More

    ದಾವೂದ್ ಇಬ್ರಾಹಿಂನ ಹಳೆ ಫೋಟೊ ವೈರಲ್! ಯಾರು ಈ ಡೇರ್ ಡೆವಿಲ್‍ ಮಹಿಳೆ?

    ನವದೆಹಲಿ: “ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಣ್ಣ ಅಪರಾಧಿಯಾಗಿದ್ದಾಗ ‘ಆಗಷ್ಟೇ ಹೆಸರು ಮಾಡುತ್ತಿದ್ದಾಗ’ ನಾನು ಮೊದಲ ಬಾರಿಗೆ ಭೇಟಿಯಾದೆ” ಎಂದು ಈ ಮಹಿಳೆ ಹೇಳಿಕೊಳ್ಳುತ್ತಾರೆ. ಈ ಮಹಿಳೆ ದಾವೂದ್‍ ಇಬ್ರಾಹಿಂನನ್ನು ಅನೇಕ ಬಾರಿ ಭೇಟಿಯಾಗಿದ್ದು ಭಾರತ ಮತ್ತು ದುಬೈನಲ್ಲಿ ಅವನ ಸಂದರ್ಶನ ನಡೆಸಿದ್ದರು.

    ಈ ಮಹಿಳೆ ಓರ್ವ ಅನುಭವಿ ಪತ್ರಕರ್ತೆಯಾಗಿದ್ದು ಅವರ ಹೆಸರು ಶೀಲಾ ಭಟ್ ಎಂದು. ಕಳೆದ ತಿಂಗಳು ಅವರು ಭಾರತದ ಮೋಸ್ಟ್ ವಾಂಟೆಡ್ ದಾವೂದ್ ಇಬ್ರಾಹಿಂ ಅವರ ಜತೆಗಿದ್ದ ಹಳೆಯ ಚಿತ್ರವನ್ನು ಪೋಸ್ಟ್ ಮಾಡಿದಾಗ ಸಾಮಾಜಿಕ ಜಾಲತಾಣಗಳನ್ನು ಸದ್ದು ಮಾಡಿದ್ದರು.

    ನಾಲ್ಕು ದಶಕಗಳ ಪತ್ರಿಕೋದ್ಯಮದ ವೃತ್ತಿಜೀವನವನ್ನು ಹೊಂದಿರುವ ಶ್ರೀಮತಿ ಶೀಲಾ ಭಟ್, 1988ರ ಮುಂಬೈ ಸರಣಿ ಬಾಂಬ್ ಸ್ಫೋಟ ಸೇರಿದಂತೆ ಭಾರತದಲ್ಲಿ ಹಲವು ಭಯೋತ್ಪಾದನಾ ಚಟುವಟಿಕೆಗಳಿಗೆ ಕಾರಣೀಭೂತನಾಡಿದ್ದ ಡಾನ್‍ನನ್ನು ಸಂದರ್ಶಿಸಲು 1993ರಲ್ಲಿ ದುಬೈಗೆ ಭೇಟಿ ನೀಡಿದ್ದಾಗ ಈ ಚಿತ್ರವನ್ನು ತೆಗೆಯಲಾಗಿತ್ತು.

    ದಾವೂದ್ ಇಬ್ರಾಹಿಂನ ಹಳೆ ಫೋಟೊ ವೈರಲ್! ಯಾರು ಈ ಡೇರ್ ಡೆವಿಲ್‍ ಮಹಿಳೆ?
    ಶೀಲಾ ಭಟ್‍ರ ಡೈರಿ

    ದಾವೂದ್‍ ಇಬ‍್ರಾಹಿಂ ಭೇಟಿ ಆಗಿದ್ದು ಹೇಗೆ?

    1970ರ ದಶಕದ ಉತ್ತರಾರ್ಧದಲ್ಲಿ ಮುಂಬೈನ ಮಾಫಿಯಾ ಡಾನ್ ಕರೀಂ ಲಾಲಾ ಅವರೊಂದಿಗೆ ಚಿತ್ರಲೇಖಾ ನಿಯತಕಾಲಿಕದಲ್ಲಿ ಶೀಲಾ ಭಟ್ ಅವರು ತೆಗೆದಿದ್ದ ಚಿತ್ರ ದಾವೂದ್ ಅವರ ಗಮನ ಸೆಳೆದಿತ್ತು.

    ಮುಂಬೈನ ಮೊಹಮ್ಮದ್ ಅಲಿ ರಸ್ತೆಯಲ್ಲಿರುವ ಸರ್ಕಾರಿ ರಿಮಾಂಡ್ ಹೋಮ್‍ನಲ್ಲಿ ಕರೀಂ ಲಾಲಾನ ಜನರು ಬಾಲಕಿಯರಿಗೆ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಿ ಬರೆಯಲು ದಾವೂದ್ ಕರೆ ಮಾಡಿದ್ದ ಎಂದು ಅವರು ಸಂದರ್ಶನದಲ್ಲಿ ತಿಳಿಸಿದ್ದಾರೆ.

    “ನೀವು ಕರೀಂ ಲಾಲಾ ಅವರನ್ನು ಭೇಟಿಯಾದಿರಿ. ಅವನ ಜನರು ಹುಡುಗಿಯರಿಗೆ ಹೇಗೆ ಕಿರುಕುಳ ನೀಡುತ್ತಿದ್ದಾರೆ ಎಂಬುದರ ಬಗ್ಗೆ ದಯವಿಟ್ಟು ಬರೆಯಿರಿ” ಎಂದು ದಾವೂದ್ ಫೋನ್‍ಲ್ಲಿ ಶೀಲಾ ಭಟ್‍ಗೆ ಹೇಳಿದ್ದರು.

    “ಆಗ ದಾವೂದ್ ಕೇವಲ ಹೆಸರು ಮಾಡುತ್ತಿದ್ದ ವ್ಯಕ್ತಿ ಮತ್ತು ಅವನ ಮೇಲಧಿಕಾರಿಗಳು ಮಾರ್ವಾಡಿ, ಸಿಂಧಿ, ಪಂಜಾಬಿಗಳಾಗಿದ್ದರು” ಎಂದು ಅವರು ಹೇಳಿದರು. 1981-82 ರಲ್ಲಿ ಅವರು “ಕೇವಲ ಅಪರಾಧಿ” ಆಗಿದ್ದರು ಎಂದು ಶೀಲಾ ಭಟ್‍ ಸಂದರ್ಶನದಲ್ಲಿ ಹೇಳಿದರು.

    ಮೊದಲ ಸಂದರ್ಶನ…

    ಆ ದೂರವಾಣಿ ಕರೆ ಮಾಡಿದ ಸ್ವಲ್ಪ ಸಮಯದ ನಂತರ, ಮೊದಲ ಸಂದರ್ಶನ ನಡೆಯಿತು. ಶೀಲಾ ಭಟ್‍, ತನ್ನ ಗಂಡನೊಂದಿಗೆ ಡಾನ್‍ನನ್ನು ಭೇಟಿಯಾಗಲು ಹೋಗಿದ್ದರು.

    ಸಂದರ್ಶನದಲ್ಲಿ ಶೀಲಾ ಭಟ್, “ಮೊದಲು, ಅವರು ನಮ್ಮನ್ನು ಜೈಲ್ ರೋಡ್ (ಮುಂಬೈ) ಬಳಿಯ ಟ್ಯಾಂಕರ್ ಸ್ಟ್ರೀಟ್‍ಗೆ ಬರುವಂತೆ ಕರೆದರು. ನಂತರ ಅವರು ನಮ್ಮನ್ನು ಬಣ್ಣದ ಕಿಟಕಿಗಳನ್ನು ಹೊಂದಿರುವ ಕಾರಿನಲ್ಲಿ ಕರೆದೊಯ್ದು ಪಕ್ಮೋಡಿಯಾ ಸ್ಟ್ರೀಟ್‍ಗೆ ಕರೆದೊಯ್ದರು. ನಗರದ ಭಾಗ ನನಗೆ ತಿಳಿದಿತ್ತು. ನಂತರ ನಾನು, ನನ್ನ ಪತಿ, ದಾವೂದ್ ಮತ್ತು ಛೋಟಾ ಶಕೀಲ್ (ದಾವೂದ್ ನ ಸಹಾಯಕ) ಭೇಟಿಯಾದೆವು. ದಾವೂದ್‍ ಆಗ ಸಣ್ಣ ಭಾಷಣ ಮಾಡುತ್ತಿದ್ದರು. ಕರೀಂ ಲಾಲಾ ಒಬ್ಬ ಕೆಟ್ಟ ವ್ಯಕ್ತಿ ಎಂದು ಮಾತ್ರ ಅವರು ಹೇಳಲು ಬಯಸಿದ್ದರು” ಎಂದು ಅವರು ಹೇಳಿದರು.

    ಆ ಭೇಟಿಯ ಕೆಲ ವರ್ಷಗಳ ನಂತರ, ಶ್ರೀಮತಿ ಶೀಲಾ ಭಟ್, ಬರೋಡಾ ಜೈಲಿನಲ್ಲಿ ಡಾನ್ ಅನ್ನು ಮತ್ತೆ ಭೇಟಿಯಾದರು ಎಂದು ಹೇಳಿಕೊಂಡಿದ್ದಾರೆ. ಆ ಸಮಯದಲ್ಲಿ, ಶೀಲಾ ಭಟ್ ಬಾಂಬೆಯಲ್ಲಿ ವಾಸಿಸುತ್ತಿದ್ದರು. ಆಗಾಗ ವರದಿಗಾರಿಕೆಗಾಗಿ ಗುಜರಾತ್‍ಗೆ ಭೇಟಿ ನೀಡುತ್ತಿದ್ದರು. ಶೀಲಾ ಭಟ್, ಬರೋಡಾ ಜೈಲಿಗೆ ಭೇಟಿ ನೀಡಿದಾಗ ಅಲ್ಲಿ ದಾವೂದ್‍ ಇಬ್ರಾಹಿಂ ಅಲ್ಲಿ ಫುಟ್ಬಾಲ್ ಆಡುತ್ತಿರುವುದನ್ನು ಕಂಡರು ಎನ್ನಲಾಗಿದೆ.

    “ಮುಂಬೈನಲ್ಲಿ ಕರೀಂ ಲಾಲಾನ ವ್ಯವಹಾರಗಳನ್ನು ನಡೆಸುತ್ತಿದ್ದ ಆಲಂಜೇಬ್‍ನನ್ನು ಬಿಡುವುದಿಲ್ಲ ಎಂದು ದಾವೂದ್ ಹೇಳಿದ್ದರು ಮತ್ತು ನಾನು ಅದರ ಬಗ್ಗೆ ಬರೆದಿದ್ದೇನೆ. ಲೇಖನ ಪ್ರಕಟವಾದ ಸ್ವಲ್ಪ ಸಮಯದ ನಂತರ ಆಲಂಜೇಬ್ ಸಾವನ್ನಪ್ಪಿದ್ದರಿಂದ ಅದು ದಾವೂದ್‍ನದ್ದೇ ಕೆಲಸ ಆಗಿರಬಹುದು” ಎಂದು ಅವರು ಹೇಳಿದರು. ನಂತರ ಮುಂದಿನ 2-3 ವರ್ಷಗಳವರೆಗೆ ಅವರ ನಡುವೆ ಯಾವುದೇ ಸಂಪರ್ಕವಿರಲಿಲ್ಲ ಎಂದು ಅವರು ಹೇಳಿದರು.

    ದಾವೂದ್‍ನ ಭೇಟಿಗಿಂತಲೂ ಈ ಮಹಿಳೆಗೆ, ಟಿಕೆಟ್‍ ಖರ್ಚೇ ಚಿಂತಾಜನಕ ವಿಷಯ!

    1987ರಲ್ಲಿ ದಾವೂದ್ ಮತ್ತೆ ಫೋನ್ ಮಾಡಿದ. ಈ ಬಾರಿ ದುಬೈನಿಂದ, ಅವಳ ಪ್ರಕಾರ. ಹಲವಾರು ಕರೆಗಳ ನಂತರ, ಆಕೆಗೆ ಅಪಾಯಿಂಟ್ಮೆಂಟ್ ಸಿಕ್ಕಿತ್ತು. ಮಾದಕವಸ್ತು ವ್ಯವಹಾರದ ಬಗ್ಗೆ ಅವನನ್ನು ಸಂದರ್ಶಿಸಲು 1988ರಲ್ಲಿ ಶೀಲಾ ಭಟ್‍ ದುಬೈಗೆ ಹಾರಿದ್ದರು. ಆದರೆ ಅವರ ನಿಜವಾದ ಚಿಂತೆ ದಾವೂದ್‍ನ  ಭೇಟಿಯಾಗಿರಲಿಲ್ಲ. ಬದಲಾಗಿ ಟಿಕೆಟ್‍ನ ಖರ್ಚಿನದ್ದಾಗಿತ್ತು.

    ದಾವೂದ್ ನನ್ನು ಭೇಟಿ ಮಾಡುವುದಕ್ಕಿಂತ ಟಿಕೆಟ್ ಗಾಗಿ (3,500 ರೂ.) ಖರ್ಚು ಮಾಡಿದ ಹಣದ ಬಗ್ಗೆ ನನಗೆ ಹೆಚ್ಚು ಚಿಂತೆಯಾಗಿತ್ತು ಎಂದು ಅವರು ಹೇಳಿದರು. ಈ ಕುರಿತಾಗಿ ಶೀಲಾ ಭಟ್‍, “ನನಗೆ ಯಾವುದೇ ಭಯವಿರಲಿಲ್ಲ. ಈ ಹಿಂದೆ ಜರ್ನೈಲ್ ಸಿಂಗ್ ಭಿಂದ್ರನ್ ವಾಲೆ, ಛೋಟಾ ರಾಜನ್, ವರದರಾಜನ್ ಮೊದಲಿಯಾರ್, ಯೂಸುಫ್ ಪಟೇಲ್, ಹಾಜಿ ಮಸ್ತಾನ್, ಅರುಣ್ ಗಾವ್ಲಿ ಮುಂತಾದವರನ್ನು ಸಂದರ್ಶಿಸಿದ್ದೆ ಅಥವಾ ಭೇಟಿಯಾಗಿದ್ದೆ” ಎಂದು ಹೇಳಿದ್ದಾರೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts