More

    ಅಯೋಧ್ಯೆ: ಧ್ವಜ ವಿಚಾರವಾಗಿ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಭಕ್ತರ ನಡುವೆ ಘರ್ಷಣೆ

    ಅಯೋಧ್ಯೆ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. ಸದ್ಯದಲ್ಲೇ ರಾಮಲಲ್ಲಾ ಮೂರ್ತಿಯನ್ನು ದೇಗುಲದ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲಾಗುತ್ತಿದ್ದು, ಇಡೀ ದೇಶದಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ. ಆದರೆ, ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದ ಆಹ್ವಾನವನ್ನು ಕಾಂಗ್ರೆಸ್ ಸೇರಿದಂತೆ ಹಲವು ವಿರೋಧ ಪಕ್ಷಗಳ ಮುಖಂಡರು ತಿರಸ್ಕರಿಸಿರುವುದರಿಂದ ರಾಜಕೀಯವೂ ತೀವ್ರಗೊಂಡಿದೆ. ಏತನ್ಮಧ್ಯೆ, ಸೋಮವಾರ, ಉತ್ತರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಅಜಯ್ ರೈ, ದೀಪೇಂದ್ರ ಹೂಡಾ ಸೇರಿದಂತೆ ಕಾಂಗ್ರೆಸ್ ನಿಯೋಗ ಅಯೋಧ್ಯೆಗೆ ಭೇಟಿ ನೀಡಿತು. ಈ ಸಮಯದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಇಲ್ಲಿನ ಜನರ ನಡುವೆ ವಾಗ್ವಾದ ನಡೆದಿದೆ ಎನ್ನಲಾಗಿದೆ.

    ಅಯೋಧ್ಯೆಗೆ ಕಾಂಗ್ರೆಸ್ ನಾಯಕರ ಆಗಮನ
    ಅಜಯ್ ರೈ ಸೇರಿದಂತೆ ಹಲವು ಕಾಂಗ್ರೆಸ್​​​​ ನಾಯಕರು ಮಕರ ಸಂಕ್ರಾಂತಿಯ ಸಂದರ್ಭದಲ್ಲಿ ದರ್ಶನಕ್ಕಾಗಿ ಅಯೋಧ್ಯೆಗೆ ಆಗಮಿಸಿದ್ದರು. ಇಲ್ಲಿ ಕಾಂಗ್ರೆಸ್ ನಾಯಕರು ಸರಯೂ ನದಿಯಲ್ಲಿ ಸ್ನಾನ ಮಾಡಿ ನಂತರ ಹನುಮಾನ್ ಗರ್ಹಿ ಮತ್ತು ರಾಮಮಂದಿರ ದೇಗುಲಕ್ಕೆ ಭೇಟಿ ನೀಡಿದರು. “ನಮ್ಮ ನಾಲ್ವರೂ ಶಂಕರಾಚಾರ್ಯರು ಜನವರಿ 22 ರಂದು ನಡೆಯಲಿರುವ ಕಾರ್ಯಕ್ರಮಕ್ಕೆ ಹಾಜರಾಗಲು ಈಗಾಗಲೇ ನಿರಾಕರಿಸಿದ್ದಾರೆ. ಪ್ರಧಾನಿ ಮೋದಿ ಇದನ್ನು ತಮ್ಮ ವೈಯಕ್ತಿಕ ಕಾರ್ಯಕ್ರಮವನ್ನಾಗಿ ಮಾಡಿಕೊಳ್ಳುತ್ತಿದ್ದಾರೆ” ಎಂದು ಅಜಯ್ ಹೇಳಿದರು.

    ಅಯೋಧ್ಯೆಗೆ ಕಾಂಗ್ರೆಸ್ ನಾಯಕರ ಭೇಟಿ ವೇಳೆ ಕೆಲವರು ರಾಮ ಮಂದಿರದ ಹೊರಗೆ ಕಾಂಗ್ರೆಸ್ ಧ್ವಜವನ್ನು ಎಳೆದಾಡುತ್ತಿರುವುದು ಕಂಡುಬಂದಿದೆ. “ಕೆಲವು ಸಮಾಜ ವಿರೋಧಿಗಳು ನಮ್ಮ ಪಕ್ಷದ ಧ್ವಜವನ್ನು ಕಸಿದುಕೊಂಡು ನಮ್ಮ ಪಕ್ಷದ ಕಾರ್ಯಕರ್ತರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ. ಇದು ನಾಚಿಕೆಗೇಡಿನ ಮತ್ತು ಖಂಡನೀಯ ಕೃತ್ಯ. ರಾಮ ಮಂದಿರ ಎಲ್ಲರಿಗೂ ಸೇರಿದ್ದು” ಎಂದು ಅಯೋಧ್ಯೆ ಕಾಂಗ್ರೆಸ್ ಮಹಿಳಾ ಉಸ್ತುವಾರಿ ರೇಣು ರೈ ಹೇಳಿದ್ದಾರೆ.

    ಪೊಲೀಸರು ಹೇಳಿದ್ದೇನು?
    ಎರಡು ಗುಂಪುಗಳ ನಡುವಿನ ಘರ್ಷಣೆಯ ಕುರಿತು ಅಯೋಧ್ಯೆ ಎಸ್ಪಿ ಮಧುಬನ್ ಸಿಂಗ್ ಮಾತನಾಡಿ, ಕಾಂಗ್ರೆಸ್ ಪಕ್ಷದ ನಿಯೋಗವು ಅಯೋಧ್ಯಾ ಧಾಮಕ್ಕೆ ದರ್ಶನ ಮತ್ತು ಪೂಜೆಗಾಗಿ ಬಂದಿತ್ತು ಎಂದು ಹೇಳಿದ್ದಾರೆ. ನಿಯೋಗದ ಎಲ್ಲಾ ಸದಸ್ಯರು ರಾಮ ಜನ್ಮಸ್ಥಳದಲ್ಲಿ ದರ್ಶನ ಪಡೆಯಲು ಒಳಗೆ ಹೋದಾಗ, ಕೆಲವರು ಹೊರಗೆ ತಮ್ಮ ತಮ್ಮಲ್ಲೇ ಜಗಳವಾಡಿದರು. ಧ್ವಜಾರೋಹಣ ಮಾಡುವ ಬಗ್ಗೆ ಕೆಲವರು ಮಾತನಾಡುತ್ತಿದ್ದರು ಎಂದು ಸ್ಥಳೀಯರು ಹೇಳಿದ್ದಾರೆ, ತನಿಖೆ ನಡೆಸಲಾಗುತ್ತಿದೆ ಎಂದರು.

    ಬಾಲರಾಮನ ವಿಗ್ರಹ ಪ್ರತಿಷ್ಠಾಪನೆಯ ನಂತರ ಹಳೆಯ ಮೂರ್ತಿ ಎಲ್ಲಿಡಲಾಗುತ್ತದೆ? ಇಲ್ಲಿದೆ ನೋಡಿ ಉತ್ತರ

    ದಟ್ಟವಾದ ಮಂಜು: ಅನೇಕ ವಿಮಾನಗಳು ಮತ್ತು ರೈಲುಗಳ ಸಂಚಾರ ರದ್ದು, ದೇಶದ ಈ ರಾಜ್ಯಗಳಲ್ಲಿ ಭಾರೀ ಮಳೆ ಎಚ್ಚರಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts