More

    ದುರ್ಗಾದೇವಿ ಜಾತ್ರಾ ಮಹೋತ್ಸವ ಸಂಪನ್ನ

    ಯಲಬುರ್ಗಾ: ತಾಲೂಕಿನ ತಾಳಕೇರಿ ಗ್ರಾಮದ ಶ್ರೀ ದುರ್ಗಾದೇವಿ ಜಾತ್ರಾ ಮಹೋತ್ಸವ ಪ್ರಯುಕ್ತ ಬುಧವಾರ ಬೆಳಗಿನ ಜಾವ ಪೂಜಾರಿಗಳಿಂದ ಅಕ್ಕಿ ಪಾಯಸ, ಕಾಯಿ ಪವಾಡ ಮತ್ತು ಅಗ್ನಿಕುಂಡ ಪ್ರವೇಶ ಜರುಗಿತು.

    ಶ್ರೀ ದೇವಿಗೆ ವಿಶೇಷ ಅಲಂಕಾರ ಮಂಗಳವಾರ ಮಾಡಲಾಗಿತ್ತು. ಈ ವೇಳೆ ನಾನಾ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಭಕ್ತರು ಕಾಯಿ ಒಡೆಸುವುದು, ದೀರ್ಘದಂಡ ನಮಸ್ಕಾರ, ನಾನಾ ಹರಕೆ ತೀರಿಸಿ, ದುರ್ಗಾದೇವಿಯ ಆಶೀರ್ವಾದ ಪಡೆದು ಪುನೀತರಾದರು.

    ಬುಧವಾರ ಬೆಳಗಿನಜಾವ ಗಂಗಾಪೂಜೆ ಬಳಿಕ ಪೂಜಾರಿಗಳಾದ ಶಂಕ್ರಪ್ಪ ಪೂಜಾರ, ವಿರೂಪಾಕ್ಷಪ್ಪ ಪೂಜಾರ, ಚನ್ನಪ್ಪ ಪೂಜಾರ, ನಿಂಗಪ್ಪ ಪೂಜಾರ, ರೇಣುಕಪ್ಪ ಪೂಜಾರ ಅವರಿಂದ ಅಕ್ಕಿ ಪಾಯಸ, ಕಾಯಿ ಪವಾಡ, ಅಗ್ನಿಕುಂಡ ಪ್ರವೇಶ ಜರುಗಿತು. ಮುಂಗೈಕುಸ್ತಿ, ಸಂಜೆ ಲಘು ರಥೋತ್ಸವ ಎಳೆಯಲಾಯಿತು. ಸಹಸ್ರಾರು ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು.

    ಪ್ರಮುಖರಾದ ಭೀಮನಗೌಡ ಪೊಲೀಸ್ ಪಾಟೀಲ್, ಯಮನಪ್ಪ ಮಾಲಿಪಾಟೀಲ್, ಹುಸೇನ್‌ಸಾಬ್ ಟೆಂಗುಂಟಿ, ದರಿಯಾಸಾಬ್ ಮಾಟಲದಿನ್ನಿ, ರೇಣುಕಪ್ಪ ಗೌಡ್ರ, ಶಂಕ್ರಪ್ಪ ಹಳ್ಳಿ, ಶರಣಪ್ಪ ಬ್ಯಾಳಿ, ಅಮರೇಶ ಸಿಂದೋಗಿ, ಬಸವರಾಜ ಹಿರೇಮನಿ, ರಾಘವೇಂದ್ರ ಹಳ್ಳಿ, ಗೌರೀಶ ದಿನ್ನಿ, ಹನುಮಂತಪ್ಪ ಬೇವೂರು, ಶ್ಯಾಮೀದ್‌ಸಾಬ್ ಮುಲ್ಲಾರ್, ದೇವಪ್ಪ ಹೂಗಾರ, ವಿಜಯಕುಮಾರ ದಿನ್ನಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts