ಚೆನ್ನೆಯಲ್ಲಿ ಭಾಷಾಭಿಮಾನ ಮೆರೆದ ಶ್ರೀಲೀಲಾ..ನೆಟ್ಟಿಗರು ಫಿದಾ!

srileela
Published on

ಚೆನ್ನೈ: ನಟಿ ಶ್ರೀಲೀಲಾ ತೆಲುಗು ಚಿತ್ರರಂಗದಲ್ಲಿ ಸತತ ಚಿತ್ರಗಳೊಂದಿಗೆ ಮುನ್ನುಗ್ಗುತ್ತಿದ್ದಾರೆ. ಇತ್ತೀಚೆಗೆ ಚೆನ್ನೈನಲ್ಲಿ ನಡೆದ ಕಾಲೇಜು ವಾರ್ಷಿಕೋತ್ಸವದಲ್ಲಿ ನಟ ಶಿವ ಕಾರ್ತಿಕೇಯನ್ ಜೊತೆಗೆ ಖಾಸಗಿ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಕಾಣಿಸಿಕೊಂಡು ವಿಶೇಷ ಆಕರ್ಷಣೆಯಾದರು. ಅಷ್ಟೇ ಅಲ್ಲ ಆಕೆ ತೆಲುಗು ಪ್ರೇಮ ಅಭಿಮಾನಿಗಳನ್ನು ಆಕರ್ಷಿಸುವಂತೆ ಮಾಡಿದೆ.

ಶ್ರೀಲೀಲಾ ಟಾಲಿವುಡ್‌ನಲ್ಲಿ ಕರ್ನಾಟಕದವರೇ ಆದ ಪೂಜಾ ಹೆಗ್ಡೆ, ರಶ್ಮಿಕಾ ಮಂದಣ್ಣ ಅವರಂತಹವರನ್ನು ಹಿಂದಿಕ್ಕಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಎಂಬ ಖ್ಯಾತಿ ಗಳಿಸಿದ್ದಾರೆ. ಗುಂಟೂರು ಕರಂ ಚಿತ್ರದಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದ ಶ್ರೀ ಲೀಲಾ ಪ್ರಸ್ತುತ ಪವನ್ ಕಲ್ಯಾಣ್ ಜೊತೆ ಉಸ್ತಾದ್ ಭಗತ್ ಸಿಂಗ್ ಚಿತ್ರದಲ್ಲಿ ಮಾತ್ರ ನಟಿಸುತ್ತಿದ್ದಾರೆ. ಅವರು ತಮ್ಮ ಡಾಕ್ಟರ್ ಕೋರ್ಸ್‌ನ ಅಂತಿಮ ಹಂತದಲ್ಲಿದ್ದ ಕಾರಣ ಚಲನಚಿತ್ರಗಳಿಂದ ವಿರಾಮ ತೆಗೆದುಕೊಂಡರು.

ಆದರೂ ಆಗಾಗ ಖಾಸಗಿ ಕಾರ್ಯಕ್ರಮಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದ ಈ ಮೋಹನಾಂಗಿ ಹಲವು ಆಭರಣ, ಬಟ್ಟೆ ಅಂಗಡಿಗಳಿಗೆ ರಾಯಭಾರಿಯಾಗಿ ಸಹಿ ಹಾಕಿದ್ದಾಳೆ. ಇದರ ಜೊತೆಗೆ ಜಾಹಿರಾತುಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ಚೆನ್ನೈನಲ್ಲಿ ಖಾಸಗಿ ವೈದ್ಯಕೀಯ ಸಂಸ್ಥೆ ಆಯೋಜಿಸಿದ್ದ ವಾರ್ಷಿಕೋತ್ಸವದಲ್ಲಿ ತಮಿಳಿನ ಸ್ಟಾರ್ ಹೀರೋ ಶಿವ ಕಾರ್ತಿಕೇಯನ್ ಜೊತೆಗೆ ಶ್ರೀಲೀಲಾ ಅತಿಥಿಯಾಗಿ ಕಾಣಿಸಿಕೊಂಡಿದ್ದು ವಿಶೇಷ ಆಕರ್ಷಣೆಯಾಗಿತ್ತು.

ಈ ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿ ಹಾಗೂ ವಿದ್ಯಾರ್ಥಿಗಳ ಗಮನವೆಲ್ಲ ಶ್ರೀಲೀಲಾ ಮೇಲಿತ್ತು. ಕಾರ್ಯಕ್ರಮ ನಡೆಯುವಷ್ಟು ಹೊತ್ತು ಅವರಲ್ಲಿ ತನ್ನ ನಗು, ಮತ್ತು ಆಕರ್ಷಕ ಮಾತುಗಳಿಂದ ಹೊಸ ಉತ್ಸಾಹ ತುಂಬಿದಳು. ನಾಯಕ ಶಿವ ಕಾರ್ತಿಕೇಯನ್ ಅವರೊಂದಿಗೆ ಗುಂಟೂರು ಕರಮ್ ಹಾಡಿಗೆ ನೃತ್ಯ ಮಾಡಿ ಮೆರಗು ನೀಡಿದರು.

ಅಷ್ಟೇ ಅಲ್ಲ, ಶಿವ ಕಾರ್ತಿಕೇಯನ್ ತೆಲುಗಿನಲ್ಲಿ ಮಾತನಾಡಲು ಪ್ರಯತ್ನಿಸುತ್ತಿದ್ದರು. ಆಗ ಶ್ರೀಲೀಲಾ ಉತ್ತೇಜಿಸಿ ಭಾಷಾಭಿಮಾನ ಮೆರೆದರು. ಈ ವಿಡಿಯೋಗಳು ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಕನ್ನಡ ಬಂದರೂ ಮಾತನಾಡಿದರೆ ಎಲ್ಲಿ ಅವಕಾಶಗಳು ತಪ್ಪುತ್ತವೋ, ಅಥವಾ ಅವಮಾನವೆಂದು ಭಾವಿಸುವವರಿಗೆ ಶ್ರೀಲೀಲಾ ಮಾದರಿಯಾಗಿ ನಿಲ್ಲುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net