More

    ಐಟಿ ಅಧಿಕಾರಿಗಳ ಮಹಾ ಬೇಟೆ: 56 ಕೋಟಿ ನಗದು, 32 ಕೆಜಿ ಚಿನ್ನಾಭರಣ ಸೇರಿ 390 ಕೋಟಿ ರೂ, ಬೇನಾಮಿ ಆಸ್ತಿ ಪತ್ತೆ

    ಜಲ್ನಾ: ಮಹಾರಾಷ್ಟ್ರದ ಜಲ್ನಾದಲ್ಲಿರುವ ಕೆಲ ಉದ್ಯಮ ಸಮೂಹಕ್ಕೆ ಸೇರಿದ ಅನೇಕ ಪ್ರದೇಶಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ನಡೆಸಿದ ದಾಳಿಯ ವೇಳೆ ಬೇನಾಮಿ ಅಥವಾ ಲೆಕ್ಕಕ್ಕೆ ಸಿಗದ 390 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ವಶಕ್ಕೆ ಪಡೆಯಲಾಗಿದೆ. ತೆರಿಗೆ ವಂಚನೆ ಆರೋಪದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ದಾಳಿಯ ವೇಳೆ 56 ಕೋಟಿ ರೂಪಾಯಿ ನಗದು, 14 ಕೋಟಿ ರೂಪಾಯಿ ಮೌಲ್ಯದ 32 ಕೆಜಿ ಚಿನ್ನ, ಹರಳು ಮತ್ತು ಡೈಮಂಡ್​ ಹಾಗೂ ಕೆಲ ಆಸ್ತಿ ದಾಖಲೆಗಳನ್ನು ಐಟಿ ಅಧಿಕಾರಿಗಳು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಆಗಸ್ಟ್​ 1 ರಿಂದ 8ರ ನಡುವೆ ಉಕ್ಕಿನ ವ್ಯಾಪಾರಿ, ಬಟ್ಟೆ ವ್ಯಾಪಾರಿ ಮತ್ತು ರಿಯಲ್ ಎಸ್ಟೇಟ್ ಡೆವಲಪರ್​ಗೆ ಸಂಬಂಧಿಸಿದ ಮನೆಗಳು ಮತ್ತು ಕಚೇರಿಗಳ ಮೇಲೆ ಐಟಿ ದಾಳಿ ನಡೆಸಿದ ವೇಳೆ ಇಷ್ಟೊಂದು ಆಸ್ತಿ ಪತ್ತೆಯಾಗಿದೆ.

    ದಾಳಿ ವೇಳೆ ಸಿಕ್ಕ ನಗದು ಎಣಿಸಲು ಅಧಿಕಾರಿಗಳಿಗೆ ಸುಮಾರು 13 ತಾಸುಗಳ ಸಮಯ ತೆಗೆದುಕೊಂಡಿದೆ. ಜಿಲ್ಲೆಯ ಕೆಲವು ಉದ್ಯಮಿಗಳು ತೆರಿಗೆ ವಂಚನೆ ಮಾಡುತ್ತಿದ್ದಾರೆ ಎಂಬ ಆರೋಪದ ಬಗ್ಗೆ ಮಾಹಿತಿ ಪಡೆದ ನಂತರ, ಆದಾಯ ತೆರಿಗೆ ಇಲಾಖೆಯು 260 ಅಧಿಕಾರಿಗಳನ್ನು ಒಳಗೊಂಡ ಐದು ತಂಡಗಳನ್ನು ರಚಿಸಿತ್ತು. ಬಳಿಕ ದಾಳಿ ನಡೆಸಿ ಶೋಧ ಕಾರ್ಯಾಚರಣೆ ನಡೆಸಿತು. (ಏಜೆನ್ಸೀಸ್​)

    VIDEO| ಪ್ರಾಣಿಗಳು ಸಹ ಇದನ್ನು ತಿನ್ನುವುದಿಲ್ಲ: ಊಟದ ತಟ್ಟೆ ಹಿಡಿದು ರಸ್ತೆಯಲ್ಲೇ ಕಣ್ಣೀರಾಕಿದ ಕಾನ್ಸ್​ಟೇಬಲ್​

    ಶೋಕಿಗಾಗಿ ಬೈಕ್​ಗಳನ್ನು ಕದಿಯುತ್ತಿದ್ದ ಇಬ್ಬರು ಬಿ.ಟೆಕ್ ಸ್ಟೂಡೆಂಟ್ಸ್ ಅಂದರ್: 12 ಬುಲೆಟ್, 2 ಡ್ಯೂಕ್ ವಶಕ್ಕೆ

    ಹುಡುಗಿಯರು ಲೈಂಗಿಕ ಸುಖ ಬಯಸಿದರೆ… ಶಕ್ತಿಮಾನ್​ ಖ್ಯಾತಿಯ ಮುಕೇಶ್​ ಖನ್ನಾ ಹೇಳಿಕೆಗೆ ಭಾರಿ ಆಕ್ರೋಶ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts