ಕಾಲುಸಂಕದಿಂದ ಬಿದ್ದ ಸ್ಥಳದ ಬಳಿಯೇ 2 ದಿನಗಳ ಬಳಿಕ ಬಾಲಕಿಯ ಶವ ಪತ್ತೆ!

Girl
Published on

ಕುಂದಾಪುರ: ಶಾಲೆಯಿಂದ ಮನೆಗೆ ವಾಪಸಾಗುವಾಗ ಕಾಲುಸಂಕದಿಂದ ಕಾಲು ಜಾರಿ ನದಿಗೆ ಬಿದ್ದು ಸೋಮವಾರ ನಾಪತ್ತೆಯಾಗಿದ್ದ ಕಾಲ್ತೋಡು ಗ್ರಾಮದ ಚಪ್ಪರಿಕೆ ಹಿರಿಯ ಪ್ರಾಥಮಿಕ ಶಾಲೆಯ ಎರಡನೇ ತರಗತಿ ವಿದ್ಯಾರ್ಥಿನಿ ಸನ್ನಿಧಿಯ ಮೃತದೇಹ ಬುಧವಾರ ಮಧ್ಯಾಹ್ನ ಪತ್ತೆಯಾಗಿದೆ.

ಬೊಳಂಬಳ್ಳಿಯ ಮಕ್ಕಿಮನೆ ಪ್ರದೀಪ್ ಪೂಜಾರಿ ಹಾಗೂ ಸುಮಿತ್ರಾ ಅವರ ಪುತ್ರಿ ಸನ್ನಿಧಿ, ಸೋಮವಾರ ಸಂಜೆ ಶಾಲೆಯಿಂದ ಬರುವಾಗ ಕಾಲುಸಂಕದಿಂದ ಜಾರಿ ಬಿದ್ದಿದ್ದಳು. ಸೋಮವಾರ, ಮಂಗಳವಾರ ಎರಡು ದಿನ ಹುಡುಕಾಡಿದ್ದರೂ ಈಕೆ ಪತ್ತೆ ಆಗಿರಲಿಲ್ಲ.

ಆದರೆ ಆಕೆ ಬಿದ್ದ ಸ್ಥಳದಿಂದ ಸುಮಾರು 4 ಮೀ. ದೂರದ ಪೊದೆಯ ಮಧ್ಯದಲ್ಲಿ ಇಂದು ಮೃತದೇಹ ಕಂಡು ಬಂದಿದೆ. ಸನ್ನಿಧಿಯ ಪತ್ತೆಗಾಗಿ ಮೂರು ದಿನಗಳಿಂದ ಅಗ್ನಿಶಾಮಕದಳ, ಪೊಲೀಸರು, ಸ್ಥಳೀಯರು, ಈಜುಪಟುಗಳು ನಿರಂತರ ಶೋಧ ಕಾರ್ಯ ನಡೆಸಿದ್ದರು.

ಘಟನಾ ಸ್ಥಳಕ್ಕೆ ಇಂದು ಭೇಟಿ ನೀಡಿದ್ದ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಅಂಗಾರ, ಬಾಲಕಿಯ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಜತೆಗೆ ಸಂತ್ರಸ್ತ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net