ಜಿಲ್ಲಾ ಪರಿಷತ್ ಸಿಇಒ ಮನೆಯಲ್ಲಿ 2 ಕೋಟಿ ರೂ.ಗೂ ಅಧಿಕ ನಗದು ಪತ್ತೆ!

assam
Published on

ಧುಬ್ರಿ (ಅಸ್ಸಾಂ): ಅಸ್ಸಾಂನ ವಿಜಿಲೆನ್ಸ್ ಮತ್ತು ಭ್ರಷ್ಟಾಚಾರ ವಿರೋಧಿ ನಿರ್ದೇಶನಾಲಯದ ಡಿವಿಎಸಿ ಅಧಿಕಾರಿಗಳು ಶುಕ್ರವಾರ ಧುಬ್ರಿ ಜಿಲ್ಲಾ ಪರಿಷತ್ತಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಅವರ ಸಹಾಯಕ ಜಿಲ್ಲಾ ವ್ಯವಸ್ಥಾಪಕರು (ಎಡಿಪಿಎಂ) ಲಂಚ ಸ್ವೀಕರಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಅಸ್ಸಾಂ ಪೊಲೀಸರ ಡಿವಿಎಸಿ ಅಧಿಕಾರಿಗಳು ಶುಕ್ರವಾರ ಬಲೆ ಬೀಸಿದ್ದು ಈ ಸಂದರ್ಭ ಜಿಲ್ಲಾ ಪರಿಷತ್ತಿನ ಮುಖ್ಯಕಾರ್ಯ ನಿರ್ವಾಹಕರ ಸೂಚನೆ ಮೇರೆಗೆ 30,000 ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ಸಹಾಯಕ ಜಿಲ್ಲಾ ವ್ಯವಸ್ಥಾಪಕ, ಮೃಣಾಲ್ ಕಾಂತಿ ಸರ್ಕಾರ್, ಹಾಗೂ ಜಿಲ್ಲಾ ಕಾರ್ಯನಿರ್ವಾಹಕ ಅಧಿಕಾರಿಯನ್ನು ಧುಬ್ರಿಯ ಜಿಲ್ಲಾ ಪರಿಷತ್ ಕಚೇರಿಯಲ್ಲಿ ಲಂಚ ಸ್ವೀಕರಿಸುತ್ತಿದ್ದಾಗ ಹಿಡಿದಿದ್ದಾರೆ.

ಈ ಅಧಿಕಾರಿ, ಮಾಡಬೇಕಾಗಿದ್ದ ಪಾವತಿಗೆ ಸಂಬಂಧಪಟ್ಟ ಹಣ ಬಿಡುಗಡೆ ಮಾಡಲು ಲಂಚ ಕೇಳಿದ್ದಾರೆ ಎನ್ನಲಾಗಿದೆ.

"ಇದೇ ಕಾರ್ಯಾಚರಣೆಯಲ್ಲಿ, ಬಿಸ್ವಜಿತ್ ಗೋಸ್ವಾಮಿ, ಸಿಇಒ ಜಿಲಾ ಪರಿಷತ್, ಧುಬ್ರಿ ಅವರನ್ನು ಲಂಚಕ್ಕೆ ಬೇಡಿಕೆಯಿಟ್ಟು ಮೃಣಾಲ್ ಕಾಂತಿ ಸರ್ಕಾರ್ ಮೂಲಕ ಸ್ವೀಕರಿಸಿದ್ದಕ್ಕಾಗಿ ಬಂಧಿಸಲಾಯಿತು' ಎಂದು ಪೊಲೀಸರು ಹೇಳಿದ್ದಾರೆ.

ಬಿಸ್ವಜಿತ್ ಗೋಸ್ವಾಮಿ ಅವರ ಮನೆಯಲ್ಲಿ ಶೋಧ ನಡೆಸಿದಾಗ 2,32,85,300 ರೂ. (2ಕೋಟಿ, 32 ಲಕ್ಷ, 85 ಸಾವಿರದ 300 ರೂ.) ಪತ್ತೆಯಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net