More

    ಯಾರದು..? ಚರ್ಚೆ ಆಗುತ್ತಿದೆ ಬೆಡ್​ರೂಮ್ ವಿಷಯ: ಇಂದು ರಾತ್ರಿ ಕಳೆಗಟ್ಟಲಿದ್ಯಾ ಬಿಗ್​ಬಾಸ್?

    ಬೆಂಗಳೂರು: ಆರಂಭದಿಂದಲೂ ಕುತೂಹಲ ಕೆರಳಿಸಿಕೊಂಡು ಬಂದಿರುವ ಬಿಗ್​ಬಾಸ್​ ಒಟಿಟಿ ಇಂದು ರಾತ್ರಿ ಕಳೆಗಟ್ಟುವ ಲಕ್ಷಣಗಳು ಕಾಣಿಸುತ್ತಿವೆ. ಅದಕ್ಕೆ ಪ್ರಮುಖ ಕಾರಣವಾಗಿರುವುದು ಬೆಡ್​ರೂಮ್​ ವಿಷಯ. ಇಂಥದ್ದೊಂದು ವಿಚಾರವನ್ನು ಬಿಗ್​ಬಾಸ್​ ಆಯೋಜಕರೇ ಮುನ್ನೆಲೆಗೆ ಬಿಟ್ಟುಬಿಟ್ಟಿದ್ದಾರೆ.

    ಬಿಗ್​ಬಾಸ್​ನಲ್ಲಿ ಪುರುಷ-ಮಹಿಳೆಯ ಜೋಡಿಯ ಅತಿರೇಕ ಎನಿಸುವಂಥ ವರ್ತನೆಗಳು ಇರುವುದು, ಅದೇ ಬಹಳಷ್ಟು ಚರ್ಚೆಗೆ ಒಳಗಾಗುವುದು ಮುಂತಾದವೆಲ್ಲ ಹೊಸದೇನಲ್ಲ. ಈ ಹಿಂದಿನ ಎಪಿಸೋಡ್​ಗಳಲ್ಲಿ ಇವೆಲ್ಲ ಕಂಡುಬಂದಿರುವಂಥದ್ದೇ ಆಗಿವೆ. ಅದನ್ನೆಲ್ಲ ನೆನಪಿಸುವ ರೀತಿಯಲ್ಲಿ ಮತ್ತಷ್ಟು ಸೀನ್​ಗಳು ಕ್ರಿಯೇಟ್ ಆಗಲಿವೆಯಾ ಎಂಬುದು ಇದೀಗ ಬಿಗ್​ಬಾಸ್​ ಪ್ರಿಯರ ಕುತೂಹಲ ಕೆರಳಿಸಿದೆ.

    ಏಕೆಂದರೆ, ಬಿಗ್​ಬಾಸ್​ಗೆ ಸಂಬಂಧಿಸಿದಂತೆ ಅಧಿಕೃತ ಪೋಸ್ಟರ್​​​ವೊಂದು ಹರಿದಾಡುತ್ತಿದ್ದು, ಅದರಲ್ಲಿ ‘ಇಂದು ರಾತ್ರಿ ಬೆಡ್‍ರೂಮ್​ನಲ್ಲಿ ಮಲಗಲು ಯಾರಿಗೆ ಅವಕಾಶ ಸಿಗಬೇಕು?’ ಎಂಬ ಸಾಲೊಂದು ಉಲ್ಲೇಖವಾಗಿದೆ. ಮಾತ್ರವಲ್ಲ, ಬಿಗ್​ಬಾಸ್​ನ 8 ಸ್ಪರ್ಧಿಗಳ ಚಿತ್ರಗಳನ್ನೂ ಅದರಲ್ಲಿ ಮುದ್ರಿಸಲಾಗಿದೆ. ಆದರೆ ಬಿಗ್​ಬಾಸ್​ ಬೆಡ್​ರೂಮ್​ನಲ್ಲಿ ಯಾರ್ಯಾರು ಅಥವಾ ಎಷ್ಟು ಮಂದಿ ಮಲಗಲಿದ್ದಾರೆ ಎಂಬುದು ಇನ್ನೂ ಗುಟ್ಟಾಗಿ ಉಳಿದಿದ್ದು, ಈ ರಾತ್ರಿಯ ಎಪಿಸೋಡ್ ಕುರಿತ ಕುತೂಹಲವನ್ನು ಹೆಚ್ಚಿಸಿದೆ ಎನ್ನಲಾಗುತ್ತಿದೆ.

    ಯಾರದು..? ಚರ್ಚೆ ಆಗುತ್ತಿದೆ ಬೆಡ್​ರೂಮ್ ವಿಷಯ: ಇಂದು ರಾತ್ರಿ ಕಳೆಗಟ್ಟಲಿದ್ಯಾ ಬಿಗ್​ಬಾಸ್?

    ಫ್ಲೈಓವರ್​ನಿಂದ ಹಳ್ಳಕ್ಕೆ ಬಿದ್ದ ಕಾರು; ಮೂವರ ಸ್ಥಿತಿ ಚಿಂತಾಜನಕ, ನಾಲ್ವರಿಗೆ ಗಂಭೀರ ಗಾಯ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts