More

    ರಜನಿ ಜತೆಗೆ ರಮ್ಯಾ: 23 ವರ್ಷಗಳ ನಂತರ ಜೈಲರ್​ನಲ್ಲಿ ನಟನೆ

    ‘ಪಡೆಯಪ್ಪ’ ನಂತರ ರಜನಿಕಾಂತ್ ಮತ್ತು ರಮ್ಯಾ ಕೃಷ್ಣ ಜತೆಯಾಗಿ ನಟಿಸಬೇಕು ಎಂದು ಆಸೆಪಟ್ಟವರೆಷ್ಟೋ ಗೊತ್ತಿಲ್ಲ. ಆ ಚಿತ್ರದಲ್ಲಿ ನೀಲಾಂಬರಿ ಎಂಬ ಪಾತ್ರದಲ್ಲಿ ನಟಿಸಿದ್ದ ರಮ್ಯಾ, ರಜನಿ ವಿರುದ್ಧ ನೆಗೆಟಿವ್ ಪಾತ್ರದಲ್ಲಿ ತೊಡೆತಟ್ಟಿದ್ದರು. ಈ ಚಿತ್ರ ಸೂಪರ್ ಹಿಟ್ ಆಗಿದ್ದಷ್ಟೇ ಅಲ್ಲ, ರಜನಿ ಮತ್ತು ರಮ್ಯಾ ಮತ್ತೆ ಜತೆಯಾಗಿ ನಟಿಸಬೇಕು ಎಂದು ಅಭಿಮಾನಿಗಳು ಒತ್ತಾಯಿಸಿದ್ದರು.

    ಎಷ್ಟೋ ನಿರ್ದೇಶಕರು ಮತ್ತು ನಿರ್ವಪಕರು ಅವರಿಬ್ಬರನ್ನೂ ಮತ್ತೆ ಒಟ್ಟುಗೂಡಿಸಬೇಕು ಎಂದು ಪ್ರಯತ್ನ ಪಟ್ಟಿದ್ದರು. ಆದರೆ, ಕಾರಣಾಂತರದಿಂದ ಅದು ಸಾಧ್ಯವಾಗಲೇ ಇಲ್ಲ. ಈಗ 23 ವರ್ಷಗಳ ನಂತರ ರಜನಿ ಮತ್ತು ರಮ್ಯಾ ಕೃಷ್ಣ ಮತ್ತೊಮ್ಮೆ ಒಂದೇ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅದೇ ‘ಜೇಲರ್’. ನೆಲ್ಸನ್ ದಿಲೀಪ್ ಕುಮಾರ್ ಅಭಿನಯದ ಈ ಚಿತ್ರದ ಚಿತ್ರೀಕರಣ ಇಂದಿನಿಂದ ಪ್ರಾರಂಭವಾಗಲಿದೆ.

    ಮೊದಲು ಪ್ರೋಮೋ ಶೂಟ್ ನಡೆಯಲಿದ್ದು, ಆ. 16ರಿಂದ ಪೂರ್ಣಪ್ರಮಾಣದ ಚಿತ್ರೀಕರಣ ನಡೆಯಲಿದೆಯಂತೆ. ಈ ಚಿತ್ರದಲ್ಲಿ ರಮ್ಯಾ ಅವರ ಪಾತ್ರವೇನು? ಅವರು ನಾಯಕಿಯಾಗಿರುತ್ತಾರಾ ಅಥವಾ ಖಳನಾಯಕಿಯಾಗಿರುತ್ತಾರಾ? ಎಂಬ ಯಾವದೇ ವಿಷಯವನ್ನು ಚಿತ್ರತಂಡ ಸದ್ಯಕ್ಕೆ ಬಿಟ್ಟುಕೊಟ್ಟಿಲ್ಲ. ಈ ಚಿತ್ರದಲ್ಲಿ ಶಿವರಾಜಕುಮಾರ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಅವರು ಸಹ ಸದ್ಯದಲ್ಲೇ ಚಿತ್ರೀಕರಣದಲ್ಲಿ ಭಾಗವಹಿಸುವ ಸಾಧ್ಯತೆ ಇದೆ.

    Fact Check: ರಾಷ್ಟ್ರಧ್ವಜ ಖರೀದಿಸದಿದ್ದರೆ ರೇಷನ್ ಕೊಡಲ್ವಾ?; ಇಲ್ಲಿದೆ ಸತ್ಯಾಂಶ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts