More

    ದೇವಸ್ಥಾನದ ನೀರಲ್ಲೇ ಉರಿಯುತ್ತದೆ ಈ ದರ್ಗಾದ ದೀಪ!; ಹಿಂದೂ-ಮುಸ್ಲಿಂ ಸಾಮರಸ್ಯದ ಮೊಹರಂ..

    ಬಾಗಲಕೋಟೆ: ಇಲ್ಲಿ ಹಿಂದೂ-ಮುಸ್ಲಿಂ ಸಾಮರಸ್ಯ ಬರೀ ಮನುಷ್ಯರ ಮಟ್ಟದಲ್ಲಿಲ್ಲ, ಬದಲಿಗೆ ದೈವಿಕಮಟ್ಟದಲ್ಲಿದೆ. ಅಂದರೆ ಹಿಂದೂ-ಮುಸ್ಲಿಮರಷ್ಟೇ ಅಲ್ಲದೆ ದೇವಸ್ಥಾನ-ದರ್ಗಾ ಕೂಡ ಒಳಗೊಂಡಂತೆ ಇಲ್ಲಿ ಮೊಹರಂ ಆಚರಣೆ ಆಗುತ್ತದೆ. ಎಲ್ಲಕ್ಕಿಂತಲೂ ವಿಶೇಷ ಎಂದರೆ ಇಲ್ಲಿನ ದೀಪ ಉರಿಯುವುದು ಎಣ್ಣೆಯಿಂದಲ್ಲ, ಬದಲಿಗೆ ನೀರು. ಹೌದು.. ಈ ದರ್ಗಾದಲ್ಲಿನ ದೀಪ, ದೇವಸ್ಥಾನ ಬಾವಿಯ ನೀರಿನಿಂದ ಉರಿಯುತ್ತದೆ.

    ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಚಿಮ್ಮನಕಟ್ಟಿ ಗ್ರಾಮದ ದೊಡ್ಡ ಲಾಲಸಾಬವಲಿ ದರ್ಗಾದಲ್ಲಿ ಮೂರು ದಿನಗಳ ಕಾಲ ಹಿಂದೂ-ಮುಸ್ಲಿಂ ಭಾವೈಕ್ಯದ ಈ ಮೊಹರಂ ಆಚರಣೆ ಸಂಭ್ರಮ ಸಡಗರದಿಂದ ನಡೆಯುತ್ತದೆ. ಅದರಲ್ಲೂ ಇಲ್ಲಿ ಪವಾಡ ಎಂಬಂತೆ ಮೊಹರಂ ಸಂದರ್ಭದಲ್ಲಿ ನೀರಿನಿಂದಲೇ ದೀಪ ಬೆಳಗಲಾಗುತ್ತದೆ.

    ಗ್ರಾಮದ ಸಂಗಮೇಶ್ವರ ದೇವಸ್ಥಾನದ ಬಾವಿಯಲ್ಲಿನ ನೀರು ಬಿಂದಿಗೆಯಲ್ಲಿ ತಂದು ದರ್ಗಾದಲ್ಲಿನ ದೀಪಗಳಿಗೆ ಹಾಕಿ ದೀಪ ಬೆಳಗಿಸುತ್ತಾರೆ. ದೇಸಾಯಿಯವರ ಮನೆಯಲ್ಲಿ ಗಂಧ ತಂದು ದೇವರಿಗೆ ಅರ್ಪಣೆ ಮಾಡಿ ಪ್ರಾರಂಭವಾಗುವ ಈ ಹಬ್ಬದಲ್ಲಿ ಸಾಕಷ್ಟು ವಿಶೇಷ ಆಚರಣೆಗಳು ನಡೆಯುತ್ತವೆ.

    ದೇವಸ್ಥಾನದ ನೀರಲ್ಲೇ ಉರಿಯುತ್ತದೆ ಈ ದರ್ಗಾದ ದೀಪ!; ಹಿಂದೂ-ಮುಸ್ಲಿಂ ಸಾಮರಸ್ಯದ ಮೊಹರಂ..
    ಅಗ್ನಿಕುಂಡಕ್ಕೆ ತಯಾರಿ

    ಮೊಹರಂ ಸಂದರ್ಭದಲ್ಲಿ ಇಲ್ಲಿ ಅಗ್ನಿಕುಂಡ ಹಾಯುವ ಆಚರಣೆಯೂ ಇದೆ. ಹತ್ತಕ್ಕೂ ಹೆಚ್ಚು ಟ್ರ್ಯಾಕ್ಟರ್ ಲೋಡ್ ಕಟ್ಟಿಗೆಯಿಂದ ನಿನ್ನೆ ಇಡೀ ರಾತ್ರಿ ಕಟ್ಟಿಗೆ ಸುಟ್ಟು ಕೆಂಡ ಮಾಡಿಟ್ಟು, ಇಂದು ಬೆಳಗ್ಗೆ ದರ್ಗಾಕ್ಕೆ ಆಗಮಿಸುವ ಲಾಲಸಾಬ ಅಜ್ಜ ಅಗ್ನಿ ಕುಂಡದಲ್ಲಿ ಎರಡು ಬಾರಿ ಹಾದು ಚಾಲನೆ ನೀಡುತ್ತಾರೆ. ನಂತರ ಡೋಲಿ ಹೊತ್ತವರು ಸೇರಿದಂತೆ ಬೇಡಿಕೊಂಡವರೆಲ್ಲ ಅಗ್ನಿಯಲ್ಲಿ ಹಾಯುತ್ತಾರೆ. ಚಿಮ್ಮನಕಟ್ಟಿಯ ಈ ವಿಜೃಂಭಣೆಯ ಮೊಹರಂ ಆಚರಣೆಯ ವೀಕ್ಷಣೆಗೆ ಸಾವಿರಾರು ಜನರು ನೆರೆದಿರುತ್ತಾರೆ.

    ಪತಿ ವಯಸ್ಸು 75, ಪತ್ನಿಗೆ 70; ಮದ್ವೆಯಾದ 54 ವರ್ಷಗಳ ಬಳಿಕ ಆಯ್ತು ಮೊದಲ ಮಗು!

    ಅರ್ಧ ಅಡಿ ನೀರಲ್ಲಿ ಮೊಮ್ಮಗನ ಶವ ಪತ್ತೆ!; ರಾತ್ರಿಯಿಡೀ ನಿದ್ದೆಗೆಟ್ಟು ಕಾದ ಅಜ್ಜಿಗೆ ಬೆಳಗ್ಗೆ ಆಘಾತ..

    ಶಾಲೆಯಿಂದ ಹೊರಟ 2ನೇ ತರಗತಿ ವಿದ್ಯಾರ್ಥಿನಿ ಮನೆಗೆ ತಲುಪಲೇ ಇಲ್ಲ; ಕಾಲುಸಂಕಕ್ಕೆ ಪ್ರಾಣವೇ ಸುಂಕ!?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts