More

    ಅರ್ಧ ಅಡಿ ನೀರಲ್ಲಿ ಮೊಮ್ಮಗನ ಶವ ಪತ್ತೆ!; ರಾತ್ರಿಯಿಡೀ ನಿದ್ದೆಗೆಟ್ಟು ಕಾದ ಅಜ್ಜಿಗೆ ಬೆಳಗ್ಗೆ ಆಘಾತ..

    ಬೆಂಗಳೂರು ಗ್ರಾಮಾಂತರ: ಕೆಲಸಕ್ಕೆಂದು ಹೊರಗೆ ಹೋದ ಮೊಮ್ಮಗ ಮನೆಗೆ ಬರಲಿಲ್ಲವಲ್ಲ ಎಂದು ಇಡೀ ರಾತ್ರಿ ಜಾಗರಣೆ ಮಾಡಿದ ಅಜ್ಜಿಗೆ ಮಾರನೆ ಬೆಳಗ್ಗೆಯೇ ಮೊಮ್ಮಗನ ಶವ ಕೆರೆಯೊಂದರಲ್ಲಿ ತೇಲುತ್ತಿದೆ ಎಂಬ ಸುದ್ದಿ ಬರಸಿಡಿಲಿನಂತೆ ಬಂದರೆಗಿದೆ.

    ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ ಹೋಬಳಿ ಚಿಕ್ಕಹೆಜ್ಜಾಜಿ ಕೆರೆಯಲ್ಲಿ ಮಂಗಳವಾರ ನಂದೀಶ್ ಎಂಬ ಯುವಕನ ಶವ ಪತ್ತೆಯಾಗಿದ್ದು, ಮೊಮ್ಮಗನ ಶವ ಕಂಡು ಆ ಅಜ್ಜಿ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ಸ್ಥಳೀಯರ ಸಹಾಯದಿಂದ ಅಜ್ಜಿ ಚೇತರಿಸಿಕೊಂಡಿದ್ದರೂ ಮೊಮ್ಮಗ ಬಾರದ ಲೋಕಕ್ಕೆ ಹೋಗಿದ್ದಾನೆ ಎಂಬ ವಿಷಯ ಅರಗಿಸಿಕೊಳ್ಳಲು ಸಾಧ್ಯವಾಗದೆ ಬಾಯಿಬಾಯಿ ಬಡೆದುಕೊಳ್ಳುತ್ತಿರುವ ದೃಶ್ಯ ಎಂಥ ಕಲ್ಲು ಮನಸ್ಸಿನವರ ಕಣ್ಣಲ್ಲೂ ನೀರು ತರಿಸಿತ್ತು.

    ದೇವರೇ ಮೊಮ್ಮಗನಿಗೆ ಏನೂ ಆಗದಿರಲಿ!

    ಮಧುರೆ ಹೋಬಳಿ ಶ್ಯಾಕಲದೇವನಪುರ ಗ್ರಾಮದಲ್ಲಿ ನನಗೆ ನೀನು, ನಿನಗೆ ನಾನು ಎಂದು ಅಜ್ಜಿಯೊಂದಿಗೆ ಜೀವಿಸುತ್ತಿದ್ದ ನಂದೀಶ್, ಸೋಮವಾರ ಎಂದಿನಂತೆ ಗ್ಯಾರೇಜ್‌ಗೆ ಕೆಲಸಕ್ಕೆ ತೆರಳಿದ್ದ. ಸಂಜೆಗೆಲ್ಲ ಮರಳುತ್ತಿದ್ದ ಪ್ರೀತಿಯ ಮೊಮ್ಮಗನ ಹೆಜ್ಜೆ ಸದ್ದು ತಡರಾತ್ರಿಯಾದರೂ ಕೇಳದಿದ್ದಾಗ ಮನೆಯಲ್ಲಿಯೇ ಅಜ್ಜಿ ತೀವ್ರ ಆತಂಕಗೊಂಡಿದ್ದರು. ಮೊಮ್ಮಗನಿಗೆ ಏನೂ ಆಗದಿರಲಿ, ಸುರಕ್ಷಿತಾಗಿ ಮನೆಗೆ ಮರಳಲಿ ಎಂದು ಕಂಡಕಂಡ ದೇವರಿಗೆ ಕೈಮುಗಿದಿದ್ದಳು. ಆದರೆ ಮುಂಜಾನೆಯೇ ನೆರೆಹೊರೆಯವರು ನಿಮ್ಮ ಮೊಮ್ಮಗನ ಶವ ಕೆರೆಯಲ್ಲಿ ತೇಲುತ್ತಿದೆ ಎಂಬ ಸುದ್ದಿ ಮುಟ್ಟಿಸುತ್ತಿದ್ದಂತೆ ಅಜ್ಜಿ ಎದೆ ಬಡಿದುಕೊಂಡು ಕೆರೆಯತ್ತ ಓಡಿದ್ದಾರೆ.

    ಕೊಲೆ ಶಂಕೆ: ಕೆರೆಯಲ್ಲಿನ ಕೇವಲ ಅರ್ಧ ಅಡಿ ನೀರಿನಲ್ಲಿ ಮೃತನ ದೇಹ ಸಿಕ್ಕಿರುವುದು ಅನುಮಾನಗಳಿಗೆ ಎಡೆ ಮಾಡಿದೆ. ಅಲ್ಲದೆ ಯುವಕನಿಗೆ ಈಜು ಬರುತ್ತಿದ್ದು ಆಳವಿಲ್ಲದ ಈ ಜಾಗದಲ್ಲಿ ಸಾವಿಗೀಡಾಗಲು ಹೇಗೆ ಸಾಧ್ಯ? ಬೇರೆ ಕಡೆ ಕೊಲೆ ಮಾಡಿ ಶವವನ್ನು ಇಲ್ಲಿ ತಂದು ಎಸೆದಿರಬಹುದು ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ. ಇದನ್ನೇ ಪುನರುಚ್ಚರಿಸುತ್ತಿರುವ ಅಜ್ಜಿ ಮೊಮ್ಮಗನಿಗೆ ಇಂಥ ಸ್ಥಿತಿ ತಂದವರಿಗೆ ಶಿಕ್ಷೆಯಾಗಬೇಕು ಎಂದು ಪೊಲೀಸರ ಬಳಿ ಅಂಗಲಾಚುವ ದೃಶ್ಯ ಮನಕಲುಕುವಂತಿತ್ತು. ಪ್ರಕರಣ ದಾಖಲಿಸಿಕೊಂಡಿರುವ ನಗರ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    ಪತಿ ವಯಸ್ಸು 75, ಪತ್ನಿಗೆ 70; ಮದ್ವೆಯಾದ 54 ವರ್ಷಗಳ ಬಳಿಕ ಆಯ್ತು ಮೊದಲ ಮಗು!

    ಮತ್ತೊಂದು ಮಹಾಘಟಬಂಧನದ ಗುಟುರು; ಎಂಟನೇ ಸಲ ಸಿಎಂ ಆಗಲಿದ್ದಾರಾ ನಿತೀಶ್ ಕುಮಾರ್?

    ಮುಖ್ಯಮಂತ್ರಿ ಬದಲಾವಣೆ ವಿಚಾರ: ಸಿಎಂ ರಾಜಕೀಯ ಕಾರ್ಯದರ್ಶಿ ಹೇಳಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts