More

    ಹೋಟೆಲ್​ ಬಿಲ್​ 2 ಸಾವಿರ ಆದ್ರೆ ಬರೋಬ್ಬರಿ 50 ಸಾವಿರ ರೂಪಾಯಿ ಟಿಪ್ಸ್​ ಕೊಡ್ತಾನೆ ಈ ಭೂಪ!

    ಬೆಂಗಳೂರು: ಇಲ್ಲೊಬ್ಬ ಭೂಪ ಹೋಟೆಲ್​ಗೆ ಬರ್ತಾನೆ ಅಂದ್ರೆ ಸಾಕು ಅಲ್ಲಿನ ಸಿಬ್ಬಂದಿಗೆ ಫುಲ್​ ಖುಷಿ. ಯಾಕೆಂದ್ರೆ ಅವನು ಅಲ್ಲಿನ ಸಿಬ್ಬಂದಿಗೆ ಬರೋಬ್ಬರಿ 50 ಸಾವಿರ ರೂಪಾಯಿ ಟಿಪ್ಸ್​ ಕೊಡ್ತಿದ್ದ!

    ಹೌದು, ಪ್ರತಿಷ್ಠಿತ ಹೋಟೆಲ್​ಗಳಲ್ಲಿ ರಾಜಕಾರಣಿ, ಉದ್ಯಮಿ, ಸರ್ಕಾರಿ ಅಧಿಕಾರಿಗಳನ್ನು ಕರೆಸಿ ವ್ಯವಹಾರ ನಡೆಸುತ್ತಿದ್ದ ಆ ವ್ಯಕ್ತಿಗೆ ಊಟದ ಬಿಲ್​ ಕೇವಲ 2 ಸಾವಿರ ರೂ. ಆಗಿದ್ದರೂ ಟಿಪ್ಸ್​ ಕೊಡೋಕೆ 50 ಸಾವಿರ ರೂ. ಖರ್ಚು ಮಾಡುತ್ತಿದ್ದ. ಅಂದಹಾಗೆ ಆತ ಯಾರು ಗೊತ್ತಾ? ಅವನೇ ಯುವರಾಜ ಅಲಿಯಾಸ್​ ಸ್ವಾಮಿ. ಈತ ನಿಗಮ, ಮಂಡಳಿ, ರಾಜ್ಯಸಭಾ ಸ್ಥಾನ ಕೊಡಿಸುವ ನೆಪದಲ್ಲಿ ಕೋಟ್ಯಂತರ ರೂ. ವಂಚಿಸಿ ಸಿಸಿಬಿ ಬಲೆಗೆ ಸಿಲುಕಿರುವ ಆರೋಪಿ. ಇದನ್ನೂ ಓದಿರಿ ಕುಮಾರಸ್ವಾಮಿ ಈಗಲೂ… ಮುಂದೆಯೂ ನನ್ನ ಸ್ನೇಹಿತ ಎಂದ ಡಿಕೆಶಿ

    ಪ್ರತಿಷ್ಠಿತ ಹೋಟೆಲ್​ಗಳಲ್ಲಿ ರಾಜಕಾರಣಿ, ಉದ್ಯಮಿ, ಸರ್ಕಾರಿ ಅಧಿಕಾರಿಗಳನ್ನು ಕರೆಸಿ ವ್ಯವಹಾರ ನಡೆಸುತ್ತಿದ್ದ ಯುವರಾಜ, ಊಟದ ಬಿಲ್​ 2 ಸಾವಿರ ರೂ. ಆಗಿದ್ದರೆ ಕನಿಷ್ಠ 50 ಸಾವಿರ ರೂ. ಟಿಪ್ಸ್​ ಕೊಡುತ್ತಿದ್ದ. ಈ ಬಗ್ಗೆ ಆತನೇ ಪೊಲೀಸರ ಬಳಿ ಬಾಯ್ಬಿಟ್ಟಿದ್ದಾನೆ.

    ಪಂಚತಾರ ಹೋಟೆಲ್​ಗೆ ಹೋದಾಗ ದೊಡ್ಡ ವ್ಯಕ್ತಿಯಂತೆ ನಮಸ್ಕಾರ ಮಾಡಿ ಎಲ್ಲ ಸೌಕರ್ಯ ಒದಗಿಸುತ್ತಿದ್ದರು. ಹಾಗಾಗಿ ಟಿಪ್ಸ್​ ಕೊಡುತ್ತಿದ್ದೆ. ನಮಸ್ಕಾರ ಮಾಡಿಸಿಕೊಳ್ಳಲೆಂದೇ ಹಾಗೆ ಮಾಡಿದೆ ಎಂದಿದ್ದಾನೆ.

    ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪ ವಿವಾದಾತ್ಮಕ ಜಮೀನು ಕಡಿಮೆ ಬೆಲೆಗೆ ಕೊಡಿಸುವ ಆಮಿಷವೊಡ್ಡಿ 6.50 ಕೋಟಿ ರೂ. ಮತ್ತು 85 ಕೋಟಿ ರೂ.ಗೆ ಖಾಲಿ ಚೆಕ್​ ಪಡೆದು ಮೋಸ ಮಾಡಿರುವುದಾಗಿ ಯುವರಾಜನ ವಿರುದ್ಧ ಹೈಗ್ರೌಂಡ್ಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದು ಈತನ ವಿರುದ್ಧ ದಾಖಲಾದ ಮತ್ತೊಂದು ಕೇಸ್​. ಮೈಸೂರಿನ ಉದ್ಯಮಿ ಡಾ. ಗುರುರಾಜ್​ ರವಿ (53) ಎಂಬುವರು ಈ ದೂರು ನೀಡಿದ್ದು, ಹಣ ಮತ್ತು ಚೆಕ್​ ವಾಪಸ್​ ಕೊಡಿಸುವಂತೆ ಮನವಿ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

    2008ರಲ್ಲಿ ಚಿತ್ರದುರ್ಗದಲ್ಲಿ ಮಠ ಸ್ಥಾಪಿಸಿಕೊಂಡು ಯುವರಾಜ, ಸ್ವಾಮೀಜಿ ವೇಷ ಧರಿಸಿಕೊಂಡು ಮೋಸ ಮಾಡುತ್ತಿದ್ದ. ನಿಜ ಬಣ್ಣ ಗೊತ್ತಾದ ಮೇಲೆ ಚಿತ್ರದುರ್ಗ ಬಿಟ್ಟು ಬೆಂಗಳೂರಿಗೆ ಬಂದು ಸರ್ಕಾರಿ ನೌಕರಿ, ಟೆಂಡರ್, ವರ್ಗಾವಣೆ ಮತ್ತು ರಾಜ್ಯಸಭಾ, ವಿಧಾನ ಪರಿಷತ್‌ಗೆ ಸ್ಥಾನ ಕೊಡಿಸುವುದಾಗಿ ನಂಬಿಸಿ ಹಣ ಪಡೆದು ಮೋಸ ಮಾಡುತ್ತಿದ್ದ. ಕೆಲವರಿಗೆ ಭರವಸೆ ಕೊಟ್ಟಂತೆ ಕೆಲಸಮಾಡಿ ಕೊಟ್ಟಿದ್ದಾರೆ ಎನ್ನಲಾಗಿದೆ.

    ಬಿಜೆಪಿ ಶಾಸಕನಿಂದ ದಂಡ ವಸೂಲಿ ಮಾಡಿದ ಪೊಲೀಸರಿಗೆ ಎದುರಾಯ್ತು ಸಂಕಷ್ಟ!

    ಸಿರುಗುಪ್ಪ ತಹಸೀಲ್ದಾರ್​ ಪತ್ನಿ ಸಾವಿನ ರಹಸ್ಯ ಬಿಚ್ಚಿಟ್ಟ ಶಾಸಕ!

    ನವ ವಿವಾಹಿತೆಯನ್ನು ಕೊಂದು ಮನೆಯಲ್ಲೇ ಹೂತಿಟ್ಟ! 15 ದಿನದ ಬಳಿಕ ಬಯಲಾಯ್ತು ರಹಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts