ಸದನದಲ್ಲೂ ಪ್ರತಿಧ್ವನಿಸಿದ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಪತ್ರ…

Siddaramaiah Veerendra Heggade
Published on

ಬೆಂಗಳೂರು: ನಿನ್ನೆ, ಧರ್ಮಸ್ಥಳದ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆ, ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಉದ್ದೇಶಿಸಿ ಪತ್ರ ಬರೆದಿದ್ದರು. ಅದರಲ್ಲಿ ಯಾವ ರೀತಿ ಧರ್ಮಸ್ಥಳದ ಮಂಜುನಾಥ ದೇವಸ್ಥಾನಕ್ಕೆ ಹೆಚ್ಚಿನ ಮಹಿಳೆಯರು ಆಗಮಿಸುತ್ತಿದ್ದು ಶಕ್ತಿ ಯೋಜನೆಯ ಲಾಭವನ್ನು ಪಡೆಯುತ್ತಿದ್ದಾರೆ ಎಂದು ಬರೆದಿದ್ದರು.

ಇದೀಗ ಇದೇ ವಿಚಾರ ಕಲಾಪದಲ್ಲೂ ಪ್ರತಿಧ್ವನಿಸಿದೆ. ವಿಧಾನಸಭೆಯ ಕಲಾಪದಲ್ಲಿ ಮಾತನಾಡಿದ ಮುಖ್ಯಂತ್ರಿ ಸಿದ್ದರಾಮಯ್ಯ, “ನಮ್ಮ ಸರ್ಕಾರದಿಂದ ರಾಜ್ಯದ ಜನ ಸಂತುಷ್ಠರಾಗಿದ್ದಾರೆ. ಧರ್ಮಸ್ಥಳ ಧರ್ಮಧಿಕಾರಿ ವಿರೇಂದ್ರ ಹೆಗ್ಗಡೆಯವರು ನಮ್ಮ ಯೋಜನೆಯನ್ನ ಮೆಚ್ಚಿ ಪತ್ರ ಬರೆದಿದ್ದಾರೆ.

ಶಕ್ತಿ ಯೋಜನೆಯಿಂದ ಧರ್ಮಸ್ಥಳಕ್ಕೆ ಮಹಿಳೆಯರ ಸಂಖ್ಯೆ ಹೆಚ್ಚಾಗಿದೆ. ನನ್ನ ಹೆಸರಲ್ಲಿ ಪೂಜೆ ಮಾಡಿಸುತ್ತಿದಾರೆ ಎಂದು ಪತ್ರಬರೆದಿದ್ದಾರೆ. ನೀವೇ ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿ ಮಾಡಿದ್ದೀರಾ.  ಆದರೆ ಸತ್ಯ ಏನಿದೆ, ವಾಸ್ತಾವಂಶ ಏನಿದೆ ಅದನ್ನ ಹೇಳಿದ್ದಾರೆ. ಏನಮ್ಮ ಅವರು ಹೇಳಿದ್ದಾರಲ್ವಾ?” ಎಂದು ಬಿಜೆಪಿಯ ಭಾರತಿ ಶೆಟ್ಟಿಗೆ ಕೇಳಿದ್ದಾರೆ. ಈ ಸಂದರ್ಭ ವಿಧಾನಸಭಾ ಸದಸ್ಯೆ ಭಾರತಿ ಶೆಟ್ಟಿ ಹೌದು ಹೌದು ಎಂದು ತಲೆಯಾಡಿಸಿದ್ದಾರೆ.

ಆಗ ಪ್ರತ್ಯುತ್ತರ ನೀಡಿದ ಭಾರತಿ ಶೆಟ್ಟಿ, “ಆದರೆ ಕಾಂಗ್ರೆಸ್‌ನಲ್ಲಿ ಸಂತುಷ್ಠರಾಗಿಲ್ಲ. ಪರಿಷತ್ತಿನಲ್ಲಿ ಒಬ್ಬರೇ ಒಬ್ಬರು ಮಹಿಳೆ ಇಲ್ಲ, ಮುಂದಿನ ದಿನಗಳಲ್ಲಿ ಇಬ್ಬರು ಮಹಿಳೆಯರನ್ನಾದ್ರು ಪರಿಷತ್ತಿನಲ್ಲಿ ನೇಮಕ ಮಾಡಿ” ಎಂದು ಕಾಲೆಳೆದಿದ್ದಾರೆ. ಆಗ ಮಾತನಾಡಿದ ತೇಜಸ್ವಿನಿ ಗೌಡ “ನಾವು ಮಹಿಳೆಯರ ವಿಚಾರಕ್ಕೆ ಬಂದ್ರೆ ಪಕ್ಷ ಭೇದ ಮರೆತು ಒಂದಾಗ್ತೀವಿ. ಪರಿಷತ್ತಿನಲ್ಲಿ ಕಾಂಗ್ರೆಸ್‌ನಿಂದ ಒಂದಿಬ್ಬರನ್ನ ನೇಮಿಸಿ” ಎಂದಿದ್ದಾರೆ.

ಅದಕ್ಕೆ ಉತ್ತರಿಸಿದ ಸಿಎಂ ಸಿದ್ದರಾಮ್ಯ “ಹೌದಮ್ಮ ತೇಜಸ್ವಿನಿ ಗೌಡ, ಪಾರ್ಲಿಮೆಂಟಿನಲ್ಲಿ ಶೇ 33ರಷ್ಟು ಮಹಿಳಾ ಮೀಸಲಾತಿಯ ಬಿಲ್ ಬಾಕಿ ಇದೆ. ಅದನ್ನ ಕೂಡಲೇ ಮಾಡಿಸಮ್ಮ” ಎಂದು ಕೈ ಮುಗಿದು ಟಾಂಗ್ ಕೊಟ್ಟಿದ್ದಾರೆ.  

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net