ಕೇದರನಾಥ ಯಾತ್ರೆಗೆ ತೆರಳಿದ್ದ ಕನ್ನಡಿಗರು ಸಂಕಷ್ಟಕ್ಕೆ! ಆಗಿದ್ದೇನು?

72

ಬೆಂಗಳೂರು: ದೇವರ ದರ್ಶನಕ್ಕೆ ಹೋದ ಕನ್ನಡಿಗರು ಇದೀಗ ಮತ್ತೊಮ್ಮೆ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಕೇದಾರನಾಥನ ದರ್ಶನಕ್ಕೆ ತೆರಳಿದ್ದ ಕನ್ನಡಿಗರು ಇದೀಗ ಗುಡ್ಡ ಕುಸಿತ ಹಿನ್ನೆಲೆಯಲ್ಲಿ ಸಂಪರ್ಕ ಕಡಿತವಾಗಿದ್ದ ಕಾರಣ ಕನ್ನಡಿಗರು ಸಿಲುಕಿಕೊಂಡಿದ್ದಾರೆ.

ಇದನ್ನೂ ಓದಿ: ಕೇದಾರನಾಥದಲ್ಲಿ ಹೆಲಿಕಾಪ್ಟರ್​ ರೆಕ್ಕೆಗೆ ಸಿಲುಕಿ ಸರ್ಕಾರಿ ಅಧಿಕಾರಿ ದುರ್ಮರಣ…

ಬೀದರ್ ಜಿಲ್ಲೆಯ ಐವರು ಕಲಬುರ್ಗಿ ಜಿಲ್ಲೆಯ 10 ಜನ ಯಾತ್ರಿಗಳು ಸೇರಿದಂತೆ 15 ಜನ ಕನ್ನಡಿಗರು ಕೇದರಾನಾಥ ಹಾಗೂ ಬದ್ರಿನಾಥ ದೇವಸ್ಥಾನಕ್ಕೆ ದರ್ಶನಕ್ಕೆಂದು ತೆರಳಿದ್ದರು. ಬದ್ರಿನಾಥ ದೇವಸ್ಥಾನಕ್ಕೆ ಹೋಗಿ ವಾಪಸ್ ಹರಿದ್ವಾರಕ್ಕೆ ಬರುವ ಮಾರ್ಗದಲ್ಲಿ ನಡದ ಭಾರಿ ಗುಡ್ಡ ಕುಸಿತದ ಪರಿಣಾಮ ರಸ್ತೆ ಸಂಪರ್ಕ ಕಡಿತಗೊಂಡಿದೆ.

ಇದನ್ನೂ ಓದಿ: 20 ಕ್ವಿಂಟಲ್​ ಹೂವುಗಳಿಂದ ಅಲಂಕೃತಗೊಂಡ ಕೇದಾರನಾಥ ದೇವಸ್ಥಾನ!

ಬದ್ರಿನಾಥ ದೇವಸ್ಥಾನಕ್ಕೆ ಸದ್ಯ ಯಾರು ಬರಬೇಡಿ ಇಲ್ಲಿ ಭಾರಿ ಮಳೆಯಾಗುತ್ತಿದೆ. ಜತೆಗೆ ಗುಡ್ಡಗಾಡು ಪ್ರದೇಶವಿದ್ದು ದೊಡ್ಡ ದೊಡ್ಡ ಗುಡ್ಡಗಳು ಕುಸಿಯುತ್ತಿವೆ. ಹೀಗಾಗಿ ರಸ್ತೆ ಸಂಪರ್ಕ ಕಡಿತಗೊಳುತ್ತಿವೆ ಎಂದು ಬೀದರ್ ಮೂಲದ ಮಹೇಶ ದಿಗ್ವಿಜಯ ನ್ಯೂಸ್ ಮೂಲಕ ಭಕ್ತರಲ್ಲಿ ಮನವಿ ಮಾಡಿಕೊಂಡಿದ್ದಾರೆ.