More

    ದೇವಾಲಯ ಶ್ರದ್ಧಾ ಕೇಂದ್ರವಾಗಿ ರೂಪುಗೊಳ್ಳಲಿ

    ಸುಂಟಿಕೊಪ್ಪ: ಏಳನೇ ಹೊಸಕೋಟೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಸಂತ ಸೆಬಾಸ್ಟೀನ್ ರೋಮನ್ ಕ್ಯಾಥೋಲಿಕ್ ದೇವಾಲಯವು ಸತತವಾದ ಆರಾಧನೆ ಮತ್ತು ಪ್ರಾರ್ಥನೆಯಿಂದ ಪ್ರತಿಯೊಬ್ಬರೂ ಪರಮ ಪಿತನ ಸ್ತುತಿಗೆ ಪಾತ್ರರಾಗಲಿದ್ದಾರೆಂದು ಬೆಳ್ತಂಗಡಿ ಧರ್ಮಾಕ್ಷೇತ್ರದ ಧರ್ಮಾಧ್ಯಕ್ಷ ಮಾರ್ ಲಾರೆನ್ಸ್ ಮುಕ್ಕಾಜಿ ಹೇಳಿದರು.

    ನೂತನ ದೇವಾಲಯದಲ್ಲಿ ಮಂಗಳವಾರ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿ ಮಾತನಾಡಿದ ಅವರು, ಈ ದೇವಾಲಯವು ಅನೇಕ ಧರ್ಮಗುರುಗಳ ಮತ್ತು ಭಕ್ತರ ಸತತ ಪರಿಶ್ರಮ ಮತ್ತು ಸೇವಾ ಮನೋಭಾವದಿಂದ ಅತ್ಯಂತ ಆಕರ್ಷಕವಾಗಿ ಮೂಡಿಬಂದಿದ್ದು, ಇಲ್ಲಿ ಪ್ರಾರ್ಥನೆ ಮತ್ತು ಆರಾಧನೆಯಿಂದ ಈ ದೇವಾಲಯವನ್ನು ಶ್ರದ್ಧಾ ಕೇಂದ್ರವನ್ನಾಗಿ ಹೊರಹೊಮ್ಮಿಸುವ ಜವಾಬ್ದಾರಿ ನಮ್ಮ ಮೇಲಿದೆ. ದೇವಾಲಯದ ಸಂತರ ಹೆಸರು ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಧರ್ಮಗುರುಗಳ ಹೆಸರು ಒಂದೇಯಾಗಿದ್ದು, ಅವರ ನಾಯಕತ್ವದಡಿಯಲ್ಲಿ ಕಳೆದ 9 ವರ್ಷಗಳಿಂದ ನಡೆದ ದೇವಾಯದ ಮರು ನಿರ್ಮಾಣ ಕಾರ್ಯವು ಇಂದು ಸಾಕಾರಗೊಂಡಿದೆ ಎಂದು ತಿಳಿಸಿದರು.

    ಬೆಳ್ತಂಗಡಿ ಧರ್ಮಾಕ್ಷೇತ್ರದ ಅಧೀನದಲ್ಲಿ ಬರುವ ಸಿದ್ದಾಪುರ ಕರಡಿಗೋಡುವಿನ ಸಂತ ಮೇರಿ ದೇವಾಲಯದ ನೇತೃತ್ವದಲ್ಲಿ ಸಂತ ಸೆಬಾಸ್ಟೀನ್ ಅವರ ರೋಮನ್ ಕ್ಯಾಥೋಲಿಕ್ ದೇವಾಲಯವು 1982ರಲ್ಲಿ ಆರಂಭಗೊಂಡಿದ್ದನ್ನು ಸ್ಮರಿಸಿದ ಅವರು, ಅತ್ಯುತ್ತಮ ರೀತಿಯಲ್ಲಿ ದೇವಾಲಯದ ಮರು ನಿರ್ಮಾಣ ಕಾಮಗಾರಿ ನಡೆದಿರುವುದನ್ನು ಶ್ಲಾಘಿಸಿದರು.

    ಬೆಳ್ತಂಗಡಿ ಧರ್ಮಕ್ಷೇತ್ರದ ಜೋಸೆಫ್ ವಲಿಯಪರಂಬಿಲ್, ಸಿದ್ದಾಪುರ ಸಂತ ಮೇರಿ ಚರ್ಚಿನ ವಲಯ ಧರ್ಮಗುರು ಜೋಜಿ ವಡಕ್ಕಿವೀಟಿ, ಮೈಸೂರಿನ ಸೆಂಟ್ ಪೌಲಸ್ ಪ್ರಾಂತ್ಯದ ಧರ್ಮಗುರು ಆಗಸ್ಟೀನ್ ಪಾಯಂಪಳ್ಳಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts