More

    ‘ನಮ್ಮ ಮೆಟ್ರೋ’ ಒಳಗೆ ಮದ್ಯ ಕೊಂಡೊಯ್ಯಲು ಅವಕಾಶ ನೀಡುವ ಬಗ್ಗೆ ಶೀಘ್ರವೇ ನಿರ್ಧರಿಸುತ್ತೇವೆ: ಬಿಎಂಆರ್‌ಸಿಎಲ್

    ಬೆಂಗಳೂರು: ಮೆಟ್ರೋ ರೈಲಿನಲ್ಲಿ ಸೀಲ್ಡ್ ಮದ್ಯದ ಬಾಟಲಿಗಳನ್ನು ಸಾಗಿಸಲು ಪ್ರಯಾಣಿಕರಿಗೆ ಅವಕಾಶ ಕೊಡಬೇಕೋ ಅಥವಾ ಕೊಡಬಾರದೋ ಎಂಬ ಪ್ರಶ್ನೆಗಳು ಮುನ್ನೆಲೆಗೆ ಬಂದಿದ್ದೆ ತಡ ಇದೀಗ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಈ ಬಗ್ಗೆ ನಾವು ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳಲಿದ್ದೇವೆ ಎಂದು ಉತ್ತರ ನೀಡಿದೆ.

    ಇದನ್ನೂ ಓದಿ: ಡಿಸಿ ಕಚೇರಿ ಎದುರು ಬಡ ರೈತರ ಪ್ರತಿಭಟನೆ

    ಈ ಹಿಂದೆ ದೆಹಲಿ ಮೆಟ್ರೋ ತಮ್ಮ ಪ್ರಯಾಣಿಕರಿಗೆ ಎರಡು ಮದ್ಯದ (liqour) ಸೀಲ್ಡ್ ಬಾಟಲಿಗಳನ್ನು ತಮ್ಮೊಂದಿಗೆ ತೆಗೆದುಕೊಂಡು ಹೋಗಲು ಅನುಮತಿ ನೀಡಿತು. ಇದರ ಬೆನ್ನಲ್ಲೇ ಇದೀಗ ಬಿಎಂಆರ್‌ಸಿಎಲ್ ಕೂಡ ‘ನಮ್ಮ ಮೆಟ್ರೋ’ ನಿಲ್ದಾಣದೊಳಗೆ ಪ್ರಯಾಣಿಕರಿಗೆ ಮದ್ಯ ಸಾಗಿಸಲು ಅವಕಾಶ ಕಲ್ಪಿಸುವ ಸಾಧ್ಯತೆಗಳ ಬಗ್ಗೆ ಪರಿಶೀಲನೆ ನಡೆಸುತ್ತಿದೆ.

    ಈ ಬಗ್ಗೆ ಮಾಹಿತಿ ನೀಡಿದ ಬಿಎಂಆರ್‌ಸಿಎಲ್, ಮೆಟ್ರೋ ರೈಲಿನಲ್ಲಿ ಮದ್ಯ ಸಾಗಿಸಲು ಪ್ರಯಾಣಿಕರಿಗೆ ದೆಹಲಿ ಮೆಟ್ರೋ ಇತ್ತೀಚೆಗೆ ಅನುಮತಿ ನೀಡಿದೆ. ಆ ಕುರಿತು ನಮ್ಮಲ್ಲಿ ಚರ್ಚೆ ನಡೆಯುತ್ತಿದೆ. ಅದರ ಸಾಧಕ-ಬಾಧಕಗಳ ಪರಿಶೀಲನೆಯ ನಂತರ ಪ್ರಯಾಣಿಕರಿಗೆ ಮದ್ಯ ಸಾಗಿಸಲು ಅನುಮತಿ ನೀಡುವ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಬಿಎಂಆರ್‌ಸಿಎಲ್ ಎಂ.ಡಿ ಅಂಜುಮ್ ಪರ್ವೇಜ್ ಮಾಹಿತಿ ನೀಡಿದ್ದಾರೆ.

    ಇದನ್ನೂ ಓದಿ: ಜುಲೈ ಅಂತ್ಯದೊಳಗೆ ಕೆರೆಗಳ ಸರ್ವೇ ಪೂರ್ಣಗೊಳಿಸಲು ಡಿಸಿ ಆದೇಶ

    ಪ್ರಸ್ತುತ ಪ್ರಯಾಣಿಕರು ಮೆಟ್ರೋ ನಿಲ್ದಾಣದ ಒಳಗೆ ಮದ್ಯ ಕೊಂಡೊಯ್ಯುವಂತಿಲ್ಲ! ಪ್ರಯಾಣಿಕರು ಮೆಟ್ರೋ ನಿಲ್ದಾಣಗಳಲ್ಲಿ ಮದ್ಯ ಸೇವಿಸಿ ಇತರರಿಗೆ ತೊಂದರೆ ಉಂಟುಮಾಡುವ ಸಾಧ್ಯತೆಗಳು ಹೆಚ್ಚಿರುವ ಕಾರಣ ಸದ್ಯ ಮದ್ಯದ ಬಾಟಲಿಗಳನ್ನು ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ ಎಂದು ಬಿಎಂಆರ್‌ಸಿಎಲ್ ಎಂ.ಡಿ ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts