More

    ಬಿಜೆಪಿ ಸರ್ಕಾರದಲ್ಲಿ ಮಹಿಳೆಯರಿಗೆ ಸುರಕ್ಷಿತೆ ಇಲ್ಲ

    ಸಿಂಧನೂರು: ಸರ್ಕಾರದ ಎನ್‌ಸಿಆರ್‌ಬಿ ವರದಿ ಪ್ರಕಾರ ದೇಶದಲ್ಲಿ ಪ್ರತಿದಿನ 10 ಮಹಿಳೆಯರ ಮೇಲೆ ಅತ್ಯಾಚಾರ ನಡೆಯುತ್ತಿದೆ. ಹತ್ರಾಸ್, ಉನ್ನಾವೋ, ಕಥುವಾ ಅತ್ಯಾಚಾರ, ಕೊಲೆ ಘಟನೆಗಳಲ್ಲಿ ಬಿಜೆಪಿಗರೇ ಭಾಗಿಯಾಗಿದ್ದು, ಕೆಲ ಪ್ರಕರಣದ ಆರೋಪಿಗಳ ಪರವಾಗಿ ನಾಚಿಗೆಗೆಟ್ಟು ಮೆರವಣಿಗೆ ನಡೆಸಿದ್ದಾರೆಂದು ಸಿಪಿಐ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್ ಆರೋಪಿಸಿದರು.

    ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿ, ಬಿಜೆಪಿಯವರದ್ದು ಬೇಟಿ ಬಚಾವೋ, ಬೇಟಿ ಪಢಾವೋ ಕೇವಲ ನಕಲಿ ಘೋಷಣೆಯಾಗಿದೆ. ಅವರ ಅಸಲಿ ವಿಚಾರ ಏನೆಂದರೆ, ಬೇಟಿಯರ ಮೇಲೆ ತಮ್ಮದೇ ಪಕ್ಷದ ಕೆಲವರು ಅತ್ಯಾಚಾರ, ದೌರ್ಜನ್ಯ ನಡೆಸಿದರೆ ಮೋದಿಯವರೂ ಕಿಂಚಿತ್ತೂ ಮಾತನಾಡುವುದಿಲ್ಲ. ಅತ್ಯಾಚಾರಿಗಳನ್ನು ಮಟ್ಟಹಾಕಬೇಕಾದ ಬಿಜೆಪಿ ಅತ್ಯಾಚಾರಿಗಳ ಪರ ಇರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ದೂರಿದರು.

    ಮಾತೆತ್ತಿದರೆ ಗೋವಿನ ಬಗ್ಗೆ ಮಾತನಾಡುವ ಬಿಜೆಪಿಯವರು ಮತ್ತು ಗೋರಕ್ಷರು, ನರೇಂದ್ರ ಮೋದಿ ಅವರ ಆಡಳಿತದಲ್ಲಿ ಭಾರತ ವಿಶ್ವದಲ್ಲೇ ಗೋಮಾಂಸ ರಫ್ತಿನಲ್ಲಿ 2ನೇ ಸ್ಥಾನಲ್ಲಿದೆ. ಮೋದಿ ಅವರು ರೈತ ವಿರೋಧಿ ನೀತಿಗಳ ಜಾರಿಯಿಂದಾಗಿ ರೈತರು ಪರಿತಪಿಸುತ್ತಿದ್ದಾರೆ. ಎಂಎಸ್‌ಪಿ ಕಾನೂನುಬದ್ಧಗೊಳಿಸಲು ದೆಹಲಿಯಲ್ಲಿ ಹೋರಾಟ ನಡೆಸಿದ ರೈತರ ಮೇಲೆ ಬಿಜೆಪಿ ಗುಂಡಿನ ಮಳೆಗರಿಯುವ ಮೂಲಕ ನೂರಾರು ರೈತರನ್ನು ಬಲಿ ಪಡೆದಿದೆ. ಸಾವಿರಾರು ರೈತರ ಮೇಲೆ ಪ್ರಕರಣ ದಾಖಲಿಸಿದೆ ಎಂದರು.

    ಬಿಜೆಪಿಯ ಸಚಿವರು, ಸಂಸದರು ಈಗಾಗಲೇ ಹಲವು ಬಾರಿ ಸಂವಿಧಾನ ಬದಲಾಯಿಸುವ ಮಾತನಾಡಿದ್ದಾರೆ. ಸಂವಿಧಾನವನ್ನು ಬದಲಿಸಿ ಮನಸ್ಪತಿ ಆಧರಿತ ವರ್ಣಾಶ್ರಮ ಪದ್ಧತಿಯನ್ನು ಈ ದೇಶದ ಜನರ ಮೇಲೆ ಹೇರುವುದೇ ಬಿಜೆಪಿಯ ಕಾರ್ಯಸೂಚಿಯಾಗಿದೆ. ಹಾಗಾಗಿ ರೈತ, ಕಾರ್ಮಿಕ, ಮಹಿಳಾ ಹಾಗೂ ಯುವಜನ ವಿರೋಧಿ ಕೇಂದ್ರದ ಬಿಜೆಪಿ ಸರ್ಕಾರವನ್ನು ಈ ಲೋಕಸಭಾ ಚುನಾವಣೆಯಲ್ಲಿ ನಿರ್ಣಾಯಕವಾಗಿ ಸೋಲಿಸುವ ಮೂಲಕ ಪ್ರತಿಯೊಬ್ಬರು ದೇಶದ ಪ್ರಜಾಪ್ರಭುತ್ವ ಮೌಲ್ಯಗಳನ್ನು ಎತ್ತಿಹಿಡಿಯಬೇಕು ಎಂದರು. ಸಿಪಿಐ ಜಿಲ್ಲಾ ಕಾರ್ಯದರ್ಶಿ ಬಾಷಮಿಯಾ, ವೆಂಕನಗೌಡ ಗದ್ರಟಗಿ, ಎಐಕೆಎಸ್‌ನ ಚಂದ್ರಶೇಖರ ಕ್ಯಾತ್ನಟ್ಟಿ, ಜಗದೀಶ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts