಗೆ ಸೂಚನಾ ಫಲಕದ ಮೊತ್ತವನ್ನೂ ನಿಗದಿಪಡಿಸಲಾಗಿದೆ. ಸೂಚನಾ ಲಕಕ್ಕೆ ತಗಲುವ ವೆಚ್ಚವನ್ನು ಆಯಾ ಕಾಮಗಾರಿಗಳ ಅಂದಾಜು ಪಟ್ಟಿಯಲ್ಲಿ ಸೇರಿಸಿ ಮಂಜೂರಾತಿ ಪಡೆಯುವಂತೆ ಗ್ರಾಮೀಣಾಭಿವೃದ್ಧಿ ಆಯುಕ್ತಾಲಯ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚಿಸಿದೆ.

  ಸೂಚನಾ ಫಲಕ ಯಾವುದಕ್ಕೆ , ಎಷ್ಟು?:
  ಸಮುದಾಯ ಆಧಾರಿತ ಕಾಮಗಾರಿ( 10 ಲಕ್ಷ ರೂ.ವರೆಗೆ)- 1500 ರೂ.
  ಸಮುದಾಯ ಆಧಾರಿತ ಕಾಮಗಾರಿ(10 ಲಕ್ಷ-20 ಲಕ್ಷದ ವರೆಗೆ)-3000 ರೂ.
  ಸಮುದಾಯ ಆಧಾರಿತ ಕಾಮಗಾರಿ(20 ಲಕ್ಷ ರೂ. ಮೇಲ್ಪಟ್ಟು)-5000ರೂ.
  ವೈಯಕ್ತಿಕ ಆಧಾರಿತ ಕಾಮಗಾರಿ(1 ಲಕ್ಷ ರೂ.ವರೆಗೆ)-1500 ರೂ.
  ವೈಯಕ್ತಿಕ ಆಧಾರಿತ ಕಾಮಗಾರಿ(1 ಲಕ್ಷ ರೂ. ಮೇಲ್ಪಟ್ಟು)-3000 ರೂ.
  ಸಮುದಾಯ/ವೈಯಕ್ತಿಕ ಗೋಡೆ ಬರಹಗಳಿಗೆ-500 ರೂ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts