More

    ‘ನಮ್ಮ ಮೆಟ್ರೋ’ಗೆ ಇನ್ನು ಬೇಕಾಗಿಲ್ಲ ಚಾಲಕ!

    ಬೆಂಗಳೂರು: ಚಾಲಕ ರಹಿತ ಕಾರುಗಳು ರಸ್ತೆಗೆ ಇಳಿಯುವಾಗ ರೈಲಿಗೂ ಇದೇ ವ್ಯವಸ್ಥೆ ಮಾಡಲು ಸಾಧ್ಯವಿಲ್ಲವೇ? ಇದೇ ಆಲೋಚನೆಯ ಬೆನ್ನು ಬಿದ್ದಿರುವ ‘ನಮ್ಮ ಮೆಟ್ರೋ’ ಅಥವಾ ಬಿಎಂಆರ್​ಸಿಎಲ್, ಈ ವರ್ಷದ ಕೊನೆಗೆ ಚಾಲಕ ರಹಿತ ಮೆಟ್ರೋವನ್ನು ಪರಿಚಯಿಸಲು ಅಗತ್ಯ ಸಿದ್ಧತೆಗಳನ್ನು ನಡೆಸುತ್ತಿದೆ.

    ಇಂತಹ ಪ್ರಯೋಗ ಈ ಹಿಂದೆಯೂ ನಡೆದಿದ್ದು, ದೆಹಲಿಯಲ್ಲಿ, ಸಂವಹನ ಆಧಾರಿತ ರೈಲು ನಿಯಂತ್ರಣ ವ್ಯವಸ್ಥೆ (ಸಿಬಿಟಿಸಿ) ಮೂಲಕ ಚಲಿಸುವ ರೈಲನ್ನು ಪರಿಚಯಿಸಲಾಗಿತ್ತು. ಆ ಬಳಿಕ ಈ ವ್ಯವಸ್ಥೆಯನ್ನು ಮುಂಬೈಯಲ್ಲೂ ಅಳವಡಿಸಲಾಗಿತ್ತು. ಈ ಟೆಕ್ನಾಲಜಿಯನ್ನು ಮುಂದಿನ ತಿಂಗಳೂ ಚೆನ್ನೈನ ಮೆಟ್ರೊ ನಿಗಮದಲ್ಲೂ ಅಳವಡಿಸಲು ತಯಾರಿ ನಡೆಸಲಾಗಿದೆ.

    ಇದನ್ನೂ ಓದಿ: ನಮ್ಮ ಮೆಟ್ರೋ ಕಾಮಗಾರಿ ವೇಳೆ ಮತ್ತೊಂದು ಅವಘಡ; ಕಂಬಿಗಳನ್ನು ಮೇಲೆತ್ತುತ್ತಿದ್ದ ಕ್ರೇನ್​ ಕುಸಿತ!

    ಬಿಎಂಆರ್​ಸಿಎಲ್​, ನಮ್ಮ ಮೆಟ್ರೋದ ಎರಡನೇ ಹಂತವಾದ ಆರ್​.ವಿ ರಸ್ತೆ-ಬೊಮ್ಮಸಂದ್ರ-ಎಲೆಕ್ಟ್ರಾನಿಕ್ ಸಿಟಿ ನಡುವಿನ ಹಳದಿ ಮಾರ್ಗದ ಕಾಮಗಾರಿಯನ್ನು ಶೇಕಡ 99ರಷ್ಟು ಮುಗಿಸಿದ್ದು, ಆಗಸ್ಟ್​ನಲ್ಲಿ ಸಂಚಾರ ಶುರುವಾಗಲಿದೆ. ಈ ಮಾರ್ಗದಲ್ಲೂ ಮೊದಲಿಗೆ ಚಾಲಕ ರಹಿತ ಮೆಟ್ರೋ ಸಂಚಾರವನ್ನು ಆರಂಭಿಸುವ ಉದ್ದೇಶವನ್ನು ಇಟ್ಟುಕೊಳ್ಳಲಾಗಿತ್ತು. ಆದರೆ ಸದ್ಯಕ್ಕೆ, ಈಗಿರುವ ಡಿಸ್ಟೆನ್ಸ್​ ಟು ಗೋ ಅಥವಾ ಡಿಟಿಜಿ ವ್ಯವಸ್ಥೆ ಮುಂದುವರೆಯಲಿದೆ.

    ಈ ಕುರಿತಾಗಿ ‘ನಮ್ಮ ಮೆಟ್ರೋ’ದ ಸಂಪರ್ಕಾಧಿಕಾರಿ ಯಶವಂತ್ ಚೌಹಾಣ್ ಮಾಹಿತಿ ನೀಡಿದ್ದು, “ನಮ್ಮ ಮೆಟ್ರೊದ ಹೊಸ ಮಾರ್ಗಗಳಲ್ಲಿ ಚಾಲಕ ರಹಿತ ಮೆಟ್ರೊ ಸಂಚರಿಸುವಂತೆ ಮಾಡಬೇಕು ಎಂಬ ಯೋಜನೆ ಇದೆ. ಆದರೆ, ಅದು ಇನ್ನೂ ಪರಿಶೀಲನೆಯಲ್ಲಿದೆ. ಚಾಲಕ ರಹಿತ ಮೆಟ್ರೊ ಖರೀದಿ ಪ್ರಕ್ರಿಯೆ ನಡೆಯಬೇಕು. ಬಳಿಕ ಸಂಚರಿಸಲಿವೆ. ಅದಕ್ಕೆ ಸ್ವಲ್ಪ ಸಮಯ ಬೇಕಾಗುತ್ತದೆ’ ಎಂದು ಹೇಳಿಕೆ ನೀಡಿದ್ದಾರೆ.

    ಇದನ್ನೂ ಓದಿ: ‘ನಮ್ಮ ಮೆಟ್ರೋ’ ಒಳಗೆ ಮದ್ಯ ಕೊಂಡೊಯ್ಯಲು ಅವಕಾಶ ನೀಡುವ ಬಗ್ಗೆ ಶೀಘ್ರವೇ ನಿರ್ಧರಿಸುತ್ತೇವೆ: ಬಿಎಂಆರ್‌ಸಿಎಲ್

    ಚಾಲಕ ರಹಿತ ಮೆಟ್ರೊ ಸಂಚಾರ ಆರಂಭವಾದ ಮೇಲೆ ಚಾಲಕರೇ ಇರುವುದಿಲ್ಲ. ಆದರೂ, ಮೂರು ವರ್ಷಗಳ ಕಾಲ ಅಟೆಂಡ‌ರ್​ ಇರುತ್ತಾರೆ. ತುರ್ತು ಸಂದರ್ಭಗಳಲ್ಲಿ ಅವರು ಕಾರ್ಯನಿರ್ವಹಿಸುತ್ತಾರೆ. ಯಾವುದೇ ತಾಂತ್ರಿಕ ತೊಂದರೆಗಳು ಇಲ್ಲ ಎಂಬುದು ಖಚಿತವಾದ ಮೇಲೆ ಅಟೆಂಡರ್ ಕೂಡ ಮೆಟ್ರೋ ರೈಲಿನಲ್ಲಿ ಇರುವುದಿಲ್ಲ ಎಂದು ಮೆಟ್ರೊ ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts