ಕೋವಿಡ್ ಸಬ್​ ವೇರಿಯಂಟ್​ JN.1; ತೀವ್ರ ಆತಂಕ ಪಡುವ ಅಗತ್ಯವಿಲ್ಲ: ಆರೋಗ್ಯ ಸಚಿವರು

ವಿಜಯವಾಣಿ (80)
Published on

ಕೇರಳ: ಕೇರಳದಲ್ಲಿ ಪತ್ತೆಯಾದ JN.1 ಕೋವಿಡ್ 19 ಸಬ್​ ವೇರಿಯಂಟ್​ ಸೋಂಕಿಗೆ ಕುರಿತಂತೆ ಮಾತನಾಡಿದ ಆರೋಗ್ಯ ಸಚಿವೆ ವೀಣಾ ಜಾರ್ಜ್, ತೀವ್ರ ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ವೀಣಾ, "ಆತಂಕ ಪಡುವಂತ ಅಗತ್ಯವಿಲ್ಲ. ಅದು ಸಬ್​ ವೇರಿಯಂಟ್​​ ಆಗಿದೆ, ಈಗ ಪತ್ತೆಯಾಗಿದೆ. ಎರಡು-ಮೂರು ತಿಂಗಳ ಹಿಂದೆ ಸಿಂಗಾಪುರ ವಿಮಾನ ನಿಲ್ದಾಣದಲ್ಲಿ ಭಾರತೀಯರಲ್ಲಿ ಪರೀಕ್ಷೆ ನಡೆಸಿದಾಗ ಇದು ಪತ್ತೆಯಾಗಿತ್ತು. ಇದು ಭಾರತದ ಇತರ ಭಾಗಗಳಲ್ಲಿ ಅಸ್ತಿತ್ವದಲ್ಲಿದೆ. ಈ ಸೋಂಕನ್ನು ಕೇರಳ ಪತ್ತೆಹಚ್ಚಿದೆ" ಎಂದರು.

"ಕೇರಳದ ಆರೋಗ್ಯ ವ್ಯವಸ್ಥೆಯು ತುಂಬಾ ಉತ್ತಮವಾಗಿರುವುದರಿಂದ, ನಾವು ಜೀನೋಮಿಕ್ ಸೀಕ್ವೆನ್ಸಿಂಗ್ ಮೂಲಕ ಅದನ್ನು ಪತ್ತೆಹಚ್ಚಬಹುದು. ಹಾಗಾಗಿ ಹೆಚ್ಚು ಚಿಂತಿಸಬೇಕಾಗಿಲ್ಲ" ಎಂದು ಹೇಳಿದರು.

ಡಿಸೆಂಬರ್ 8 ರಂದು ಕೇರಳದ ತಿರುವನಂತಪುರಂ ಜಿಲ್ಲೆಯ ಕರಕುಲಂನಿಂದ ಆರ್‌ಟಿ-ಪಿಸಿಆರ್ ಪಾಸಿಟಿವ್ ಮಾದರಿಯಲ್ಲಿ ಮೊದಲ ಕೋವಿಡ್ 19 ಸಬ್ ವೇರಿಯಂಟ್ ಜೆಎನ್. 1 ಪ್ರಕರಣ ಪತ್ತೆಯಾಯಿತು ಎಂದು ಐಸಿಎಂಆರ್‌ನ ಮಹಾನಿರ್ದೇಶಕ ಡಾ. ರಾಜೀವ್ ಬಹ್ಲ್ ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net