More

    ಬಾಲರಾಮನ ವಿಗ್ರಹ ಪ್ರತಿಷ್ಠಾಪನೆಯ ನಂತರ ಹಳೆಯ ಮೂರ್ತಿ ಎಲ್ಲಿಡಲಾಗುತ್ತದೆ? ಇಲ್ಲಿದೆ ನೋಡಿ ಉತ್ತರ

    ಅಯೋಧ್ಯೆ: ಜ.22 ರಂದು ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಭರದ ಸಿದ್ಧತೆ ನಡೆಯುತ್ತಿದೆ. ಕಾರ್ಯಕ್ರಮದಲ್ಲಿ ಮೈಸೂರಿನ ಅರುಣ್ ಯೋಗಿರಾಜ್ ಅವರು ನಿರ್ಮಿಸಿದ ರಾಮಲಲ್ಲಾ ನೂತನ ವಿಗ್ರಹ ಪ್ರತಿಷ್ಠಾಪಿಸಲಾಗುವುದು. ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಸೋಮವಾರ (ಜನವರಿ 15) ಈ ಕುರಿತು ಮಾಹಿತಿ ನೀಡಿದರು. ಹೊಸ ವಿಗ್ರಹ ಪ್ರತಿಷ್ಠಾಪನೆಯ ನಂತರ, ರಾಮಲಲ್ಲಾ ಅವರ ಹಳೆಯ ವಿಗ್ರಹ ಏನು ಮಾಡುತ್ತಾರೆ ಎಂಬ ಪ್ರಶ್ನೆಗಳು ಎದ್ದಿವೆ.

    ಈ ಪ್ರಶ್ನೆಗಳಿಗೆ ಉತ್ತರಿಸಿದ ಚಂಪತ್ ರಾಯ್, ಹೊಸ ರಾಮಮಂದಿರದ ಗರ್ಭಗುಡಿಯಲ್ಲಿ ಈಗಿರುವ ವಿಗ್ರಹವನ್ನೂ ಇಡಲಾಗುವುದು ಎಂದು ಹೇಳಿದರು. ಪ್ರಾಣ ಪ್ರತಿಷ್ಠಾ ವಿಧಿ ಮಂಗಳವಾರದಿಂದ (ಜನವರಿ 16) ಪ್ರಾರಂಭವಾಗಲಿದ್ದು, ಜನವರಿ 21 ರವರೆಗೆ ನಡೆಯಲಿದೆ. ಇದಾದ ನಂತರ ರಾಮಮಂದಿರದಲ್ಲಿ ದೇವರ ಬಾಲರೂಪವನ್ನು ಪ್ರತಿಷ್ಠಾಪಿಸಲಾಗುತ್ತದೆ. ಗುರುವಾರ (ಜನವರಿ 18) ಗರ್ಭಗುಡಿಯಲ್ಲಿ ರಾಮಲಲ್ಲಾ ಪ್ರತಿಷ್ಠಾಪನೆ ನಡೆಯಲಿದೆ ಎಂದು ಚಂಪತ್ ರೈ ತಿಳಿಸಿದ್ದಾರೆ.

    ಚಂಪತ್ ರೈ ಹೇಳಿದ್ದೇನು? 
    ಇಡೀ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದ ಅವರು, ಮಧ್ಯಾಹ್ನ ಅಭಿಜಿತ್ ಮುಹೂರ್ತದಲ್ಲಿ ಪ್ರಾಣ ಪ್ರತಿಷ್ಠೆ ನಡೆಯಲಿದೆ. ಪೂರ್ವಭಾವಿ ವಿಧಿವಿಧಾನಗಳ ಔಪಚಾರಿಕ ಪ್ರಕ್ರಿಯೆಯು ಜನವರಿ 16 ರಿಂದ ಪ್ರಾರಂಭವಾಗಿ ಜನವರಿ 21 ರವರೆಗೆ ಮುಂದುವರಿಯುತ್ತದೆ. ಸಮಾರಂಭದಲ್ಲಿ ಸಾಮಾನ್ಯವಾಗಿ ಏಳು ಅಧಿದೇವತೆಗಳಿದ್ದು, ಕನಿಷ್ಠ ಮೂರು ಅಧಿಷ್ಠಾನಗಳು ಚಾಲ್ತಿಯಲ್ಲಿವೆ ಎಂದು ಚಂಪತ್ ರೈ ಹೇಳಿದರು. ಒಟ್ಟು 121 ಆಚಾರ್ಯರು ಧಾರ್ಮಿಕ ವಿಧಿವಿಧಾನಗಳನ್ನು ನಡೆಸಲಿದ್ದಾರೆ. ಎಲ್ಲಾ ವಿಧಿವಿಧಾನಗಳ ಮೇಲ್ವಿಚಾರಣೆ, ಸಮನ್ವಯ, ನಿರ್ವಹಣೆ ಮತ್ತು ನಿರ್ದೇಶನವನ್ನು ಗಣೇಶ್ವರ ಶಾಸ್ತ್ರಿ ದ್ರಾವಿಡ್, ಮುಖ್ಯ ಆಚಾರ್ಯರಾದ ಕಾಶಿಯ ಲಕ್ಮಿಕಾಂತ್ ಮಥುರಾನಾಥ ದೀಕ್ಷಿತರು ವಹಿಸಲಿದ್ದಾರೆ.

    ಗರ್ಭಗುಡಿಯಲ್ಲಿ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮ ಮುಗಿದ ನಂತರ ಎಲ್ಲರೂ ಒಬ್ಬೊಬ್ಬರಾಗಿ ದರ್ಶನ ಪಡೆಯುತ್ತಾರೆ ಎಂದು ಚಂಪತ್ ರೈ ಹೇಳಿದರು. ಅದೇ ಸಮಯದಲ್ಲಿ, ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಜನವರಿ 22 ರಂದು ತಮ್ಮ ಸುತ್ತಲಿನ ದೇವಾಲಯಗಳನ್ನು ಅಲಂಕರಿಸಲು ಮತ್ತು ದೇವಾಲಯದಲ್ಲಿ ಭಜನೆ, ಪೂಜೆ, ಕೀರ್ತನೆ ಮತ್ತು ಆರತಿಯನ್ನು ಮಾಡುವಂತೆ ಎಲ್ಲಾ ರಾಮ ಭಕ್ತರಿಗೆ ಮನವಿ ಮಾಡಿದೆ.

    ಪರದೆಗಳನ್ನು ಅಳವಡಿಸಿ ಕಾರ್ಯಕ್ರಮದ ನೇರ ಪ್ರಸಾರವನ್ನು ಸಾಮೂಹಿಕವಾಗಿ ವೀಕ್ಷಿಸಬೇಕು ಮತ್ತು ಅದಕ್ಕೂ ಮೊದಲು ಸುತ್ತಮುತ್ತಲಿನ ದೇವಾಲಯಗಳನ್ನು ಸ್ವಚ್ಛಗೊಳಿಸುವ ಮೂಲಕ ಸಂಪೂರ್ಣ ಸ್ವಚ್ಛತೆಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ಮನವಿ ಮಾಡಲಾಗಿದೆ. 

    ನಾಳೆಯಿಂದ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಯ ಪೂಜಾ ವಿಧಿ ವಿಧಾನ ಆರಂಭ..ವಿಗ್ರಹದ ತೂಕ 150 ರಿಂದ 200 ಕೆ.ಜಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts