More

    ಜ.22ಕ್ಕೆ ಅಯೋಧ್ಯೆಗೆ ಬರಬೇಡಿ ಎನ್ನುತ್ತಿರುವುದೇಕೆ ಶ್ರೀರಾಮ ಮಂದಿರ ಟ್ರಸ್ಟ್? ಅಲ್ಲಿ ವ್ಯವಸ್ಥೆಗಳು ಹೇಗಿವೆ? ವಿವರ ಇಲ್ಲಿದೆ..

    ಅಯೋಧ್ಯೆ: ಅಯೋಧ್ಯೆಯು ರಾಮಮಂದಿರ ನಿರ್ಮಾಣ ಕೋಟ್ಯಂತರ ಹಿಂದುಗಳ ಕನಸು. ಅದೇ ರೀತಿ ಮಂದಿರದಲ್ಲಿ ರಾಮಲಲ್ಲಾ(ಶ್ರೀರಾಮಚಂದ್ರ) ಮೂರ್ತಿಯ ಪ್ರಾಣಪ್ರತಿಷ್ಠೆ ಹಾಗೂ ಮಂದಿರದ ಮಹಾ ಉದ್ಘಾಟನಾ ಕಾರ್ಯಕ್ರಮ ಕಣ್ತುಂಬಿಕೊಳ್ಳಬೇಕೆಂಬುದು ಪ್ರತಿಯೊಬ್ಬರ ಆಸೆಯಾಗಿರುತ್ತದೆ. ಇದು ಜನವರಿ 22 ರಂದು ನೆರವೇರುತ್ತಿದ್ದು, ಅಂದು ಅಯೋಧ್ಯೆಗೆ ಬರಬೇಡಿ ಎಂದು ಶ್ರೀರಾಮ ಮಂದಿರ ಟ್ರಸ್ಟ್ ಹೇಳಿದೆ. ಇದು ಜನರಲ್ಲಿ ಅಸಮಾಧಾನಕ್ಕೆ ಕಾರಣವಾಗಿರಬಹುದು. ಆದರೆ ಟ್ರಸ್ಟ್​ ಇಂತಹ ಹೀಗೆ ಹೇಳಿರುವುದರ ಹಿಂದೆ ಹಲವು ಕಾರಣಗಳಿವೆ ಎಂಬುದನ್ನು ಯಾರೂ ಮರೆಯುವಂತಿಲ್ಲ.

    ಇದನ್ನೂ ಓದಿ: ಏಳು ವರ್ಷದ ನಂತರ ಡಿಸ್ನಿ ಅನಿಮಲ್ ಕಿಂಗ್‌ಡಮ್‌ನಲ್ಲಿ ಆಫ್ರಿಕನ್ ಆನೆ ಮರಿ ಜನನ!

    ಅಯೋಧ್ಯೆ ಜ.22ರಂದು ಗರ್ಭಗುಡಿಯಲ್ಲಿ ‘ರಾಮ ಲಲ್ಲಾ’ನ ಹೊಸ ವಿಗ್ರಹ ಇರಿಸಲಾಗುತ್ತಿದ್ದು, ಪ್ರಾಣಪ್ರತಿಷ್ಠೆ ಕಾರ್ಯಕ್ರಮವಿದೆ. ಹೀಗಾಗಿ ದೇಶಾದ್ಯಂತ ಕೋಟ್ಯಂತರ ಜನ ಮುಂದಿನ ತಿಂಗಳು ಸರಯೂ ತೀರದ ದೇವಾಲಯ ನಗರಿ ಅಯೋಧ್ಯೆಗೆ ಭೇಟಿ ನೀಡಲು ಯೋಜಿಸುತ್ತಿದ್ದಾರೆ.

    ರಾಮಮಂದಿರ ನಿರ್ಮಾಣವಾಗುತ್ತಿದ್ದಂತೆ ಅಯೋಧ್ಯೆಯು ಪ್ರವಾಸಿ ಕೇಂದ್ರವಾಗಿ ಬದಲಾಗುತ್ತಿದೆ. ಉದ್ಘಾಟನೆಯ ದಿನಾಂಕ ಸಮೀಪಿಸುತ್ತಿದ್ದಂತೆ ಬಹುತೇಕ ನಿವಾಸಿಗಳು ತಮ್ಮ ಮನೆಗಳಲ್ಲಿ ಹೋಂಸ್ಟೇಗಳನ್ನು ಸ್ಥಾಪಿಸುತ್ತಿದ್ದಾರೆ. ಇನ್ನೂ ಕೆಲವರು ನಿವೇಶನ, ಆಸ್ತಿ ಖರೀದಿಗೆ ಮುಂದಾಗಿದ್ದಾರೆ. ಹೀಗಾಗಿ ಬೆಲೆಗಳು ಗರಿಷ್ಠ ಮಟ್ಟಕ್ಕೇರಿವೆ. ಹೂಡಿಕೆದಾರರು, ಹೋಟೆಲ್ ಮಾಲೀಕರು ಮತ್ತು ವ್ಯಾಪಾರಸ್ಥರು ರಾಮಜನ್ಮಭೂಮಿಯತ್ತ ಧಾವಿಸಿದ್ದು, ಆಸ್ತಿ ಬೆಲೆಯನ್ನು ಮೂಲ ಬೆಲೆಗಿಂತ ಮೂರು ಪಟ್ಟು ಹೆಚ್ಚಿಸಿದ್ದಾರೆ.

    ರಾಮಮಂದಿರದಲ್ಲಿ ರಾಮಲಲ್ಲಾನ ‘ಪ್ರಾಣ ಪ್ರತಿಷ್ಠಾಪನೆ’ ಕಾರ್ಯಕ್ರಕ್ಕೆ ಹರಿದು ಬರುವ ಜನಸಾಗರ ತಡೆಯಲು ಹಾಗೂ ಆಹ್ವಾನದ ಮೇರೆಗೆ ಬರುವ ಅತಿಥಿಗಳಿಗೆ ಮೂಲಸೌಲಭ್ಯ ಕಲ್ಪಿಸಲು ಅಧಿಕಾರಿಗಳು ಸಜ್ಜಾಗುತ್ತಿದ್ದಾರೆ, ಅಷ್ಟೇ ಅಲ್ಲ, ಭದ್ರತಾ ಕ್ರಮಗಳನ್ನು ಹೆಚ್ಚಿಸುತ್ತಿದ್ದಾರೆ. ಬರುವ ಪ್ರವಾಸಿಗರಿಗೆ ಕನಿಷ್ಠ ಸೌಲಭ್ಯಗಳನ್ನು ಕಲ್ಪಿಸಲು ವ್ಯವಸ್ಥೆಗಳನ್ನು ಮಾಡುತ್ತಿದ್ದಾರೆ.

    ಪಟ್ಟಣದಾದ್ಯಂತ ಭದ್ರತೆಗಾಗಿ ಸಿಸಿ ಕ್ಯಾಮೆರಾ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಭದ್ರತೆ ಪರಿಶೀಲನೆಗೆ ಡ್ರೋನ್‌ಗಳನ್ನು ಬಳಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಾರ್ಯಕ್ರಮಕ್ಕೆ ಸುಮಾರು 4,000 ಸಂತರು ಆಗಮಿಸುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
    ಅಯೋಧ್ಯೆಯಲ್ಲಿ ಜನಸಂದಣಿ ಹೆಚ್ಚಾದರೆ ಇನ್ನಿಲ್ಲದ ಸಮಸ್ಯೆಗಳು ಸೃಷ್ಟಿಯಾಗುತ್ತವೆ. ಇದನ್ನು ತಪ್ಪಿಸಲು ತಮ್ಮ ಊರುಗಳಲ್ಲೇ ದೇವಾಲಯಗಳಿಗೆ ಭೇಟಿ ನೀಡುವ ಮೂಲಕ ಕಾರ್ಯಕ್ರಮದ ಸಂಭ್ರಮಾಚರಣೆ, ಪೂಜೆ, ಪುನಸ್ಕಾರಗಳನ್ನು ಆಚರಿಸಲು ಜನರನ್ನು ರಾಮಮಂದಿರ ಟ್ರಸ್ಟ್ ಕಾರ್ಯದರ್ಶಿ ಚಂಪತ್ ರೈ ಕೇಳಿಕೊಂಡಿದ್ದಾರೆ.

    ಜ.22 ರಂದು ಅಯೋಧ್ಯೆಗೆ ಬರಬೇಡಿ. ಊರು ಚಿಕ್ಕದಾಗಿದೆ. ನಿಮ್ಮ ಹತ್ತಿರದ ದೇವಸ್ಥಾನದಲ್ಲಿ ಸಭೆ ಮಾಡಿ. ನಿಮಗೆ ಕಾರ್ಯಸಾಧ್ಯವಾದ ದೇವಾಲಯಕ್ಕೆ ಹೋಗಿ ಎಂದು ಸಲಹೆ ನೀಡಿದ್ದಾರೆ. ಗರ್ಭಗುಡಿ ಸಿದ್ಧವಾಗಿದೆ, ವಿಗ್ರಹವೂ ಸಿದ್ಧವಾಗಿದೆ, ಆದರೆ ಸಂಪೂರ್ಣ ದೇವಾಲಯ ನಿರ್ಮಾಣಕ್ಕೆ ಇನ್ನೂ ಎರಡು ವರ್ಷ ಬೇಕಾಗಬಹುದು ಎಂದು ಅವರು ಹೇಳಿದ್ದಾರೆ.

    ಇನ್ನು ಪ್ರಾಣ-ಪ್ರತಿಷ್ಠಾ ಸಮಾರಂಭದ ವೈದಿಕ ವಿಧಿವಿಧಾನಗಳು ಜ.16 ರಂದು ಮುಖ್ಯ ಸಮಾರಂಭಕ್ಕೆ ಒಂದು ವಾರ ಮುಂಚಿತವಾಗಿ ಪ್ರಾರಂಭವಾಗುತ್ತವೆ. ಮಹಾಮಸ್ತಕಾಭಿಷೇಕದ ಮುಖ್ಯ ವಿಧಿವಿಧಾನಗಳನ್ನು ಲಕ್ಷ್ಮೀಕಾಂತ ದೀಕ್ಷಿತ್ ನೆರವೇರಿಸಲಿದ್ದಾರೆ.

    ಅಯೋಧ್ಯೆಯಲ್ಲಿ 4.40 ಎಕರೆ ವಿಸ್ತೀರ್ಣದ ಪ್ರವಾಸೋದ್ಯಮ ಸೌಲಭ್ಯ ಕೇಂದ್ರವನ್ನು ನಿರ್ಮಿಸಲು ಸರ್ಕಾರ ಯೋಜಿಸುತ್ತಿದೆ. ಯೋಜನೆಯಡಿ ಪ್ರವಾಸೋದ್ಯಮ ಕಚೇರಿ, ಪ್ರಯಾಣಿಕರ ವಸತಿ, ಕಲಾ ಮತ್ತು ಕರಕುಶಲ ಕೇಂದ್ರ, ಫುಡ್ ಕೋರ್ಟ್, ಶಾಪಿಂಗ್ ಮಾರ್ಟ್ ಮತ್ತು ಪಾರ್ಕಿಂಗ್ ಸ್ಥಳ ಸೇರಿದಂತೆ ವಿವಿಧ ವಾಣಿಜ್ಯ ಕೇಂದ್ರಗಳನ್ನು ಪ್ರವಾಸಿ ಕೇಂದ್ರದಲ್ಲಿ ಅಭಿವೃದ್ಧಿಪಡಿಸಲಾಗುವುದು.

    ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ಈ ತಿಂಗಳ ಅಂತ್ಯದ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಕೇಂದ್ರ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದ್ದಾರೆ.

    ರಾಮಮಂದಿರ ಗರ್ಭಗುಡಿಯ 18 ಬಾಗಿಲುಗಳಿಗೆ ಚಿನ್ನದ ಲೇಪನ! ಅಯೋಧ್ಯೆಗೆ 1,000 ರೈಲುಗಳ ಓಡಾಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts