More

    ಮಹಿಳೆಯರ ಬದುಕಿಗೆ ಅಕ್ಕಮಹಾದೇವಿ ಆದರ್ಶ

    ಸಿಂಧನೂರು: ಸಮಾಜದಲ್ಲಿ ಮಹಿಳೆಯರಿಗೂ ಪುರುಷರಷ್ಟೇ ಸಮಾನ ಸ್ಥಾನಮಾನ ಕಲ್ಪಿಸಬೇಕೆಂದು 12ನೇ ಶತಮಾನದಲ್ಲೇ ಹೋರಾಟ ಮಾಡಿದ ಅಕ್ಕಮಹಾದೇವಿ ಇಂದಿನ ಮಹಿಳೆಯರ ಬದುಕಿಗೆ ಆದರ್ಶವಾಗಿದ್ದಾರೆ ಎಂದು ಬಸವ ಕೇಂದ್ರದ ಜಿಲ್ಲಾಧ್ಯಕ್ಷ ಪಿ.ವೀರಭದ್ರಪ್ಪ ಕುರುಕುಂದಿ ಹೇಳಿದರು.

    ನಗರದ ಅಕ್ಕಮಹಾದೇವಿ ವೃತ್ತದಲ್ಲಿ ಶಿವಶರಣೆ ಅಕ್ಕಮಹಾದೇವಿ ಜಯಂತಿ ಕಾರ್ಯಕ್ರಮದಲ್ಲಿ ಮಂಗಳವಾರ ಮಾತನಾಡಿದರು. ಸಮಾಜದಲ್ಲಿ ಸಾಮರಸ್ಯ ಮೂಡಿಸಲು, ಅಂಕು-ಡೊಂಕುಗಳನ್ನು ತಿದ್ದಲು ಶ್ರಮಿಸಿದ ಅಕ್ಕಮಹಾದೇವಿ ಹೆಸರು ಇತಿಹಾಸದ ಪುಟದಲ್ಲಿ ಉಳಿದುಕೊಂಡಿದ್ದು, ಅವರ ಆದರ್ಶಗಳು ಇಂದಿನ ಮಹಿಳೆಯರಿಗೆ ದಾರಿದೀಪವಾಗಿವೆ ಎಂದರು.

    ಬಣಜಿಗ ಸಮಾಜದ ತಾಲೂಕು ಅಧ್ಯಕ್ಷ ಎನ್.ಅಮರೇಶ, ಯುವ ಘಟಕ ಅಧ್ಯಕ್ಷ ಬಸವರಾಜ ಅಂಗಡಿ ಬೂತಲದಿನ್ನಿ, ಮಹಿಳಾ ಘಟಕ
    ಅಧ್ಯಕ್ಷೆ ನಂದಿನಿ ಮೇರನಾಳ, ಅಮರೇಶ ಸಾಹುಕಾರ ಮಾಡಸಿರವಾರ, ಎಚ್.ಜಿ.ಹಂಪಣ್ಣ, ಚನ್ನಪ್ಪ ತೊಂತನಾಳ, ವೀರೇಂದ್ರಪ್ರಸಾದ ಮೇರನಾಳ, ಮಲ್ಲನಗೌಡ ಮಾವಿನಮಡ್ಗು, ಆದಪ್ಪ ಜವಳಿ, ರಂಗಾರೆಡ್ಡಿ ಸಾಸಲಮರಿ, ಕರೇಗೌಡ ಕುರುಕುಂದ, ಗುಂಡಪ್ಪ ಬಳಿಗಾರ, ವಿಶ್ವನಾಥ ಚನ್ನಳ್ಳಿ, ರತ್ನಮ್ಮ ಬಂಗಾರಶೆಟ್ಟರ್, ಶೈಲಜಾ ಷಡಕ್ಷರಪ್ಪ,
    ಲತಾ ಜವಳಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts