

ಸೊರಬ: ತಾಲೂಕಿನ ಉಳವಿ ಹೋಬಳಿ ಮಳಲಗದ್ದೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಶನಿವಾರ ನಡೆದ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಶೋಕ ಹೆಗಡೆ ತಂಡದ ಎಲ್ಲ 11 ಅಭ್ಯರ್ಥಿಗಳು ಜಯಗಳಿಸಿದ್ದಾರೆ.
ಕಳೆದ 20 ವರ್ಷಗಳಿಂದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದ ಅಶೋಕ ಹೆಗಡೆ ಈ ಬಾರಿ ತಮ್ಮ ತಂಡದ ಎಲ್ಲ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವ ಮೂಲಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಮೇಲುಗೈ ಸಾಧಿಸಿದ್ದಾರೆ.
ಲಿತಾಂಶ ಪ್ರಕಟವಾಗುತ್ತಿದ್ದಂತೆ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಷೇರುದಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಸಂಘದ ಅಭಿವೃದ್ಧಿಗೆ ಅಧ್ಯಕ್ಷನಾಗಿ ನಿರ್ದೇಶಕರ ಸಹಕಾರದಿಂದ ಶ್ರಮಿಸಿದ ಪ್ರಮಾಣಿಕ ಪ್ರಯತ್ನದ ಲವಾಗಿ ಈ ಬಾರಿ ನಮ್ಮ ಗುಂಪಿನವರು ಗೆದ್ದಿದ್ದಾರೆ. ಮುಂದಿನ 5 ವರ್ಷ ಎಲ್ಲರ ಸಹಕಾರದಿಂದ ಉತ್ತಮ ಕೆಲಸ ಕಾರ್ಯ ಸಾಲ ಸೌಲಭ್ಯ ಒದಗಿಸಲು ಬದ್ಧರಿದ್ದೇವೆ. ಅಲ್ಲದೆ ಸಂಘದಲ್ಲಿ ರೈತ ಸದಸ್ಯರಿಗೆ ರಸಗೊಬ್ಬರ, ಔಷಧ ಹಾಗೂ ಕೃಷಿ ಚಟುವಟಿಕೆಗೆ ಬೇಕಾಗುವ ಸಾಮಗ್ರಿ ಮಾರಾಟ, ಛಾಪಾ ಕಾಗದ ವಿತರಣೆ, ಗೋದಾಮು ವ್ಯವಸ್ಥೆ ಮಾಡವ ಉದ್ದೇಶವಿದೆ ಎಂದರು.
ಬೈರಪ್ಪ ಮೈಸಾವಿ, ಭಾಸ್ಕರ್, ಲೋಕೇಶ್, ರಮೇಶ್, ಪುಟ್ಟಪ್ಪ, ಮೋಹನ್, ಜಗದೀಶ್ ಇತರರಿದ್ದರು.