More

  ಲೋಕ ಸಮರ 2024: ವೀಣಾ ಕಾಶಪ್ಪನವರ vs ಸಂಯುಕ್ತಾ ಪಾಟೀಲ್! ಯಾರಿಗೆ ಟಿಕೆಟ್​ ಅಂತಿಮ?

  ಬಾಗಲಕೋಟೆ: ರಾಜ್ಯದಲ್ಲಿ ಚುನಾವಣಾ ರಂಗು ಕಾವೇರುತ್ತಿದ್ದು, ಸದ್ಯ ಬಾಗಲಕೋಟೆಯ ಕಾಂಗ್ರೆಸ್​ ಅಭ್ಯರ್ಥಿ ಯಾರೆಂದು ಇನ್ನು ಅಧಿಕೃತವಾಗಿ ಘೋಷಣೆಯಾಗಿಲ್ಲ. ಆದರೆ, ಇದೆಲ್ಲದಕ್ಕೂ ಮುನ್ನವೇ ಇವರಿಗೆ ಟಿಕೆಟ್​, ಅವರಿಗೆ ಟಿಕೆಟ್​ ಎಂಬ ಊಹಾಪೋಹಗಳು ಹರಿದಾಡುತ್ತಿವೆ. ಈ ಬಗ್ಗೆ ಏನಾಗಲಿದೆ ಎಂಬುದರ ಮಾಹಿತಿ ಶೀಘ್ರವೇ ಹೊರಬೀಳಲಿದೆ.

  ಇದನ್ನೂ ಓದಿ: ಸಿದ್ದರಾಮಯ್ಯ ತಾತ ನನ್ನ ಪೇವರೆಟ್​ ಎಂದ ‘ಕರಿಮಣಿ ಮಾಲೀಕ’ ರೀಲ್ಸ್​ ಖ್ಯಾತಿಯ ಶಮಿಕಾ!

  ಈಗಾಗಲೇ ಚುನಾವಣಾ ಆಯೋಗ ಲೋಕಸಭೆ ಚುನಾವಣೆ ದಿನಾಂಕವನ್ನು ಪ್ರಕಟಿಸಿದ ಬೆನ್ನಲ್ಲೇ ಈಗ ಪ್ರಚಾರ ಕಾರ್ಯಗಳು ಕೂಡ ಭರದಿಂದ ಸಾಗುತ್ತಿವೆ. ಈ ಮಧ್ಯೆ ಬಾಗಲಕೋಟೆಯಲ್ಲಿ ಸಚಿವ ಶಿವಾನಂದ ಪಾಟೀಲ ಪುತ್ರಿ ಸಂಯುಕ್ತಾ ಪಾಟೀಲಗೆ ಟಿಕೆಟ್ ಪಕ್ಕಾ ಎನ್ನುವ ಮಾತು ಕೇಳಿಬರುತ್ತಿದ್ದಂತೆ, ಕಳೆದ ಬಾರಿ ಪರಾಜಿತ ಅಭ್ಯರ್ಥಿ ವೀಣಾ ಕಾಶಪ್ಪನವರಿಗೆ ಟಿಕೆಟ್ ತಪ್ಪುವ ಆತಂಕ ಹೆಚ್ಚಾಗಿದೆ.

  ಈ ಕುರಿತು ಪಕ್ಷದ ಮುಖಂಡರ ಮೇಲೆ ಒತ್ತಡ ಹಾಕಲು ವೀಣಾ ಕಾಶಪ್ಪನವರ ಬೆಂಬಲಿಗ ಮಹಿಳೆಯರು ಗುಂಪು ಬೆಂಗಳೂರು ಚಲೋ ಆರಂಭಿಸಿದ್ದು, ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಮೇಲೆ ಒತ್ತಡ ಹಾಕುವ ತಂತ್ರ ರೂಪಿಸಿದ್ದಾರೆ. ವೀಣಾ ಕಳೆದ ಸಲ ಸೋತರೂ ಐದು ವರ್ಷ ಪಕ್ಷ ಸಂಘಟನೆ ಮಾಡಿದ್ದಾರೆ. ಹೀಗಾಗಿ ಅವರಿಗೆ ಟಿಕೆಟ್ ಕೊಡಬೇಕು ಎನ್ನುವ ವಾದ ಬೆಂಬಲಿಗರದ್ದು.

  ಇದನ್ನೂ ಓದಿ: ದೇವರ ಹುಂಡಿ ಕದಿಯುವ ಮುನ್ನ ಕೈಮುಗಿದು ಪ್ರಾರ್ಥಿಸಿದ ಕಿರಾತಕ! ಸಿಸಿಟಿವಿಯಲ್ಲಿ ಸೆರೆಯಾಯ್ತು ಶಾಕಿಂಗ್ ವಿಚಾರ

  ಸದ್ಯ ಕ್ಷೇತ್ರಕ್ಕೆ ಅಭ್ಯರ್ಥಿ ವಿಚಾರವಾಗಿ ಸಂಯುಕ್ತಾ ಪಾಟೀಲ ಹಾಗೂ ಮಾಜಿ ಸಚಿವ ಅಜಯಕುಮಾರ ಸರನಾಯಕ ಇಬ್ಬರಲ್ಲಿ ಒಬ್ಬರಿಗೆ ಟಿಕೆಟ್ ಸಿಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ವೀಣಾ ಕಾಶಪ್ಪನವರ ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ ಪತ್ನಿ. ವೀಣಾಗೆ ಜಿಲ್ಲೆಯ ಕೆಲ ಕಾಂಗ್ರೆಸ್ ಶಾಸಕರ ಬೆಂಬಲವಿಲ್ಲ ಎಂಬ ಕಾರಣದಿಂದ ಟಿಕೆಟ್ ಸಿಗುವುದು ಡೌಟ್ ಎಂದು ಸಿಎಂ ಸುಳಿವು ನೀಡಿದ್ದಾರೆ ಎನ್ನಲಾಗ್ತಿದೆ.

  ಟಿಕೆಟ್ ಪಡೆಯಲು ಕಳೆದ ನಾಲ್ಕೈದು ದಿನಗಳಿಂದ ವೀಣಾ ಹಾಗೂ ಅವರ ಪತಿ ವಿಜಯಾನಂದ ಕಾಶಪ್ಪನವರ ಬೆಂಗಳೂರಿನಲ್ಲೇ ಠಿಕಾಣಿ ಹೂಡಿದ್ದಾರೆ. ಇದೀಗ ಕೊನೆಯ ಕಸರತ್ತು ನಡೆಸಲು ಬೆಂಬಲಿಗರಿಂದ ರಾಜಧಾನಿಯಲ್ಲಿ ವರಿಷ್ಠರ ಎದುರು ಶಕ್ತಿ ಪ್ರದರ್ಶನ ನಡೆಯಲಿದೆ.

  ‘ಇದೆಲ್ಲವೂ ನನ್ನ ಕುಟುಂಬದ ಮೇಲೆ ಪರಿಣಾಮ ಬೀರಿದೆ’; ಕಡೆಗೂ ಮೌನ ಮುರಿದ ಚಹಲ್ ಪತ್ನಿ!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts