More

  ಶೋಕಿಗಾಗಿ ಬೈಕ್​ಗಳನ್ನು ಕದಿಯುತ್ತಿದ್ದ ಇಬ್ಬರು ಬಿ.ಟೆಕ್ ಸ್ಟೂಡೆಂಟ್ಸ್ ಅಂದರ್: 12 ಬುಲೆಟ್, 2 ಡ್ಯೂಕ್ ವಶಕ್ಕೆ

  ಚಿಕ್ಕಬಳ್ಳಾಪುರ: ಮಕ್ಕಳು ಚೆನ್ನಾಗಿ ಓದಲಿ ಅಂತ ಅಪ್ಪ-ಅಮ್ಮ ಕಾಲೇಜಿಗೆ ಕಳುಹಿಸಿದರೆ, ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ಬೈಕ್​ಗಳನ್ನು ಕಳ್ಳತನ ಮಾಡಿ ಸಿಕ್ಕಿಬಿದ್ದಿದ್ದಾರೆ. ಶೋಕಿ ಮಾಡುವುದಕ್ಕೆ ಅಂತ ದುಬಾರಿ ಬೈಕ್​ಗಳನ್ನ ಕಳ್ಳತನ ಮಾಡುತ್ತಿದ್ದ ವಿದ್ಯಾರ್ಥಿಗಳು ಪೊಲೀಸರ ಅತಿಥಿಗಳಾಗಿ ಜೈಲು ಕಂಬಿ ಎಣಿಸುವಂತಾಗಿದೆ.

  ಬಂಧಿತ ವಿದ್ಯಾರ್ಥಿಗಳ ಹೆಸರು ಪವನ್ ಹಾಗೂ ಸತೀಶ್ ಯಾದವ್​. ಚಿಕ್ಕಬಳ್ಳಾಪುರ ಮೂಲದ ಪವನ್ ಹಾಗೂ ಆಂಧ್ರಪ್ರದೇಶದ ಮೂಲದ ಸತೀಶ್ ಇಬ್ಬರು ಇಂಜಿನಿಯರಿಂಗ್ ವಿದ್ಯಾರ್ಥಿಗಳು. ಚಿಕ್ಕಬಳ್ಳಾಪುರ-ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಗಡಿಯಲ್ಲಿರುವ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಿ.ಟೆಕ್ ಓದುತ್ತಿದ್ದರು. ಅದ್ಯಾಕೋ ಏನೋ ಪವನ್​, ಅರ್ಧಕ್ಕೆ ಡ್ರಾಪ್ ಔಟ್ ಆದರೆ, ಇತ್ತ ಸತೀಶ್​ ಬಿ.ಟೆಕ್ ಮುಂದುವರಿಸಿದ್ದ. ಆಪ್ತ ಸ್ನೇಹಿತರಾಗಿದ್ದ ಇಬ್ಬರು ಶೋಕಿಗಾಗಿ ಹಿಡಿದಿದ್ದು ಅಡ್ಡದಾರಿಯನ್ನ. ಬೈಕ್​ಗಳನ್ನು ಕದಿಯೋ ಕೆಲಸಕ್ಕೆ ಇಳಿದ ಸ್ನೇಹಿತರು ಕದ್ದ ಬೈಕ್​ ಒಂದನ್ನು ಆಂಧ್ರಕ್ಕೆ ತೆಗೆದುಕೊಂಡು ಹೋಗುವಾಗ ಬಾಗೇಪಲ್ಲಿ ಟೋಲ್ ಪ್ಲಾಜಾ ಬಳಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.

  ಇಬ್ಬರು ಸೇರಿ ಕಳ್ಳತನ ಮಾಡಿದ್ದ 12 ರಾಯಲ್ ಎನ್​​ಫೀಲ್ಡ್ ಬೈಕ್, 2 ಡ್ಯೂಕ್, ಒಂದು ಪಲ್ಸಾರ್ ಎನ್ ಎಸ್, ಒಂದು ಡ್ಯೂಕ್ ಬೈಕ್​​ಗಳನ್ನು ಬಾಗೇಪಲ್ಲಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಬೈಕ್​​ಗಳನ್ನು ಕಳವು ಮಾಡಿದ್ದ ಈ ಇಬ್ಬರು ಆಂಧ್ರಪ್ರದೇಶದಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡಿ ಅದರಿಂದ ಬರುತ್ತಿದ್ದ ಹಣದಿಂದ ಶೋಕಿ ಮಾಡುತ್ತಿದ್ದರು.

  ಕರ್ನಾಟಕದಲ್ಲಿ ಬೈಕ್​ಗಳನ್ನ ಕದ್ದು ಆಂಧ್ರ ಪ್ರದೇಶದಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡಿದರೆ ಯಾರಿಗೂ ಗೊತ್ತಾಗುವುದಿಲ್ಲ. ಅದರಿಂದ ಬಂದ ಹಣದಿಂದ ಬೆಂಗಳೂರಲ್ಲಿ ಶೋಕಿ ಮಾಡಬಹುದು ಅಂದುಕೊಂಡು ಬೈಕ್​ ಒಂದನ್ನು ಕದ್ದುಕೊಂದು ಆಂಧ್ರಗೆ ಹೋಗುವಾಗ ಪೊಲೀಸರಿಗೆ ಕೈಗೆ ಸಿಕ್ಕಿಬಿದ್ದಿದ್ದಾರೆ. ಚೆನ್ನಾಗಿ ಓದಿ ಇಂಜಿನಿಯರಿಂಗ್ ಮುಗಿಸಿ, ಕೆಲಸಕ್ಕೆ ಸೇರಿ ದುಡ್ಡು ಮಾಡೋದು ಬಿಟ್ಟು ಈಗ ಅಡ್ಡದಾರಿ ಮೂಲಕ ದುಡ್ಡು ಮಾಡಿ ಶೋಕಿ ಮಾಡೋಕೆ ಮುಂದಾದ ಈ ಇಬ್ಬರು ಈಗ ಜೈಲುಪಾಲಾಗಿದ್ದಾರೆ. (ದಿಗ್ವಿಜಯ ನ್ಯೂಸ್​)

  VIDEO| ಟಾಲಿವುಡ್​ ಐಟಂ ಸಾಂಗ್​​ಗೆ ಬೋಲ್ಡ್​ ಆಗಿ ಸೊಂಟ ಬಳುಕಿಸಿದ ಚಾಹಲ್​ ಪತ್ನಿ ಧನಶ್ರೀ: ವಿಡಿಯೋ ವೈರಲ್​

  ಬಹುಭಾಷೆಯಲ್ಲಿ ಕಂಬಳ ಓಟಗಾರ; ಸಿನಿಮಾದಲ್ಲಿ ಶ್ರೀನಿವಾಸ ಗೌಡ ಸಕ್ರಿಯ

  ರಜನಿ ಜತೆಗೆ ರಮ್ಯಾ: 23 ವರ್ಷಗಳ ನಂತರ ಜೈಲರ್​ನಲ್ಲಿ ನಟನೆ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts