More

  ಸರಿಗಮಪ ಸೀಸನ್-20ರ ವಿಜೇತರಾದ ದರ್ಶನ್ ನಾರಾಯಣ್: ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರ

  ಬೆಂಗಳೂರು: ಜೀ ಕನ್ನಡ ವಾಹಿನಿಯ ಖ್ಯಾತ ರಿಯಾಲಿಟಿ ಶೋ “ಸರಿಗಮಪ ಸೀಸನ್ 20” ನಿನ್ನೆಯಷ್ಟೇ ಮುಗಿದಿದೆ. ಈ ಸೀಸನ್​​​ನಲ್ಲಿ ಗಾಯಕರು ಒಬ್ಬರಿಗಿಂತ ಒಬ್ಬರು ಅದ್ಭುತವಾಗಿ ಹಾಡುತ್ತಿದ್ದರಿಂದ ವಿಜೇತರು ಯಾರಾಗಬಹುದು ಎಂಬ ಪ್ರಶ್ನೆ ಎಲ್ಲರ ಮನದಲ್ಲಿತ್ತು. ಸದ್ಯ ಈ ಪ್ರಶ್ನೆಗೀಗ ಉತ್ತರ ಸಿಕ್ಕಿದ್ದು, ಸರಿಗಮಪ ಸೀಸನ್ 20ರ ಕಿರೀಟವನ್ನು ದರ್ಶನ್ ನಾರಾಯಣ್ ಮುಡಿಗೇರಿಸಿಕೊಂಡಿದ್ದಾರೆ.

  ಆರಂಭದಿಂದಲೂ ದರ್ಶನ್ ನಾರಾಯಣ್ ಗಾಯನದ ಜೊತೆಗೆ ನೃತ್ಯ, ನಟನೆಯಲ್ಲೂ ಗುರುತಿಸಿಕೊಂಡಿದ್ದರು. ಬಹುಮುಖ ಪ್ರತಿಭೆಯಾಗಿದ್ದ ದರ್ಶನ್, ಫಿನಾಲೆ ಹತ್ತಿರವಾಗುತ್ತಿದ್ದಂತೆ “ಸರಿಗಮಪ ಸೀಸನ್ 20” ಕುರಿತು ಸ್ವತಃ ಅವರೇ ಕೃತಿ ರಚಿಸಿದ್ದು, ಇದು ಜ್ಯೂರಿಗಳು ಮಾತ್ರವಲ್ಲದೆ, ವೀಕ್ಷಕರ ಮನ ಕೂಡ ಗೆದ್ದಿತ್ತು. ಗಾಯಕ ಹೇಮಂತ್ ಅವರ ಟೀಂನಲ್ಲಿದ್ದ ದರ್ಶನ್​​​ಗೆ ಅಪಾರ ಸಂಖ್ಯೆಯ ಅಭಿಮಾನಿ ಬಳಗವೇ ಹುಟ್ಟಿಕೊಂಡಿದ್ದು, ದರ್ಶನ್ ವಿನ್ ಆಗುತ್ತಿದ್ದಂತೆ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ. ಅಂದಹಾಗೆ ಫಿನಾಲೆಯಲ್ಲಿ ದರ್ಶನ್ ಹಾಡಿದ ‘ಗಾನ ವಿದ್ಯಾ ಬಡಿ ಕಠಿಣ ಹೈ’ ಗೀತೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು.

  ಈ ಹಿಂದೆಯೇ ನಡೆಯಬೇಕಿದ್ದ ಸರಿಗಮಪ ಫಿನಾಲೆ ಕಾರ್ಯಕ್ರಮ ನಿನ್ನೆ ನಡೆದಿದೆ. ತಮ್ಮ ಅದ್ಭುತ ಪ್ರತಿಭೆಯಿಂದ ಎಲ್ಲರ ಮನಗೆದ್ದಿರುವ ದರ್ಶನ್ ನಾರಾಯಣ್ ಈ ಸೀಸನ್​​​ನ್ ವಿಜೇತರಾಗಿ ಹೊರಹೊಮ್ಮಿದರೆ, ರಮೇಶ್​​ ಲಮಾಣಿ ಫಸ್ಟ್​ ರನರ್ ಅಪ್, ಡಾ.ಶ್ರಾವ್ಯಾ ರಾವ್ ಸೆಕೆಂಡ್ ರನ್ನರ್ ಅಪ್ ಆಗಿದ್ದಾರೆ.

  ಮಹಾಗುರುಗಳಾದ ಹಂಸಲೇಖಾ ಹಾಗೂ ಅರ್ಜುನ್ ಜನ್ಯ, ವಿಜಯ್ ಪ್ರಕಾಶ್​ ಕಾರ್ಯಕ್ರಮದಲ್ಲಿ ಜಡ್ಜ್ ಆಗಿದ್ದರು. ಎಂದಿನಂತೆ ಅನುಶ್ರೀ ಕಾರ್ಯಕ್ರಮ ನಿರೂಪಣೆ ಮಾಡಿದರು. ವಿಶೇಷವೆಂದರೆ ಕಾರ್ಯಕ್ರಮದಲ್ಲಿ ರಾಜೇಶ್ ಕೃಷ್ಣನ್ ಕೂಡ ಭಾಗಿಯಾಗಿದ್ದರು. ಅವರನ್ನು ಎಂದಿನಂತೆ ಈ ಶೋಗೆ ಸ್ವಾಗತಿಸಲಾಯಿತು.

  ಸ್ಪರ್ಧೆಯಲ್ಲಿ ಗೆದ್ದ ದರ್ಶನ್ ನಾರಾಯಣ್​​​ಗೆ ನಗದು ಬಹುಮಾನವನ್ನು ನೀಡಲಾಗಿದೆ. ಫಿನಾಲೆ ಸಡಗರಕ್ಕೆ ಮೆರುಗು ಕೊಟ್ಟ ಅಪ್ಪು ಬರ್ತ್‌ಡೇ ಸಂಭ್ರಮ ಹೆಚ್ಚು ಜನರನ್ನು ಮುಟ್ಟಿತ್ತು. ಈ ದಿನವನ್ನು ವಿಶೇಷವಾಗಿ ಆಚರಿಸಲಾಯಿತು. ಪುನೀತ್​ ರಾಜ್​ಕುಮಾರ್​ ಅವರ ಕಟೌಟ್​ ನಿಲ್ಲಿಸಲಾಗಿತ್ತು. 

   

  ಅಜ್ಮೀರ್ ರೈಲು ಅಪಘಾತದ ನಂತರ ಅನೇಕ ರೈಲುಗಳು ರದ್ದು…ಬದಲಾಗಿವೆ ಈ ಮಾರ್ಗಗಳು

   

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts