More

    ರಾಜಕೀಯಕ್ಕೆ ಅಖಾಡಕ್ಕೆ ಟಾಲಿವುಡ್ ನಟ! ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿಯಾಗಿ ಕಣಕ್ಕೆ?

    ಹೈದರಾಬಾದ್: ಬಿಗ್ ಬಾಸ್ ತೆಲುಗು’ ಸೀಸನ್ 7ರಲ್ಲಿ ವಿಜೇತರಾಗಿ ಇತಿಹಾಸ ಸೃಷ್ಟಿಸಿದ ರೈತನ ಮಗ ಪಲ್ಲವಿ ಪ್ರಶಾಂತ್‌ಗೆ ರಾಜಕೀಯ ಪ್ರವೇಶ ಮಾಡುತ್ತಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.

    ಇದನ್ನೂ ಓದಿ: ಮದ್ಯಪಾನ ಮಾಡಬೇಡಿ ಎಂದಿದ್ದಕ್ಕೆ ಪತ್ನಿಗೆ ಪೆಟ್ರೋಲ್ ಸುರಿದು ಹತ್ಯೆ ಮಾಡಿದ ಪತಿ

    ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ರೈತನ ಮಗ ಪಲ್ಲವಿ ಪ್ರಶಾಂತ್ ಅವರು ರಾಜಕೀಯಕ್ಕೆ ಪ್ರವೇಶ ಕುರಿತು ಸಾಕಷ್ಟು ಚರ್ಚೆಗಳು ಕೇಳಿ ಬಂದಿದೆ. ಪ್ರಶಾಂತ್​ ಅವರೇ ಯುವ ಸಮೂಹ ರಾಜಕೀಯ ಪ್ರವೇಶ ಮಾಡಿ ಸಮಾಜದಲ್ಲಿ ಬದಲಾವಣೆ ತರಬೇಕು ಎನ್ನುವ ಮಾತುಗಳನ್ನಾಡಿದ್ದಾರೆ. ಇದರಿಂದ ಬಿಗ್​ ಬಾಸ್​ ವಿನ್ನರ್​ ರಾಜಕೀಯ ಪ್ರವೇಶ ಖಚಿತ ಊಹಾಪೋಹಗಳು ಶುರುವಾಗಿದೆ. ಆದರೆ ಯಾವ ಪಕ್ಷ, ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬ ಇನ್ನೂ ತಿಳಿದು ಬಂದಿಲ್ಲ.

    ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಪ್ರಶಾಂತ್​, ನಮ್ಮ ಮೇಲೆ ನಮಗೆ ಮೊದಲು ನಂಬಿಕೆ ಇರಬೇಕು. ದೇವರ ಮೇಲೆ ನಂಬಿಕೆ ಇರುವವರು ಎಂದಿಗೂ ಭ್ರಷ್ಟರಾಗುವುದಿಲ್ಲ. ಏನೇ ಕಷ್ಟ ಬಂದರೂ ದೇವರು ಯಾವುದಾದರೂ ರೂಪದಲ್ಲಿ ಬಂದು ಕಾಪಾಡುತ್ತಾನೆ. ನಾವು ಕಷ್ಟಪಟ್ಟು ಮುಂದೆ ಸಾಗುತ್ತಿದ್ದರೆ ಹಲವು ಕಷ್ಟಗಳು, ಅಡೆತಡೆಗಳು ಎದುರಾಗುತ್ತವೆ ಅದೆಲ್ಲವನ್ನು ಎದುರಿಸಿ ಮೆಟ್ಟಿನಿಲ್ಲಬೇಕು ಎಂದಿದ್ದಾರೆ.

    ರಾಜಕೀಯಕ್ಕೆ ಅಖಾಡಕ್ಕೆ ಟಾಲಿವುಡ್ ನಟ! ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿಯಾಗಿ ಕಣಕ್ಕೆ?

    ನನ್ನ ಪರಿಶ್ರಮದಿಂದ ಯಶಸ್ಸು ಸಿಕ್ಕಿತು. ಎಷ್ಟೇ ಅಡೆತಡೆಗಳು ಎದುರಾದರು ಹೆದರುವುದಿಲ್ಲ, ಹಿಂದೆ ಸರಿಯುವುದಿಲ್ಲ. ಹೀಗೆ ನಿಲ್ಲುತ್ತೇನೆ. ರೈತನ ಮಗು ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಹುದು ಎಂದು ಪಲ್ಲವಿ ಪ್ರಶಾಂತ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಇನ್ನೂ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತೀರ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪ್ರಶಾಂತ್ ನಿಮ್ಮೆಲ್ಲರ ಆಶೀರ್ವಾದವಿದ್ದರೆ ಯಾವುದೂ ಅಸಾಧ್ಯವಲ್ಲ. ಯುವಜನತೆ ಎಚ್ಚೆತ್ತುಕೊಳ್ಳಬೇಕು,ನಾವೆಲ್ಲ ಒಂದು ಹೆಜ್ಜೆ ಮುಂದೆ ಹಾಕಬೇಕು ಬರಬೇಕು ಇದರಿಂದ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ ಎಂದಿದ್ದು, ಈ ಬಾರಿ ಚುನಾವಣೆಯಲ್ಲಿ ಕಣಕ್ಕಿಳಿಯುವ ಸುಳಿವು ನೀಡಿದ್ದಾರೆ.

    ತೆಲುಗು ಬಿಗ್​ಬಾಸ್ ಸೀಸನ್​ 7ರ​ ವಿನ್ನರ್ ಪಲ್ಲವಿ ಪ್ರಶಾಂತ್ ಅವರು ರಾಜಕಾರಣದತ್ತ ಅವರು ಮುಖ ಮಾಡಲಿದ್ದಾರೆ ಎಂಬ ಊಹಾಪೋಹ ಶುರುವಾಗಿದೆ. ‘ಬಿಗ್ ಬಾಸ್ ತೆಲುಗು’ ಸೀಸನ್ 7ರಲ್ಲಿ ವಿಜೇತರಾಗಿ ಇತಿಹಾಸ ಸೃಷ್ಟಿಸಿದ ರೈತನ ಮಗ ಪಲ್ಲವಿ ಪ್ರಶಾಂತ್‌ ಜೈಲು ಸೇರಿ ಬಿಡುಗಡೆಯಾಗಿದ್ದರು. ತೆಲಂಗಾಣದಲ್ಲಿ ತನ್ನದೇ ಆದ ಅಭಿಮಾನಿ ಬಳಗವನ್ನು ಹೊಂದಿರುವ ಪಲ್ಲವಿ ಪ್ರಶಾಂತ್‌ ರಾಜಕೀಯಕ್ಕೆ ಪ್ರವೇಶಿಸುತ್ತಾರಾ ಇಲ್ವ ಎಂಬುದು ಕಾದು ನೋಡಬೇಕಿದೆ.

    ಮಹಾಶಿವರಾತ್ರಿ ಮೆರವಣಿಗೆಯಲ್ಲಿ ವಿದ್ಯುತ್ ಸ್ಪರ್ಶಿಸಿ 14 ಮಕ್ಕಳ ಮೃತ್ಯು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts