More

    ನೈಸ್​ ಅಕ್ರಮ ಮತ್ತೊಮ್ಮೆ ಬರುತ್ತಾ ಮುನ್ನೆಲೆಗೆ? ಪರೊಕ್ಷವಾಗಿ ಡಿಕೆಶಿ ಹೆಸರು ಪ್ರಸ್ತಾಪ ಮಾಡಿದ ಎಚ್​ಡಿಕೆ ಹಾಗೂ ಬೊಮ್ಮಾಯಿ

    ಬೆಂಗಳೂರು: ದಿಢೀರನೆ ನೈಸ್ ವಿಚಾರವನ್ನು ಮಾಜಿ ಮುಖ್ಯಮಂತ್ರಿಗಳಾದ ಎಚ್​ಡಿಕೆ ಹಾಗು ಬಸವರಾಜ ಬೊಮ್ಮಾಯಿ ಪ್ರಸ್ತಾಪ ಮಾಡಿದ್ದು ಈ ಪ್ರಕರಣ ಮತ್ತೊಮ್ಮೆ ಮುನ್ನೆಲೆಗೆ ಬರಲಿದೆಯೇ ಎನ್ನುವ ಪ್ರಶ್ನೆಯನ್ನು ಹುಟ್ಟು ಹಾಕಿದೆ.

    ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿಗಳು, ನೈಸ್ ವಿಚಾರವಾಗಿ ಪರೋಕ್ಷವಾಗಿ ಡಿಕೆಶಿ ಹೆಸರನ್ನು ಪ್ರಸ್ತಾಪ ಮಾಡಿದ್ದಾರೆ. ಇದೀಗ ದಿಢೀರನೆ ನೈಸ್ ವರದಿ ಈಗ ಪ್ರಸ್ತಾಪ ಮಾಡಲಾಗಿದೆ.

    ಇದನ್ನೂ ಓದಿ: ಮಹಿಳೆಯರ ಭದ್ರತೆ ಬಗ್ಗೆ ತಮ್ಮ ಸರ್ಕಾರದ ವಿರುದ್ಧವೇ ಟೀಕೆ: ಸತ್ಯ ಹೇಳಿದ್ದಕ್ಕೆ ನನ್ನನ್ನು ವಜಾ ಮಾಡಿದ್ದಾರೆಂದ ಸಚಿವ

    2016ರಲ್ಲಿ ಜಯಚಂದ್ರ, ಸಿದ್ದರಾಮಯ್ಯ ಸರ್ಕಾರಕ್ಕೆ ನೀಡಿದ್ದ ಸದನ ಸಮಿತಿ ವರದಿ, ನೈಸ್ ಅಕ್ರಮಗಳ ಬಗ್ಗೆ ಸಿಬಿಐ ತನಿಖೆಗೆ ಶಿಫಾರಸು ಮಾಡಿತ್ತು. ಈಗ ಮತ್ತೊಮ್ಮೆ ವರದಿ ಬಗ್ಗೆ ಮಾಜಿ ಸಿಎಂಗಳಿಬ್ಬರೂ ಪ್ರಸ್ತಾಪ ಮಾಡಿದ್ದಾರೆ. ಈ ಮೂಲಕ ಪರೋಕ್ಷವಾಗಿ ಡಿಕೆಶಿ ಹೆಸರನ್ನು ಎತ್ತಿದ್ದಾರೆ.

    ಇದನ್ನೂ ಓದಿ: ನೈಸ್ ಹೆಚ್ಚುವರಿ ಜಮೀನು ವಾಪಸ್​ಗೆ ನಿರ್ಧಾರ; ಸಂಪುಟ ಉಪಸಮಿತಿ ನಿರ್ಧಾರ

    ಏನಿದು ನೈಸ್ ರಸ್ತೆ ಅಕ್ರಮ ಪ್ರಕರಣ?

    ನೈಸ್ ಅಕ್ರಮದಲ್ಲಿ ಇಂಧನ ಸಚಿವರಾಗಿದ್ದ ಡಿ.ಕೆ.ಶಿವಕುಮಾರ್ ಕೈವಾಡವಿದ್ದು, ರೈತರಿಂದ ಅಕ್ರಮವಾಗಿ ಭೂಮಿ ಪಡೆದುಕೊಂಡಿದ್ದಾರೆ ಎನ್ನುವ ಆರೋಪಗಳಿವೆ. ನೈಸ್ ಸಂಸ್ಥೆಗೆ ಭೂಮಿ ನೀಡುವಾಗ, ಅಂದು ಭೂಮಿ ಮಂಜೂರಾತಿ ಸಮಿತಿಯ ಅಧ್ಯಕ್ಷರಾಗಿದ್ದ ಡಿ.ಕೆ.ಶಿವಕುಮಾರ್ ರೈತರಿಂದ ಹೆಚ್ಚುವರಿಯಾಗಿ ಭೂಮಿಯನ್ನು ಅಕ್ರಮವಾಗಿ ಪಡೆದುಕೊಂಡಿದ್ದಾರೆ ಎಂಬ ಆರೋಪಗಳು ಕೇಳಿಬಂದಿದ್ದವು.

    ಮಾಜಿ ಮುಖ್ಯಮಂತ್ರಿಗಳು ಸುದ್ದಿಗೋಷ್ಟಿಯಲ್ಲಿ ಹೇಳಿದ್ದೇನು?

    ಮಾಜಿ ಸಿಎಂ ಬೊಮ್ಮಾಯಿ: ಪ್ರಕರಣದ ಕುರಿತಾಗಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದು “ನೈಸ್ ಸದನ ಸಮಿತಿಯ ವರದಿಯ ಪ್ರಕಾರ ಹೆಚ್ಚುವರಿ ಭೂಮಿ ವಾಪಸ್ ಪಡೆಯುವಂತೆ ಸೂಚಿಸಿದ್ದಾರೆ. ಸರ್ಕಾರ ಇದನ್ನ ವಾಪಸ್ ಪಡೆಯಬೇಕು. ಹೆಚ್ಚುವರಿ ಟೋಲ್ ಸರ್ಕಾರ ವಶಪಡಿಸಿಕೊಳ್ಳಬೇಕು. ಈ ಹೆಚ್ಚುವರಿ ಭೂಮಿ ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಅವಕಾಶ ಒದಗಿಸಲಿದೆ. ಟೋಲ್ ಆಡಿಟ್ ಮಾಡಿ ಹೆಚ್ಚುವರಿ ಹಣ ವಾಪಸ್ ಪಡೆಯಬೇಕು.

    ಇದನ್ನೂ ಓದಿ: ಬೆಂ-ಮೈ ಹೆದ್ದಾರಿಯಲ್ಲಿ ಅಂಡರ್‌ಪಾಸ್, ಸ್ಕೈವಾಕ್ಸಂಸದ, ಹೆದ್ದಾರಿ ಅಧಿಕಾರಿಗಳಿಂದ ಸ್ಥಳ ಪರಿಶೀಲನೆ ವಾಹನ ಸವಾರರು, ಸಾರ್ವಜನಿಕರ ಮನವಿಗೆ ಸ್ಪಂದನೆ

    ಸುಪ್ರೀಂ ಕೋರ್ಟ್ ತೀರ್ಪಿನಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಜಯಚಂದ್ರ ವರಿಯ ಒತ್ತಾಯದಂತೆ ಕ್ರಮ ಕೈಗೊಳ್ಳಬೇಕು. ಇದರ ಬಗ್ಗೆ ಸ್ಪಷ್ಟ ನಿಲುವನ್ನು ತೆಗೆದುಕೊಳ್ಳಬೇಕು” ಎಂದಿದ್ದರು.

    ಮಾಜಿ ಸಿಎಂ ಕುಮಾರಸ್ವಾಮಿ: ಸಂದರ್ಭ ಎಚ್​ಡಿಕೆ, “ಬೆಂಗಳೂರು- ಮೈಸೂರು ಹೆದ್ದಾರಿ ವಿಚಾರ ಕಂಪನಿಯವರು ಹೆದ್ದಾರಿ ನಿಯಮ ಪ್ರಕಾರ ಮಾಡುತ್ತೇವೆ ಎಂದಿದ್ದಾರೆ. ಕಳೆದ ಒಂದು ವಾರದಿಂದ ಕಡೆಯಲ್ಲಿ ಇದರ ಚರ್ಚೆಯ ವಿಚಾರ ಅಜೆಂಡಾದಲ್ಲಿ ಕೊನೆಯಲ್ಲಿಡುತ್ತಿದ್ದಾರೆ. ಇಂದು ನಾವಿಲ್ಲಾ ಅಂತ ಮೊದಲಿಗೆ ತಂದಿಟ್ಟಿದ್ದಾರೆ” ಎಂದು ನೈಸ್ ವಿಚಾರವನ್ನು ಪ್ರಸ್ತಾಪಿಸಿದರು.

    ಇದನ್ನೂ ಓದಿ: ನೈಸ್ ವಿರುದ್ಧ ಮತ್ತೆ ಗುಡುಗಿದ ದೇವೇಗೌಡ: ರಸ್ತೆ ಮಾಡದೇ ಟೋಲ್ ಸಂಗ್ರಹಕ್ಕೆ ಕೆಂಡಾಮಂಡಲ

    ನಂತರ ಮಾತನಾಡಿ “ರಾಜ್ಯದ ಮುಖ್ಯಮಂತ್ರಿಗಳು ಭ್ರಷ್ಟಾಚಾರ ನಿಯಂತ್ರಿಸಲು ಹೊರಟಿದ್ದಾರೆ. ಟಿ.ಬಿ. ಜಯಚಂದ್ರ ಅವರೇ ಮಾತನಾಡಿದ್ದು ಸದನ ಸಮೀತಿ ರಚಿಸಿ ಮೌನವಾಗುವ ಸರ್ಕಾರದ ನಿರ್ಧಾರ ನಾಟಕೀಯ ಅನ್ನಿಸುತ್ತಿದೆ ಅಂತ ನೈಸ್ ವಿಚಾರ ಪ್ರಸ್ತಾಪಿಸಿದ್ದರು. ನನ್ನ ಸರ್ಕಾರ ಅವಧಿಯಲ್ಲಿ ಮಾಡಬಹುದಿತ್ತು ಅಂತ ನೀವು ಹೇಳಬಹುದು. ಆಗ ಆಗಿಲ್ಲ. ನನ್ನನ್ನು ಕಟ್ಟಿಹಾಕಿದ್ದರು.

    ಬೊಮ್ಮಾಯಿ ಸರ್ಕಾರವನ್ನು ಅಭಿನಂದಿಸುತ್ತೇನೆ. ಮಾಧುಸ್ವಾಮಿ ಮೇಲೆ 5 ಲಕ್ಷ ದಂಡ ಹಾಕಿದರು. ದೇವೇಗೌಡರ ಮೇಲೆ 2 ಕೋಟಿ ರೂ. ದಂಡ ಹಾಕಿದ್ದರು. ಈ ಸಂದರ್ಭ ಬೊಮ್ಮಾಯಿ ಸರ್ಕಾರ ಈ ನಿಟ್ಟಿನಲ್ಲಿ ಒಂದಿಷ್ಟು ಕೆಲಸ ಮಾಡಿದ್ದು, ಕೋರ್ಟ್ ಈಗ ಆ ವ್ಯಕ್ತಿಗೆ ಛೀಮಾರಿ ಹಾಕಿದ್ದಾರೆ. ಈಗ ಅಲ್ಲಲ್ಲಿ ವೈಟ್ ಟ್ಯಾಪಿಂಗ್ ರಸ್ತೆ ಮಾಡಿಸುತ್ತಿದ್ದಾನೆ” ಎಂದು ಅಶೋಕ್ ಖೇಣಿ ವಿರುದ್ಧ ಏಕವಚನದಲ್ಲಿ ಆರೋಪಿಸಿದ್ದಾರೆ.

    ಇದನ್ನೂ ಓದಿ: ನಾಳೆ ಬೆಂಗಳೂರಿಗೆ ಅಮಿತ್ ಶಾ ಆಗಮನ | ಈ ರಸ್ತೆಗಳಲ್ಲಿ ಸಂಚಾರ ಬಂದ್; ಪರ್ಯಾಯ ಮಾರ್ಗದ ವಿವರ ಇಂತಿದೆ…

    ನಾವು ನೈಸ್ ಹಲವು ಅಕ್ರಮದ ವಿರುದ್ಧ ಒಂದಿಷ್ಟು ಚರ್ಚೆ ನಡೆಸಬೇಕೆಂದು ಮನವಿ ಮಾಡಿದ್ದೆವು. ನಾಡಿನ ಹಿತಾಸಕ್ತಿ ಕಾಪಾಡಲು ನಾವು ಬಿಜೆಪಿ ಜತೆ ಹೋರಾಟಕ್ಕೆ ಮುಂದಾಗಿದ್ದೇವೆ. ಭೂಮಿ ಕಬಳಿಸುವ ಇಂತಹ ಈಸ್ಟ್ ಇಂಡಿಯಾ ಕಂಪನಿ ವಿರುದ್ಧ ಹೋರಾಡುತ್ತೇವೆ. ಸದನ ಸಮಿತಿ ವರದಿ ಕೈಲಿಟ್ಟುಕೊಂಡು ಸುಮ್ಮನಿದ್ದೀರಿ. ಈ ಯೋಜನೆ ಸ್ಕ್ರಾಪ್ ಮಾಡಿದರೆ ಉಳಿಯುವ ಹಣದಿಂದ ಭಾಗ್ಯ ಮುನ್ನಡೆಸಬಹುದು. 30 ಸಾವಿರ ಕೋಟಿ ಹಣ ಸಿಗುತ್ತದೆ. ಅದನ್ನು ಬಳಸಿ. ಇದರಲ್ಲಿ ನಮ್ಮ ಪಕ್ಷದವರ ಭೂಮಿ ಇದ್ದರೂ ಮುಟ್ಟುಗೋಲು ಹಾಕಿಕೊಳ್ಳಿ. ನಮ್ಮ ಹೋರಾಟ ಮುಂದುವರಿಯುತ್ತದೆ” ಎಂದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts