More

    ಶಾಲೆಯಿಂದ ಹೊರಟ 2ನೇ ತರಗತಿ ವಿದ್ಯಾರ್ಥಿನಿ ಮನೆಗೆ ತಲುಪಲೇ ಇಲ್ಲ; ಕಾಲುಸಂಕಕ್ಕೆ ಪ್ರಾಣವೇ ಸುಂಕ!?

    ಉಡುಪಿ: ಶಾಲೆಯಿಂದ ಹೊರಟ ಎರಡನೇ ತರಗತಿಯ ವಿದ್ಯಾರ್ಥಿನಿ ಮನೆಗೆ ತಲುಪದೇ ಇರುವಂಥ ಪ್ರಕರಣವೊಂದು ನಡೆದಿದೆ. ದುರಂತವೆಂದರೆ ಮನೆಯ ದಾರಿಯಲ್ಲಿನ ಕಾಲುಸಂಕಕ್ಕೆ ಈಕೆಯ ಪ್ರಾಣವೇ ಸುಂಕವಾಗಿದೆ ಎನ್ನಲಾಗಿದೆ. ಅರ್ಥಾತ್, ಕಾಲುಸಂಕದಿಂದ ಜಾರಿ ಬಿದ್ದ ಈ ವಿದ್ಯಾರ್ಥಿನಿ ನೀರುಪಾಲಾಗಿದ್ದಾಳೆ.

    ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕಾಲ್ತೋಡು ಗ್ರಾಮದ ಬೀಜದಮಕ್ಕಿ ಎಂಬಲ್ಲಿ ಈ ದುರ್ಘಟನೆ ನಡೆದಿದೆ. ಸನ್ನಿಧಿ (7) ನೀರುಪಾಲಾದ ಬಾಲಕಿ. ಈಕೆ ಇಲ್ಲಿನ ಚಪ್ಪರಿಕೆ ಎಂಬಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎರಡನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ಈಕೆ ಬೊಳಂಬಳ್ಳಿಯ ಮಕ್ಕಿಮನೆ ಪ್ರದೀಪ್ ಪೂಜಾರಿ ಹಾಗೂ ಸುಮಿತ್ರಾ ಅವರ ಪುತ್ರಿ.

    ಶಾಲೆಯಿಂದ ಸಂಜೆ ಮನೆಗೆ ಬರುವಾಗ ಮಾರ್ಗಮಧ್ಯೆ ಕಾಲುಸಂಕ ದಾಟುವಾಗ ಕಾಲು ಜಾರಿ ನೀರಿಗೆ ಬಿದ್ದಿದ್ದಳು. ನೀರಿನದಲ್ಲಿ ಕೊಚ್ಚಿ ಹೋಗಿರುವ ಬಾಲಕಿಗಾಗಿ ಊರವರ ಹುಡುಕಾಟ ಮುಂದುವರಿದಿದೆ. ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ರಾಜು ಪೂಜಾರಿ, ತಹಶೀಲ್ದಾರ್ ಕಿರಣ್ ಗೋರಯ್ಯ ಸೇರಿ ಅಧಿಕಾರಿಗಳಿಂದ ಕಾರ್ಯಾಚರಣೆ ನಡೆಸಿದ್ದಾರೆ. ಸನ್ನಿಧಿಯ ಮನೆಗೆ ಬೈಂದೂರು ಶಾಸಕ ಸುಕುಮಾರ್ ಶೆಟ್ಟಿ ಅವರು ತೆರಳಿ ಮನೆಯವರೊಂದಿಗೆ ಮಾತುಕತೆ ನಡೆಸಿದ್ದಾರೆ.

    ಶಾಲೆಯಿಂದ ಹೊರಟ 2ನೇ ತರಗತಿ ವಿದ್ಯಾರ್ಥಿನಿ ಮನೆಗೆ ತಲುಪಲೇ ಇಲ್ಲ; ಕಾಲುಸಂಕಕ್ಕೆ ಪ್ರಾಣವೇ ಸುಂಕ!? ಶಾಲೆಯಿಂದ ಹೊರಟ 2ನೇ ತರಗತಿ ವಿದ್ಯಾರ್ಥಿನಿ ಮನೆಗೆ ತಲುಪಲೇ ಇಲ್ಲ; ಕಾಲುಸಂಕಕ್ಕೆ ಪ್ರಾಣವೇ ಸುಂಕ!?

    ಶಾಲೆಯಿಂದ ಹೊರಟ 2ನೇ ತರಗತಿ ವಿದ್ಯಾರ್ಥಿನಿ ಮನೆಗೆ ತಲುಪಲೇ ಇಲ್ಲ; ಕಾಲುಸಂಕಕ್ಕೆ ಪ್ರಾಣವೇ ಸುಂಕ!? ಶಾಲೆಯಿಂದ ಹೊರಟ 2ನೇ ತರಗತಿ ವಿದ್ಯಾರ್ಥಿನಿ ಮನೆಗೆ ತಲುಪಲೇ ಇಲ್ಲ; ಕಾಲುಸಂಕಕ್ಕೆ ಪ್ರಾಣವೇ ಸುಂಕ!?

    ಯಾರದು..? ಚರ್ಚೆ ಆಗುತ್ತಿದೆ ಬೆಡ್​ರೂಮ್ ವಿಷಯ: ಇಂದು ರಾತ್ರಿ ಕಳೆಗಟ್ಟಲಿದ್ಯಾ ಬಿಗ್​ಬಾಸ್?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts