More

    ಬಡ್ಡಿ ದರ ಕಡಿಮೆಗೊಳಿಸಲು ಸಹಕಾರಿ ಸಚಿವರಿಗೆ ಮನವಿ

    ಸಿಂಧನೂರು: ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳಿಗೆ ವಿಧಿಸುತ್ತಿರುವ ಬಡ್ಡಿದರ ಕಡಿಮೆಗೊಳಿಸಿ ಆರ್ಥಿಕ ಅಭಿವೃದ್ಧಿಗೆ ಸಹಕಾರ ನೀಡಬೇಕೆಂದು ಒತ್ತಾಯಿಸಿ ಮಸ್ಕಿ ಶಾಸಕ ಆರ್.ಬಸನಗೌಡ ತುರ್ವಿಹಾಳ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಸಹಕಾರಿ ಸಂಘದ ಸಿಇಒಗಳು ಸಹಕಾರಿ ಸಚಿವ ರಾಜಣ್ಣಗೆ ಗುರುವಾರ ಮನವಿ ಸಲ್ಲಿಸಿದರು.

    ಸಿಂಧನೂರು-5, ಗಂಗಾವತಿ-9, ಬಳ್ಳಾರಿ-8, ಮಾನವಿ-3 ಸೇರಿ ರಾಜ್ಯದಲ್ಲಿ 32 ಕೃಷಿ ಪತ್ತಿನ ಸಹಕಾರಿ ಸಂಘಗಳು ವಾಣಿಜ್ಯ ಬ್ಯಾಂಕುಗಳಡಿ ಕಾರ್ಯನಿರ್ವಹಿಸುತ್ತಿವೆ. ಆರ್‌ಬಿಐ ನಿರ್ದೇಶನದ ಪ್ರಕಾರ ಸಹಕಾರಿ ಸಂಘ(ಪಿಎಸಿಎಸ್)ಗಳಿಗೆ ವಾಣಿಜ್ಯ ಬ್ಯಾಂಕುಗಳು ಶೇ.7ಬಡ್ಡಿದರ ವಿಧಿಸಲು ಅವಕಾಶವಿದೆ.

    ಆದರೆ ಎಸ್‌ಬಿಐ ಬ್ಯಾಂಕ್ ನಿಯಮಗಳನ್ನು ಉಲ್ಲಂಘಿಸಿ ಶೇ.8.40 ಬಡ್ಡಿದರ ವಿಧಿಸುತ್ತಿದ್ದು, ಪಿಎಸಿಎಸ್‌ಗಳಿಗೆ ಆರ್ಥಿಕ ಹೊರೆ ಹಾಕುತ್ತಿದೆ. ರೈತರ ಅನುಕೂಲಕ್ಕಾಗಿ ರಾಜ್ಯ ಸರ್ಕಾರ ಶೇ.4.80 ಹಾಗೂ ಕೇಂದ್ರ ಸರ್ಕಾರ ಶೇ.3 ಬಡ್ಡಿ ಸಹಾಯಧನ ನೀಡುತ್ತಿವೆ. ಆದರೆ ಕಳೆದೆರಡು ವರ್ಷಗಳಿಂದ ಕೇಂದ್ರ ಸರ್ಕಾರ ಬಡ್ಡಿ ಸಹಾಯಧನ ನೀಡದ ಹಿನ್ನೆಲೆಯಲ್ಲಿ ವಾಣಿಜ್ಯ ಬ್ಯಾಂಕುಗಳಿಗೆ ಬಡ್ಡಿ ತುಂಬಲು ಆಗದ ಪರಿಸ್ಥಿತಿ ನಿರ್ಮಾಣವಾಗಿದೆ.

    ಇದನ್ನೂ ಓದಿ: ಸಹಕಾರ ಸಂಘಗಳು ರೈತರಿಗೆ ನೆರವಾಗಲಿ

    ರೈತರ ಏಳಿಗೆಗಾಗಿ ಕಾರ್ಯನಿರ್ವಹಿಸುತ್ತಿರುವ ಪಿಎಸಿಎಸ್‌ಗಳು ಎಸ್‌ಬಿಐನ ಅಧಿಕ ಬಡ್ಡಿದರ ಹಾಗೂ ಕೇಂದ್ರದ ಬಡ್ಡಿ ಸಹಾಯಧನ ಬರದೆ ಆರ್ಥಿಕ ದಿವಾಳಿಯತ್ತ ಸಾಗುತ್ತಿವೆ. ಕೂಡಲೇ ಈ ಬಗ್ಗೆ ಪರಿಶೀಲಿಸಿ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಿಇಒಗಳಾದ ವಿಜಯ ಬರಸಿ, ವೀರೇಶ ತುರ್ವಿಹಾಳ, ನೀಲಕಂಠ ಬಜೇಗೌಡ್ರ, ವೀರನಗೌಡ ಅರಳಹಳ್ಳಿ, ತಪಸ್‌ರೈ ಆರ್.ಎಚ್.ಕ್ಯಾಂಪ್ ಹಾಗೂ ಮಾನ್ವಿ, ಗಂಗಾವತಿ ಸಂಘದ ಸಿಇಒಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts