More

    ‘ನನ್ನ ಮೂರನೇ ಅವಧಿಯಲ್ಲಿ ಮೂರು ಅಗ್ರ ಆರ್ಥಿಕತೆಗಳಲ್ಲಿ ಒಂದಾಗಲಿದೆ ಭಾರತ’: ಪ್ರಧಾನಿ ಮೋದಿ

    ಸೂರತ್: ‘ನನ್ನ ಮೂರನೇ ಅವಧಿಯಲ್ಲಿ ಭಾರತವು ವಿಶ್ವದ ಮೂರು ಅಗ್ರ ಆರ್ಥಿಕತೆಗಳಲ್ಲಿ ಒಂದಾಗಲಿದೆ’ ಎಂದು ಪ್ರಧಾನಿ ಮೋದಿ ಘೋಷಿಸಿದರು.
    ಅಂತರರಾಷ್ಟ್ರೀಯ ವಜ್ರ ಮತ್ತು ಆಭರಣ ವ್ಯಾಪಾರಕ್ಕಾಗಿ ವಿಶ್ವದ ಅತಿದೊಡ್ಡ ಮತ್ತು ಆಧುನಿಕ ಕೇಂದ್ರವಾಗಲಿರುವ ಸೂರತ್ ಡೈಮಂಡ್ ಬೋರ್ಸ್ ಕಟ್ಟಡವನ್ನು ಭಾನುವಾರ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

    ಇದನ್ನೂ ಓದಿ: ಜ.22ಕ್ಕೆ ಅಯೋಧ್ಯೆಗೆ ಬರಬೇಡಿ ಎನ್ನುತ್ತಿರುವುದೇಕೆ ಶ್ರೀರಾಮ ಮಂದಿರ ಟ್ರಸ್ಟ್? ಅಲ್ಲಿ ವ್ಯವಸ್ಥೆಗಳು ಹೇಗಿವೆ? ವಿವರ ಇಲ್ಲಿದೆ..
    “ನನ್ನ ಮೂರನೇ ಅವಧಿಯಲ್ಲಿ ಭಾರತವು ಅಗ್ರ ಮೂರು ಆರ್ಥಿಕತೆಗಳಲ್ಲಿ ಒಂದಾಗಲಿದೆ ಎಂದು ನಾನು ರಾಷ್ಟ್ರಕ್ಕೆ ಈ ಗ್ಯಾರಂಟಿ(ಭರವಸೆ) ಕೊಡುತ್ತಿದ್ದೇನೆ. ಸರ್ಕಾರವು ಮುಂಬರುವ 25 ವರ್ಷಗಳ ಅಭಿವೃದ್ಧಿ ಗುರಿಯನ್ನು ನಿಗದಿಪಡಿಸಿದೆ ಎಂದು ಮೋದಿ ಹೇಳಿದರು.

    ಇದಕ್ಕೂ ಮುನ್ನ ಸೂರತ್ ವಿಮಾನ ನಿಲ್ದಾಣದಲ್ಲಿ ನಿರ್ಮಿಸಲಾಗಿರುವ ನೂತನ ಇಂಟಿಗ್ರೇಟೆಡ್ ಟರ್ಮಿನಲ್ ಕಟ್ಟಡವನ್ನು ಪ್ರಧಾನಿ ಉದ್ಘಾಟಿಸಿದರು.
    ಸೂರತ್ ವಿಮಾನ ನಿಲ್ದಾಣದ ಹೊಸ ಇಂಟಿಗ್ರೇಟೆಡ್ ಟರ್ಮಿನಲ್ 1,200 ದೇಶೀಯ ಮತ್ತು 600 ಅಂತರರಾಷ್ಟ್ರೀಯ ಪ್ರಯಾಣಿಕರನ್ನು ಪೀಕ್ ಅವರ್‌ಗಳಲ್ಲಿ ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ. ಮುಂದೆ ಅದರ ಸಾಮರ್ಥ್ಯವನ್ನು 3,000 ಪ್ರಯಾಣಿಕರಿಗೆ ಹೆಚ್ಚಿಸುವ ಗುರಿಹೊಂದಲಾಗಿದೆ. ಇದರೊಂದಿಗೆ ಈ ವಿಮಾನ ನಿಲ್ದಾಣದ ವಾರ್ಷಿಕ ಪ್ರಯಾಣಿಕರ ನಿರ್ವಹಣಾ ಸಾಮರ್ಥ್ಯ ಈಗ 55 ಲಕ್ಷ ಪ್ರಯಾಣಿಕರಿಗೆ ಏರಿಕೆಯಾಗಿದೆ ಎಂದು ಮೋದಿ ತಿಳಿಸಿದರು.

    ಪ್ರಧಾನಿ ಮೋದಿ ಸೂರತ್ ವಿಮಾನ ನಿಲ್ದಾಣದಿಂದ ಡೈಮಂಡ್ ಬೋರ್ಸ್‌ಗೆ ರಸ್ತೆ ಮೂಲಕ ತೆರಳಿದ್ದು, ದಾರಿಯಲ್ಲಿ ಅವರಿಗೆ ಭವ್ಯ ಸ್ವಾಗತ ನೀಡಲಾಯಿತು. ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಲು ಭಾರೀ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು. ಸೂರತ್ ವಿಮಾನ ನಿಲ್ದಾಣದಿಂದ ಡೈಮಂಡ್ ಬೋರ್ಸ್ ವರೆಗಿನ 6 ಸ್ಥಳಗಳಲ್ಲಿ ಮೋದಿ ಅವರನ್ನು ಸ್ವಾಗತಿಸಲಾಯಿತು. ಈ ವೇಳೆ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಕೂಡ ಉಪಸ್ಥಿತರಿದ್ದರು.

    ಜಪಾನ್​ ತಯಾರಿಸಿದ ವಿಲಕ್ಷಣ ಸುತ್ತಿಗೆ ಆನ್​ಲೈನ್​ನಲ್ಲಿ ವೈರಲ್​:ಇದು ನಿಜವಾದ ಬಾಳೆಹಣ್ಣೇನಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts