More

    ಈ ರೀತಿಯಾದರೆ ಸಹಿಸಿಕೊಳ್ಳುವುದು ತುಂಬಾ ಕಷ್ಟ; ನವಜೋತ್​ ಸಿಂಗ್ ಸಿಧು ಹೀಗಂದಿದ್ಯಾಕೆ

    ನವದೆಹಲಿ: ಇಲ್ಲಿನ ಅರುಣ್​ ಜೇಟ್ಲಿ ಕ್ರೀಡಾಂಗಣದಲ್ಲಿ ರಾಜಸ್ಥಾನ ರಾಯಲ್ಸ್​ ಹಾಗೂ ಡೆಲ್ಲಿ ಕ್ಯಾಪಿಟಲ್ಸ್​ ನಡುವಿನ ಪಂದ್ಯದಲ್ಲಿ ರಿಷಭ್​ ಪಂತ್​ ಪಡೆಯೂ ಗೆಲುವಿನ ನಗೆ ಬೀರಿದ್ದು, ಪಾಯಿಂಟ್ಸ್​ ಟೇಬಲ್​ನಲ್ಲಿ 5ನೇ ಸ್ಥಾನಕ್ಕೇರಿದೆ. ಇನ್ನೂ ಪಂದ್ಯದಲ್ಲಿ ರಾಜಸ್ಥಾನ ನಾಯಕ ಸಂಜು ಸ್ಯಾಮ್ಸನ್​ ಔಟಾದ ಬಗ್ಗೆ ಹಲವರು ಅಸಮಾಧಾನ ವ್ಯಕ್ತಪಡಿಸುತ್ತಿದ್ದು, ಮೂರನೇ ಅಂಪೈರ್​ ನಿರ್ಧಾರಕ್ಕೆ ಹಲವರು ಕಿಡಿಕಾರಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಕ್ರಿಕೆಟಿಗ ನವಜೋತ್​ ಸಿಂಗ್​ ಸಿಧು, ತಂತ್ರಜ್ಞಾನದ ಸರಿಯಾದ ಬಳಕೆಯ ಕೊರತೆಯನ್ನು ಇಲ್ಲಿ ನೋಡಬಹುದಾಗಿದೆ. ಮೂರನೇ ಅಂಪೈರ್​ ಸರಿಯಾದ ತೀರ್ಪು ಕೊಡುವಲ್ಲಿ ವಿಫಲರಾಗಿರುವುದು ಸ್ಪಷ್ಟವಾಗಿ ಕಾಣುತ್ತದೆ ಎಂದು ಕಿಡಿಕಾರಿದ್ದಾರೆ.

    ಖಾಸಗಿ ಸುದ್ದಿ ವಾಹಿನಿ ಒಂದರಲ್ಲಿ ಈ ಕುರಿತು ಮಾತನಾಡಿದ ನವಜೋತ್​, ಸಂಜು ಸ್ಯಾಮ್ಸನ್​ ಔಟಾದ ಬಳಿಕ ಪಂದ್ಯದ ದಿಕ್ಕೆ ಬದಲಾಯಿತು ಎಂದು ಹೇಳಬಲ್ಲೆ. ನಾನು ಗಮನಿಸಿದ ಪ್ರಕಾರ ಸಂಜು ಸ್ಯಾಮ್ಸನ್​ ಕ್ಯಾಚ್​ ಹಿಡಿದ ಆಟಗಾರನ ಕಾಲು ಎರಡು ಬಾರಿ ಬೌಂಡರಿ ಲೈನ್ಗೆ ತಾಗಿರುವುದನ್ನು ಸ್ಪಷ್ಟವಾಗಿ ಗಮನಿಸಿದೆ. ಇಲ್ಲಿ ಮೂರನೇ ಅಂಪೈರ್​ ತಂತ್ರಜ್ಞಾನದ ಸರಿಯಾದ ಬಳಕೆ ಮಾಡಿಕೊಳ್ಳದಿರುವುದು ಸ್ಪಷ್ಟವಾಗಿ ಗೋಚರಿಸಿದೆ ಎಂದು ಹೇಳಿದ್ದಾರೆ.

    ಸಂಜು ಸ್ಯಾಮ್ಸನ್​ಗೆ ದಂಡ

    ಈ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದ ಸ್ಯಾಮ್ಸನ್ 16ನೇ ಓವರ್​ನ 4ನೇ ಎಸೆತದಲ್ಲಿ ಬೌಂಡರಿ ಲೈನ್​ನಲ್ಲಿ ಕ್ಯಾಚ್ ನೀಡಿದ್ದರು. ಈ ವೇಳೆ ಕ್ಯಾಚ್ ಹಿಡಿದ ಶಾಯ್ ಹೋಪ್ ಅವರ ಕಾಲು ಬೌಂಡರಿ ಲೈನ್​ಗೆ ತಗುಲಿದೆಯಾ ಎಂದು ಟಿವಿ ಅಂಪೈರ್ ಪರಿಶೀಲಿಸಿ ಔಟ್ ತೀರ್ಪು ನೀಡಿದ್ದರು. ಈ ತೀರ್ಪನ್ನು ಮರು ಪರಿಶೀಲಿಸುವಂತೆ ಸಂಜು ಸ್ಯಾಮ್ಸನ್ ಫೀಲ್ಡ್ ಅಂಪೈರ್ ಜೊತೆ ವಾಗ್ವಾದ ನಡೆಸಿದ್ದರು. ಇದು ಐಪಿಎಲ್‌ನ ನೀತಿ ಸಂಹಿತೆಯ ಅಡಿಯಲ್ಲಿ ಮೊದಲ ಹಂತದ ಅಪರಾಧವಾಗಿದೆ. ಅಲ್ಲದೆ ನೀತಿ ಸಂಹಿತೆಯ ಉಲ್ಲಂಘನೆಗಾಗಿ ಇದೀಗ ಸಂಜು ಸ್ಯಾಮ್ಸನ್​ಗೆ ಪಂದ್ಯ ಶುಲ್ಕದ ಶೇ.30 ರಷ್ಟು ದಂಡ ವಿಧಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts