More

    20 ಕ್ವಿಂಟಲ್​ ಹೂವುಗಳಿಂದ ಅಲಂಕೃತಗೊಂಡ ಕೇದಾರನಾಥ ದೇವಸ್ಥಾನ!

    ನವದೆಹಲಿ: ಇಂದಿನಿಂದ ಕೇದಾರನಾಥ ಯಾತ್ರೆ ಶುರುವಾಗಲಿದೆ ಎನ್ನಲಾಗಿದೆ. ಉತ್ತರಾಖಂಡದ ಈ ಭಾಗದಲ್ಲಿ ಹವಾಮಾನವು ತುಂಬಾ ಕೆಟ್ಟದಾಗಿದೆ. ಹಿಮಪಾತದಿಂದಾಗಿ ರಸ್ತೆಯ ಸ್ಥಿತಿ ಇನ್ನೂ ಕಳಪೆಯಾಗಿದೆ. ಆದರೆ ಪ್ರತಿಕೂಲ ಹವಾಮಾನದ ನಡುವೆಯೂ ಅಂತಿಮ ಸಿದ್ಧತೆಗಳು ನಡೆಯುತ್ತಿವೆ.

    ಭಗವಾನ್ ಕೇದಾರನಾಥನು ಹಿಮದಲ್ಲಿ ಡೋಲಿಯಲ್ಲಿ ದೇವಾಲಯವನ್ನು ತಲುಪಿದ್ದು ಮಂಗಳವಾರ ಎಲ್ಲಾ ವಿಧಿವಿಧಾನಗಳೊಂದಿಗೆ ದೇವಾಲಯ ತೆರೆಯಲಾಗುತ್ತದೆ. ದೇವಾಲಯವನ್ನು ಹೂವಿನಿಂದ ಅಲಂಕರಿಸಲಾಗಿದ್ದು 20 ಕ್ವಿಂಟಾಲ್ ಹೂವುಗಳನ್ನು ಬಳಸಲಾಗಿದೆ.

    ಇದನ್ನೂ ಓದಿ: ಕೇದಾರನಾಥದಲ್ಲಿ ಹೆಲಿಕಾಪ್ಟರ್​ ರೆಕ್ಕೆಗೆ ಸಿಲುಕಿ ಸರ್ಕಾರಿ ಅಧಿಕಾರಿ ದುರ್ಮರಣ…

    ಚಾರ್ಧಾಮ್ ಯಾತ್ರೆಯ ಮಾರ್ಗಸೂಚಿಗಳು:

    1. ದೇಹವನ್ನು ಪರ್ವತ ಪ್ರದೇಶಕ್ಕೆ ಒಗ್ಗಲು ಯಾತ್ರಿಕರು ಕನಿಷ್ಠ 7 ದಿನಗಳ ಕಾಲ ತಪ್ಪಲಲ್ಲೇ ಉಳಿಯಬೇಕು.
    2. ಛತ್ರಿ, ರೇನ್ ಕೋಟ್, ಬೆಚ್ಚನೆಯ ಬಟ್ಟೆ, ಆಹಾರದ ವ್ಯವಸ್ಥೆ ಇರಬೇಕು.
    3. ಐದರಿಂದ ಹತ್ತು ನಿಮಿಷಗಳ ಕಾಲ ಉಸಿರಾಟದ ವ್ಯಾಯಾಮ ಮಾಡಿ ಪ್ರತಿದಿನ ಸುಮಾರು ಅರ್ಧ ಗಂಟೆ ನಡೆಯಿರಿ.
    4. ಚಾರ್ ಧಾಮ್ ಯಾತ್ರೆಗೆ ಹೋಗುವ ಮೊದಲು, ಯಾವಾಗಲೂ ವೈದ್ಯರನ್ನು ಸಂಪರ್ಕಿಸಿ.
    5. ಯಾವುದೇ ಕಾರಣದಿಂದ ಆರೋಗ್ಯ ಹದಗೆಟ್ಟರೆ 104 ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ.
    6. ಚಾರ್ ಧಾಮ್ ಯಾತ್ರೆಯ ಸಂದರ್ಭದಲ್ಲಿ ಕರೋನಾ ನಿಯಮಗಳನ್ನು ಪಾಲಿಸುವಂತೆ ಜಿಲ್ಲಾಧಿಕಾರಿಗಳು ಸಲಹೆ ನೀಡಿದ್ದಾರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts