VIDEO| ನಡುರೆಸ್ತೆಯಲ್ಲಿ ಬೈಕ್​ಗೆ ಗುದ್ದಿ ಪರಾರಿಯಾದ ಆಟೋ! ಹಾಗೆ ಮಾಡುವುದಕ್ಕೂ ಒಂದು ಕಾರಣವಿತ್ತು!

auto
Published on

ಮುಂಬೈ: ಆಟೋ ಚಾಲಕನೊಬ್ಬ ಮುಂಬೈನ ನಡುರಸ್ತೆಯಲ್ಲಿ ಬೈಕ್​ ಸವಾರನಿಗೆ ಗುದ್ದಿ ಪರಾರಿಯಾಗಿರುವ ವಿಡಿಯೋ ಇದೀಗ ಸಮಾಜಿಕ ಜಾಲತಾಣಗಳಲ್ಲಿ ಸಕತ್​ ವೈರಲ್​ ಆಗಿದೆ.

ಆಟೋ ಚಾಲಕನೊಬ್ಬ ಬೈಕ್ ಸವಾರನೊಂದಿಗೆ ಜಗಳವಾಡುತ್ತಾನೆ. ಜಗಳ ನಿಲ್ಲಿಸಿ, ಎರಡೂ ಗಾಡಿಗಳು ಮುಂದೆ ಹೋಗುತ್ತವೆ. ಹೀಗೆ ಹೋಗುವಾಗ ಬೈಕಿನ ಪಕ್ಕದಲ್ಲೇ ಚಲಿಸುವ ಆಟೋ ಕೆಲವೇ ಸೆಕೆಂಡುಗಳಲ್ಲಿ ಬೈಕಿಗೆ ಗುದ್ದೇ ಬಿಡುತ್ತದೆ. ಆಟೋ ಗುದ್ದಿದ ಏಟಿಗೆ, ಬೈಕ್​ ಮತ್ತು ಸವಾರ ಎರಡೂ ರಸ್ತೆ ಮಧ್ಯೆ ಬೀಳುತ್ತಾರೆ. ಈ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣದ ತುಂಬೆಲ್ಲಾ ಹರಿದಾಡಿದೆ.

ಈ ವಿಡಿಯೋ ಹರಿದಾಡಿದ ತಕ್ಷಣ ಮುಂಬೈ ಪೊಲೀಸರು ಎಚ್ಚೆತ್ತುಕೊಂಡಿದ್ದು, ಆಟೋ ಚಾಲಕನಿಗಾಗಿ ಬಲೆ ಬೀಸಿದ್ದಾರೆ. ಗುರುವಾರದಂದು ಆಟೋ ಚಾಲಕನನ್ನು ಪತ್ತೆ ಹಚ್ಚಲಾಗಿದ್ದು, ಆತನನ್ನು ಬಂಧಿಸಲಾಗಿದೆ. ಮುಂಬೈನ ರಿಯಾಫಿಕ್​ ನಗರದ ಸಲ್ಮಾನ್​ ಸೈಯದ್​ ಬಂಧಿತ ಆರೋಪಿ. ಈತ ಕಿಶೋರ್​ ಹೆಸರಿನ ಬೈಕ್​ ಸವಾರನೊಂದಿಗೆ ಜಗಳವಾಡಿದ್ದು, ಅದೇ ದ್ವೇಷದಿಂದ ಬೈಕ್​ಗೆ ಗುದ್ದಿದ್ದಾಗಿ ಹೇಳಲಾಗಿದೆ. ಸಲ್ಮಾನ್​ ವಿರುದ್ಧ ಕೊಲೆ ಪ್ರಯತ್ನದ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net